Viral Video: ಅರೇಬಿಕ್ ಬರಹದ ಉಡುಪು ಧರಿಸಿದ್ದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಗುಂಪು
Team Udayavani, Feb 26, 2024, 10:53 AM IST
ಲಾಹೋರ್: ಮಹಿಳೆಯೊಬ್ಬರು ಅರೇಬಿಕ್ ಬರಹದ ಉಡುಪನ್ನು ಧರಿಸಿ ಬಂದಿದ್ದಕ್ಕಾಗಿ ಗುಂಪೊಂದು ತರಾಟೆಗೆ ತೆಗೆದುಕೊಂಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಲಾಹೋರ್‌ನಲ್ಲಿ ಮಹಿಳೆಯೊಬ್ಬರು ಅರೇಬಿಕ್ ಭಾಷೆಯ ಮುದ್ರಣದ ಬರಹವಿರುವ ಉಡುಪನ್ನು ಧರಿಸಿಕೊಂಡು ತನ್ನ ಪತಿಯೊಂದಿಗೆ ಶಾಪಿಂಗ್ ಮಾಲ್ ಗೆ ಬಂದಿದ್ದಾರೆ. ರೆಸ್ಟೋರೆಂಟ್ ನಲ್ಲಿ ಕೂತಿದ್ದ ವೇಳೆ ಗುಂಪೊಂದು ಬಂದು ಮಹಿಳೆಯನ್ನು ತರಾಟೆ ತೆಗೆದುಕೊಂಡಿದೆ.
ನಿಮ್ಮ ಬಟ್ಟೆಯ ಮೇಲೆ ಕುರಾನ್ ಶ್ಲೋಕಗಳಿವೆ. ನೀವು ಇದನ್ನು ಧರಿಸಿ ಸಮುದಾಯವನ್ನು ಅವಮಾನ ಮಾಡುತ್ತಿದ್ದೀರಿ ಎಂದು ಹೇಳಿ ಗುಂಪು ಆಕೆ ಧರಿಸಿದ್ದ ಅಂಗಿಯನ್ನು ತೆಗೆಯುವಂತೆ ಆಗ್ರಹಿಸಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ವೇಳೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಮಹಿಳಾ ಎಎಸ್ಪಿ ಸೈಯದಾ ಶೆಹರ್ಬಾನೊ ನಖ್ವಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿ ಮಹಿಳೆಯನ್ನು ಕಸ್ಟಡಿಗೆ ಕರೆದುಕೊಂಡು ಹೋಗಿದ್ದಾರೆ.
ಮಹಿಳೆ ತಾನು ಧರಿಸಿದ್ದ ಅಂಗಿಯು ಕೇವಲ ಅರೇಬಿಕ್ ಪದಗಳನ್ನು ಒಳಗೊಂಡಿದೆ. ಇದರಲ್ಲಿ ಯಾವುದೇ ಕುರಾನ್ ಶ್ಲೋಕಗಳ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದ್ದು, ಈ ಎಎಸ್ಪಿ ಸಮಯಕ್ಕೆ ಸರಿಯಾಗಿ ರಕ್ಷಿಸದಿದ್ದರೆ ಧರ್ಮದ ಹೆಸರಿನಲ್ಲಿ ಈ ಮಹಿಳೆಯನ್ನು ಹತ್ಯೆ ಮಾಡಲಾಗುತ್ತಿತ್ತು ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಇನ್ನು ಅನೇಕರು ಮಹಿಳೆಯ ಪರವಾಗಿ ಪೋಸ್ಟ್ ಹಾಕಿದ್ದಾರೆ. “ಮಹಿಳೆಯ ಅಂಗಿಯ ಮೇಲೆ ಅರೇಬಿಕ್ ಭಾಷೆಯಲ್ಲಿ ಹೆಸರುಗಳಿದ್ದ ಕಾರಣ ಜನರು ಸುತ್ತುವರೆದಿದ್ದರು. ಇದನ್ನು ಕೆಲವರು ಕುರಾನ್ ಶ್ಲೋಕಗಳೆಂದು ಹೇಳುತ್ತಿದ್ದಾರೆ. ವಾಸ್ತವವಾಗಿ, ಇದು ಕುರಾನ್ ಶ್ಲೋಕಗಳಲ್ಲ.ಇದು ಕೇವಲ ಸರಳವಾದ ಅರೇಬಿಕ್ ಪದಗಳು ಧರ್ಮಕ್ಕೆ ಸಂಬಂಧಿಸಿಲ್ಲ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಆನ್ಲೈನ್ ನಲ್ಲಿ ಸಿಗುವ ಈ ಬಟ್ಟೆಯ ಫೋಟೋವನ್ನು ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಮಹಿಳೆಯನ್ನು ಕಸ್ಟಡಿಗೆ ತೆಗೆದುಕೊಂಡ ನಂತರ, ಯಾರನ್ನೂ ಕೋಪಗೊಳಿಸುವ ಉದ್ದೇಶವಿಲ್ಲ ಎಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ಮೌಲ್ವಿಯೊಬ್ಬರ ಮುಂದೆ ಕ್ಷಮೆಯಾಚಿಸಿದ್ದಾರೆ.
“ASP Syeda Shehrbano Naqvi, the brave SDPO of Gulbarg Lahore, put her life in danger to rescue a woman from a violent crowd. For this heroic deed, the Punjab Police has recommended her name for the prestigious Quaid-e-Azam Police Medal (QPM), the highest gallantry award for law… pic.twitter.com/awHaIGVb9l
— Punjab Police Official (@OfficialDPRPP) February 25, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.