ಕಡೆಗೂ ಪಾಕ್ ನೆರವಿಗೆ ಐಎಂಎಫ್… ಪಾಕ್ 3 ಬಿಲಿಯನ್ ಡಾಲರ್ ನೀಡಲು ಸಮ್ಮತಿ
Team Udayavani, Jul 1, 2023, 6:50 AM IST
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕತೆ ಹಳ್ಳಹಿಡಿದು, ಹಣದುಬ್ಬರ ವಿಪರೀತವಾಗಿ ಜನರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ಈ ಹೊತ್ತಿನಲ್ಲಿ, ಒಂದು ಸಂತೋಷದ ಸುದ್ದಿ ಸಿಕ್ಕಿದೆ. ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ) 3 ಬಿಲಿಯನ್ ಡಾಲರ್ ಸಾಲ ನೀಡಲು ಒಪ್ಪಿಕೊಂಡಿದೆ. ಶ್ರೀಲಂಕಾದಂತೆ ದಿವಾಳಿಯಂಚಿಗೆ ತಲುಪಿದ್ದ ಪಾಕಿಸ್ತಾನ, ತನ್ನನ್ನು ಉಳಿಸಿಕೊಳ್ಳಲು ಐಎಂಎಫ್ ಮೊರೆ ಹೋಗಿತ್ತು. ಆದರೆ ಐಎಂಎಫ್ ವಿಧಿಸಿದ್ದ ಷರತ್ತುಗಳಿಗೆ ಪಾಕ್ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಹತ್ತಿರಹತ್ತಿರ ಒಂದು ವರ್ಷದಿಂದ ಈ ತಕರಾರು ನಡೆದುಕೊಂಡು ಬಂದಿತ್ತು. ಇದೀಗ ಒಂದು ನಿಲುಗಡೆಗೆ ಬಂದಿದೆ.
ಬಾಹ್ಯ ಆರ್ಥಿಕ ಒತ್ತಡಗಳಿಂದ ಕುಸಿದಿರುವ ಪಾಕ್‌ಗೆ ತಕ್ಷಣ ನೆರವು ನೀಡಲಿದ್ದೇವೆ. ಐಎಂಎಫ್, ಪಾಕ್ ಸರ್ಕಾರದೊಂದಿಗೆ ಅಧಿಕಾರಿಗಳ ಮಟ್ಟದಲ್ಲಿ 9 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಜುಲೈ ಮಧ್ಯಭಾಗದಲ್ಲಿ ಅಂಗೀಕೃತಗೊಳ್ಳಬಹುದು ಎಂದು ಐಎಂಎಫ್ ಅಧಿಕಾರಿ ನಥನ್ ಪೋರ್ಟರ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಪಾಕ್‌ಗೆ 1 ಬಿಲಿಯನ್ ಡಾಲರ್ ಸಾಲ ನೀಡಲು ಚೀನಾ ತೀರ್ಮಾನಿಸಿತ್ತು. ಹೀಗೆ ನೋಡಿದರೆ ಪಾಕ್ ಸದ್ಯದ ಮಟ್ಟಿಗೆ ದಿವಾಳಿಯಾಗುವುದರಿಂದ ತಪ್ಪಿಸಿಕೊಳ್ಳಲು ಅವಕಾಶವಿದೆ. ವಿಶೇಷವೆಂದರೆ ಪಾಕ್ 2.5 ಬಿಲಿಯನ್ ಡಾಲರ್ ನೆರವನ್ನು ನಿರೀಕ್ಷಿಸುತ್ತಿತ್ತು. ಆದರೆ ಈಗ 3 ಬಿಲಿಯನ್ ಡಾಲರ್ ಪಡೆದುಕೊಳ್ಳುವ ಸಂತೋಷದಲ್ಲಿದೆ.
ಹಲವು ವರ್ಷಗಳಿಂದ ಪಾಕ್‌ನ ಆರ್ಥಿಕತೆ ಕುಸಿಯುತ್ತಲೇ ಇದೆ. ಇದರಿಂದ ಜನ ವಿಪರೀತ ಸಂಕಷ್ಟಕ್ಕೆ ಸಿಲುಕಿದ್ದರು. ಹಣದುಬ್ಬರವನ್ನು ಪಾಕ್ ಸರ್ಕಾರಕ್ಕೆ ತಡೆಯಲಾಗದ ಪರಿಣಾಮ ದಿನವಹಿ ಬದುಕಿಗೂ ಜನ ಪರದಾಡಲು ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.