ಅಸೀಮಾನಂದ ಖುಲಾಸೆ: ಭಾರತದ ಉಪ ಹೈಕಮಿಶನರ್ಗೆ ಪಾಕ್ ಸಮನ್ಸ್
Team Udayavani, Mar 11, 2017, 10:54 AM IST
ಇಸ್ಲಾಮಾಬಾದ್ : ಸಂಝೋತಾ ಟ್ರೈನ್ ಬ್ಲಾಸ್ಟ್ ಕೇಸಿನ ಆರೋಪಿಯಾಗಿರುವ ಬಲ ಪಂಥೀಯ ಕಾರ್ಯಕರ್ತ, ಸ್ವಾಮಿ ಅಸೀಮಾನಂದ ಅವರನ್ನು ಖುಲಾಸೆಗೊಳಿಸಲಾಗಿರುವುದಕ್ಕೆ ತನ್ನ ಅತೃಪ್ತಿಯನ್ನು ತಿಳಿಸಲು ಪಾಕಿಸ್ಥಾನ ಭಾರತದ ಉಪ ಹೈಕಮಿಶನರ್ ಜೆ ಪಿ ಸಿಂಗ್ ಅವರನ್ನು ಕರೆಸಿಕೊಂಡಿದೆ.
ನಿನ್ನೆ ತಡರಾತ್ರಿ ಹೊರಡಿಸಲಾದ ಹೇಳಿಕೆಯಲ್ಲಿ ವಿದೇಶ ಕಾರ್ಯಾಲಯವು, ಭಾರತೀಯ ಡೆಪ್ಯುಟಿ ಹೈಕಮಿಶನರ್ ಜೆ ಪಿ ಸಿಂಗ್ ಅವರನ್ನು ದಕ್ಷಿಣ ಏಶ್ಯ ಮತ್ತು ಸಾರ್ಕ್ ಮಹಾ ನಿರ್ದೇಶಕರು ತಮ್ಮ ಕಾರ್ಯಾಲಯಕ್ಕೆ ಕರೆಸಿಕೊಂಡು ಅಜ್ಮೇರ್ ಷರೀಫ್ ಬ್ಲಾಸ್ಟ್ ಕೇಸಿನಲ್ಲಿ ಸ್ವಾಮಿ ಅಸೀಮಾನಂದ ಅವರನ್ನು ಖುಲಾಸೆಗೊಳಿಸಲಾಗಿರುವುದಕ್ಕೆ ಪಾಕ್ ಸರಕಾರದ ತೀವ್ರ ಅತೃಪ್ತಿಯನ್ನು ವ್ಯಕ್ತಪಡಿಸಿರುವುದು ತಿಳಿಸಿದೆ.
“2007ರ ಫೆಬ್ರವರಿಯಲ್ಲಿ ನಡೆದಿದ್ದ ಸಂಝೋತಾ ಎಕ್ಸ್ಪ್ರೆಸ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ತಾನೇ ಆಗಿದ್ದುದಾಗಿ ಸ್ವಾಮಿ ಅಸೀಮಾನಾಂದ ಅವರು ಬಹಿರಂಗವಾಗಿ ತಪ್ಪೊಪ್ಪಿಕೊಂಡಿದ್ದರು; ಭಯೋತ್ಪಾದ ಸಂಘಟನೆಯಾಗಿರುವ ಅಭಿನವ್ ಭಾರತ್ನ ಮುಖ್ಯಸ್ಥರಾಗಿರುವ ಅಂದಿನ ಹಾಲಿ ಭಾರತೀಯ ಸೇನಾಧಿಕಾರಿ ಕರ್ನಲ್ ಪುರೋಹಿತ್ ಅವರು ಸಂಝೋತಾ ಎಕ್ಸ್ಪ್ರೆಸ್ ಭಯೋತ್ಪಾದಕ ದಾಳಿಯಲ್ಲಿ ತನ್ನ ಸಹಚರನಾಗಿದ್ದರು ಎಂದು ಅಸೀಮಾನಂದ ಹೇಳಿದ್ದರು’ ಎಂಬುದಾಗಿ ಪಾಕ್ ಹೇಳಿದೆ.
2007ರ ಫೆ.18ರಂದು ಪಾಣಿಪತ್ನಲ್ಲಿ ನಡೆದಿದ್ದ ಸಂಝೋತಾ ಎಕ್ಸ್ಪ್ರೆಸ್ ಟ್ರೈನಿನ ಎರಡು ಬೋಗಿಗಳಲ್ಲಿ ನಡೆದಿದ್ದ ಸ್ಫೋಟದಿಂದಾಗಿ 68 ಮಂದಿ ಅಸುನೀಗಿದ್ದರು. ಪಾಕ್ ಹೇಳಿಕೆ ಪ್ರಕಾರ ಅಂದಿನ ಆ ಬ್ಲಾಸ್ಟ್ನಲ್ಲಿ 42 ಪಾಕ್ ಪ್ರಜೆಗಳು ಅಸುನೀಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Cricket: ಐಪಿಎಲ್ ಹರಾಜಿನಲ್ಲಿ 574 ಕ್ರಿಕೆಟಿಗರು
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Tennis: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ನಿವೃತ್ತಿ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.