ತಂದೆಯ ಸಮ್ಮುಖದಲ್ಲೇ ಸಹೋದರಿಯ ಹತ್ಯೆಗೈದ ಸಹೋದರ.. ಇನ್ನೋರ್ವ ಸಹೋದರನಿಂದ ವಿಡಿಯೋ ಚಿತ್ರೀಕರಣ
Team Udayavani, Apr 1, 2024, 9:40 AM IST
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಂದೆಯ ಸಮ್ಮುಖದಲ್ಲೇ ಸಹೋದರನೋರ್ವ ತನ್ನ ಸಹೋದರಿಯ ಕತ್ತು ಹಿಸುಕಿ ಹತ್ಯೆಗೈದ ಅಮಾನವೀಯ ಘಟನೆ ನಡೆದಿದ್ದು ಇದರ ಜೊತೆಗೆ ಇನ್ನೋರ್ವ ಸಹೋದರ ಘಟನೆಯ ಚಿತ್ರೀಕರಣ ಮಾಡಿದ್ದಾನೆ ಎನ್ನಲಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಮರಿಯಾ ಬೀಬಿ ಎಂಬ ಯುವತಿಯನ್ನು ಆಕೆಯ ಸಹೋದರ ಮೊಹಮ್ಮದ್ ಫೈಜಲ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ವೇಳೆ ಸಹೋದರಿಯ ತಂದೆ ಅಲ್ಲೇ ಇದ್ದರೂ ಯಾವ ಸಹಾಯಕ್ಕೆ ಹೋಗಲಿಲ್ಲ. ಇತ್ತ ಓರ್ವ ಸಹೋದರ ತನ್ನ ಸಹೋದರಿಯ ಕತ್ತು ಹಿಸುಕಿ ಹತ್ಯೆಗೈಯುತಿದ್ದರೆ ಇನ್ನೋರ್ವ ಸಹೋದರ ಶೆಹಬಾಜ್ ತನ್ನ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದ ಎನ್ನಲಾಗಿದೆ. ಸದ್ಯ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಘಟನೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹತ್ಯೆ ಬಳಿಕ ಮಗನಿಗೆ ಕುಡಿಯಲು ನೀರು ಕೊಟ್ಟ ತಂದೆ:
ಸಹೋದರಿಯನ್ನು ಸಹೋದರ ಹತ್ಯೆಗೈಯುವ ವೇಳೆ ಅಲ್ಲೇ ಪಕ್ಕದಲ್ಲಿ ಇದ್ದ ತಂದೆ ಮಗಳ ಸಹಾಯಕ್ಕೆ ಹೋಗಲಿಲ್ಲ ಬದಲಾಗಿ ಹತ್ಯೆ ನಡೆದ ಬಳಿಕ ತನ್ನ ಮಗನಿಗೆ ಕುಡಿಯಲು ನೀರು ಕೊಟ್ಟಿದ್ದಾನೆ ಈ ದೃಶ್ಯ ಸೆರೆಯಾದ ವಿಡಿಯೋದಲ್ಲಿ ಸೆರೆಯಾಗಿದೆ.
ಸಹೋದರರ ಬಂಧನ:
ಹತ್ಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು. ಆರೋಪಿಗಳಾದ ಸತ್ತಾರ್ ಮತ್ತು ಫೈಜಲ್ ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ಘಟನೆ ಸಂಬಂಧ ಹೇಳಿಕೆ ನೀಡಿದ ಪೊಲೀಸರು ಇದೊಂದು ಮರ್ಯಾದಾ ಹತ್ಯೆ ಎಂದು ಹೇಳಿದ್ದಾರೆ. ಕೊಲೆಗೆ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅಪರಿಚಿತ ವ್ಯಕ್ತಿಯ ಜೊತೆ ವಿಡಿಯೋ ಕಾಲ್
ಹತ್ಯೆಯಾದ ಯುವತಿ ಅಪರಿಚಿತ ವ್ಯಕ್ತಿಯ ಜೊತೆಗೆ ಹಲವು ಬಾರಿ ವಿಡಿಯೋ ಕಾಲ್‌ನಲ್ಲಿ ಮಾತನಾಡುವುದನ್ನು ಸಹೋದರ ಫೈಝಲ್ ನೋಡಿರುವುದಾಗಿ ಹೇಳಲಾಗಿದ್ದು ಇದೆ ವಿಚಾರಕ್ಕೆ ಕೋಪಗೊಂಡು ಸಹೋದರೀಯ ಹತ್ಯೆಗೈದಿರುವುದಾಗಿ ಹೇಳಲಾಗಿದೆ. ಸದ್ಯ ಪೊಲೀಸರು ಸಹೋದರರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಪ್ರತಿ ವರ್ಷ ನೂರಾರು ಮರ್ಯಾದಾ ಹತ್ಯೆಗಳು ವರದಿಯಾಗುತ್ತಿವೆ. ಮಾನವ ಹಕ್ಕುಗಳ ಆಯೋಗದ ಪ್ರಕಾರ, 2022 ರಲ್ಲಿ ಪಾಕಿಸ್ತಾನದಲ್ಲಿ 316 ಮರ್ಯಾದಾ ಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: BJD: ಬಿಜೆಪಿ ಶಾಸಕ ಸುಕಾಂತ ನಾಯಕ್, ಕಾಂಗ್ರೆಸ್ ಮಾಜಿ ಶಾಸಕ ಬಿಸ್ವಾಲ್ ಬಿಜೆಡಿ ಸೇರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.