40 ಸಾವಿರ ಉಗ್ರರ ನೆಲೆಯಾಗಿದೆ ಪಾಕ್
Team Udayavani, Jul 25, 2019, 6:00 AM IST
ವಾಷಿಂಗ್ಟನ್: ಪಾಕಿಸ್ಥಾನದಲ್ಲಿ ಈಗಲೂ 30,000ದಿಂದ 40,000 ಉಗ್ರವಾದಿಗಳಿದ್ದು, ಅವರೆಲ್ಲರೂ ಅಫ್ಘಾನಿಸ್ಥಾನ ಹಾಗೂ ಕಾಶ್ಮೀರದಲ್ಲಿ ಹೋರಾಡುವ ತರಬೇತಿ ಪಡೆದವರು’ ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ವಾಷಿಂಗ್ಟನ್ನಲ್ಲಿ ಅಮೆರಿಕ ಸಂಸದರ ಚಿಂತಕರ ಚಾವಡಿ ‘ಯು.ಎಸ್. ಇನ್ಸ್ಟಿಟ್ಯೂಟ್ ಆಫ್ ಪೀಸ್’ನಲ್ಲಿ ಮಾತನಾಡುವಾಗ ಈ ವಿಚಾರ ಹೊರಹಾಕಿದ್ದಾರೆ. ‘ಪಾಕ್ನ ಹಿಂದಿನ ಎಲ್ಲ ಸರಕಾರಗಳೂ ಭಯೋತ್ಪಾದಕರ ಬಗ್ಗೆ ಅಮೆರಿಕಕ್ಕೆ ಸುಳ್ಳು ಮಾಹಿತಿಗಳನ್ನೇ ನೀಡುತ್ತಾ ಬಂದಿವೆ. ವಿಶೇಷವಾಗಿ ಕಳೆದ 15 ವರ್ಷಗಳಲ್ಲಿ ಪಾಕಿಸ್ಥಾನದಲ್ಲಿರುವ 40 ಉಗ್ರ ಸಂಘಟನೆಗಳ ಮಾಹಿತಿ ಅಡಗಿಸಿಡಲಾಗಿದೆ’ ಎಂದು ಖಾನ್ ಆರೋಪಿಸಿದ್ದಾರೆ.
ಇಮ್ರಾನ್ ಹೇಳಿಕೆಗೆ ತಿರುಗೇಟು
ಪಾಕಿಸ್ಥಾನದ ಗುಪ್ತಚರ ಇಲಾಖೆ ಐಎಸ್ಐ ಸಹಾಯದಿಂದಲೇ ಅಮೆರಿಕಕ್ಕೆ ಉಗ್ರ ಒಸಾಮ ಬಿನ್ ಲಾಡೆನ್ನನ್ನು ಹತ್ಯೆಗೈಯ್ಯಲು ಸಾಧ್ಯವಾಗಿದ್ದು ಎಂದು ಇಮ್ರಾನ್ ಖಾನ್ ನೀಡಿದ್ದ ಹೇಳಿಕೆಗೆ ಅಮೆರಿಕದ ಗುಪ್ತಚರ ಇಲಾಖೆಯ (ಸಿಐಎ) ಮಾಜಿ ಮಹಾ ನಿರ್ದೇಶಕ ಡೇವಿಡ್ ಪೆಟ್ರಾಸ್ ತಿರುಗೇಟು ನೀಡಿದ್ದಾರೆ. ಬಿನ್ ಲಾಡೆನ್ ಪಾಕ್ನಲ್ಲಿದ್ದ ವಿಚಾರ ಐಎಸ್ಐಗೆ ತಿಳಿದಿರಲಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.