ಪಾಕಿಗೆ ಬೇಕು ಶಾಂತಿ ಮಾತುಕತೆ; ಭಾರತಕ್ಕೆ ಬೇಕಾಗಿಲ್ಲ; UK think tank


Team Udayavani, May 5, 2018, 4:21 PM IST

Wagha-Border-retrat-700.jpg

ಲಂಡನ್‌ : ”ಭಾರತದೊಂದಿಗೆ ಮಾತುಕತೆಯನ್ನು ಪುನರಾರಂಭಿಸುವ ಯತ್ನದಲ್ಲಿ ಪಾಕ್‌ ಸೇನಾ ಮುಖ್ಯಸ್ಥ ಕಮರ್‌ ಜಾವೇದ್‌ ಬಾಜ್ವಾ ಅವರು ಅನೇಕ ಪ್ರಯತ್ನಗಳನ್ನು ಮಾಡಿರುವ ಹೊರತಾಗಿಯೂ ಹೊಸದಿಲ್ಲಿ ಅವುಗಳನ್ನು ಸಾರಾಸಗಟು ತಿರಸ್ಕರಿಸಿ ಮಾತುಕತೆಯ ಬಾಗಿಲನ್ನು ಮುಚ್ಚಿಬಿಟ್ಟಿದೆ” ಎಂದು ಪ್ರಮುಖ ಬ್ರಿಟಿಷ್‌ ಚಿಂತನ ಚಾವಡಿಯೊಂದು ಹೇಳಿದೆ. 

ಭಾರತ-ಪಾಕ್‌ ಸಂಬಂಧಗಳ ಅವಲೋಕನ ಕುರಿತಾದ ತನ್ನ ಲೇಖನದಲ್ಲಿ ಬ್ರಿಟಿಷ್‌ ಚಿಂತನ ಚಾವಡಿ “ಭಾರತದೊಂದಿಗಿನ ಶಾಂತಿಗೆ ಮಾತುಕತೆಯೊಂದೇ ಉಪಾಯವಾಗಿದೆ” ಎಂಬ ಖಚಿತ ನಿಲುವನ್ನು ಪಾಕ್‌ ಸೇನಾ ನಾಯಕತ್ವ ತಳೆದಿರುವುದನ್ನು ಉಲ್ಲೇಖೀಸಿದೆ.

ರಾಯಲ್‌ ಯುನೈಟೆಡ್‌ ಸರ್ವಿಸಸ್‌ ಇನ್‌ಸ್ಟಿಟ್ಯೂಟ್‌ (ಆರ್‌ಯುಎಸ್‌ಐ – ರೂಸಿ), ಪಾಕ್‌ ಸೇನಾ ಮುಖ್ಯಸ್ಥ ಬಾಜ್ವಾ ಅವರು ಭಾರತದೊಂದಿಗೆ ಶಾಂತಿ ಮಾತುಕತೆಯನ್ನು ಪುನರಾರಂಭಿಸಲು ನಡೆಸಿರುವ ಹಲವಾರು ಬಗೆಯ ಯತ್ನಗಳನ್ನು ತನ್ನ ವಿಶ್ಲೇಷಣೆಯಲ್ಲಿ ಉಲ್ಲೇಖೀಸಿದೆ.

ರೂಸಿಯ ಪಾಕ್‌ ಸಂದರ್ಶನ ಫೆಲೋ ಆಗಿರುವ ಕಮಲ್‌ ಆಲಂ ಅವರು ಸಿದ್ದಪಡಿಸಿರುವ ವಿಶ್ಲೇಷಣಾತ್ಮಕ ಅಧ್ಯಯನ ವರದಿಯಲ್ಲಿ  ಬಾಜ್ವಾ ಹೊಸದಿಲ್ಲಿಯನ್ನು ತಲುಪಲು ನಡೆಸಿದ್ದ ಯತ್ನಗಳನ್ನು ವಿಶೇಷವಾಗಿ ಚರ್ಚಿಸಿದ್ದಾರೆ. ಆದರೆ ಆಲಂ ಅವರ ಅಭಿಪ್ರಾಯಗಳನ್ನು ತನ್ನ ನಿಲುವಲ್ಲ ಎಂಬುದನ್ನು ರೂಸಿ ಸ್ಪಷ್ಟಪಡಿಸಿದೆ. 

ಆಲಂ ಅವರು ತನ್ನ ವಿಶ್ಲೇಷಣಾತ್ಮಕ ಅಧ್ಯಯನದಲ್ಲಿ ಹೀಗೆ ಬರೆಯುತ್ತಾರೆ : ಪಾಕ್‌ ಸೇನಾ ಮುಖ್ಯ ಜನರಲ್‌ ಕಮರ್‌ ಜಾವೇದ್‌ ಬಾಜ್ವಾ ನೇತೃತ್ವದ ಪಾಕಿಸ್ಥಾನದ ಹಿರಿಯ ಅಧಿಕಾರಿಗಳು ಭಾರತದೊಂದಿಗಿನ ಮಿಲಿಟರಿ ಸಹಕಾರದಲ್ಲೇ ಉಭಯ ದೇಶಗಳ ಶಾಂತಿ ಮತ್ತು ಸಮೃದ್ದಿ ಸಾಧನೆಯ ಮಾರ್ಗವಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಕಳೆದೊಂದು ದಶಕದಿಂದ ಕಾಶ್ಮೀರದ ಉದ್ವಿಗ್ನತೆ ಮುಂದುವರಿದಿರುವ ಪಾಕ್‌ ಸೇನಾ ಜನರ್‌ಗಳು ಭಾರತದೊಂದಿಗೆ ಮಾತುಕತೆಯನ್ನು ಬಯಸಿದ್ದಾರೆ. “ಈ ನಿಟ್ಟಿನಲ್ಲಿ ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ; ಆದರೆ ಚೆಂಡು ಭಾರತದ ಅಂಗಣದಲ್ಲಿದೆ’ ಎಂದವರು ಅಭಿಪ್ರಾಯಪಡುತ್ತಾರೆ. 

ಪಾಕ್‌ ಸೇನೆ 2014ರಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಅಂಗವಾಗಿ ಕೈಗೊಂಡ ಝರ್‌ಬ್‌ ಎ ಅಜ್‌ಬ್‌ ಮತ್ತು 2017ರಲ್ಲಿ ಕೈಗೊಂಡ ರಾದ್‌ ಉಲ್‌ ಫ‌ಸಾದ್‌ ಉಪಕ್ರಮಗಳ ಫ‌ಲವಾಗಿ ಪಾಕಿಸ್ಥಾನದಲ್ಲೀಗ ಆಂತರಿಕ ಭದ್ರತೆಯು ಬಹುಮಟ್ಟಿಗೆ ಸುಧಾರಿಸಿದೆ ಎಂದು ಆಲಂ ವಿಶ್ಲೇಷಣೆ ಹೇಳುತ್ತದೆ. 

ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಕ್ಕೆ ಮರಳುವ ವಾಯು ಮಾರ್ಗದಲ್ಲಿ  ಶಿಷ್ಟಾಚಾರಗಳನ್ನೆಲ್ಲ ಮುರಿದು ಲಾಹೋರ್‌ನಲ್ಲಿ ದಿಢೀರನೇ ಇಳಿದು ಅಂದಿನ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರನ್ನು ಖಾಸಗಿಯಾಗಿ ಭೇಟಿಯಾದ ಒಂದೇ ವಾರದೊಳಗೆ ಪಾಕ್‌ ಉಗ್ರರು ಪಠಾಣ್‌ಕೋಟ್‌ನಲ್ಲಿನ ಭಾರತೀಯ ವಾಯು ಪಡೆ ನೆಲೆಯ ಮೇಲೆ ದಾಳಿ ನಡೆಸಿದ ತರುವಾಯ ಭಾರತ ಪಾಕ್‌ ಜತೆಗಿನ ಮಾತುಕತೆಯನ್ನು ಸಂಪೂರ್ಣವಾಗಿ ನಿಲ್ಲಿಸಿದೆ; ಭಯೋತ್ಪಾದನೆ ಮತ್ತು ಶಾಂತಿ ಮಾತುಕತೆಗಳು ಜತೆಜತೆಗೇ ಸರ್ವಥಾ ಸಾಗದು ಎಂಬ ಕಠಿನ ಸಂದೇಶವನ್ನು ಪಾಕಿಸ್ಥಾನಕ್ಕೆ ರವಾನಿಸಿದೆ ಮತ್ತು ಇಂದಿಗೂ ತನ್ನ ಅಂದಿನ ನಿಲುವಿಗೆ ಭಾರತ ಬದ್ಧವಾಗಿ ಉಳಿದಿದೆ ಎಂದು ಆಲಂ ತನ್ನ ವಿಶ್ಲೇಷಣೆಯಲ್ಲಿ ಹೇಳಿದ್ದಾರೆ. 

ಟಾಪ್ ನ್ಯೂಸ್

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.