ಭಾರತೀಯ ಸೇನಾನೆಲೆ ಧ್ವಂಸ;ಪಾಕ್ ನಿಂದ ಮತ್ತೊಂದು ನಕಲಿ ವಿಡಿಯೋ ರಿಲೀಸ್!
Team Udayavani, Jun 4, 2017, 1:59 PM IST
ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘಿಸಿದ ಭಾರತೀಯ ಸೇನಾಪಡೆಯ ಐವರು ಯೋಧರನ್ನು ಹತ್ಯೆ ಮಾಡಿದ್ದೇವೆ ಎಂದು ಪಾಕ್ ಸೇನೆ ಹೇಳಿಕೊಂಡ ಬೆನ್ನಲ್ಲೇ ಭಾನುವಾರ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿರುವುದಾಗಿ ಆರೋಪಿಸಿ ಪಾಕ್ ಸೇನೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಗಡಿಭಾಗದ ಟಟ್ಟಾ ಪಾನಿ ಸೆಕ್ಟರ್ ಬಳಿ ಭಾರತೀಯ ಸೇನಾಪಡೆ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯ ಐವರು ಯೋಧರನ್ನು ಹತ್ಯೆಗೈದಿರುವುದಾಗಿ ಪಾಕ್ ಹೇಳಿಕೊಂಡಿದ್ದು, ಇದೀಗ ಭಾರತೀಯ ಸೇನಾನೆಲೆ ಧ್ವಂಸ ಮಾಡಿರುವುದಾಗಿ ಪಾಕ್ ಬಿಡುಗಡೆ ಮಾಡಿರುವ 27 ಸೆಕೆಂಡ್ ವಿಡಿಯೋದಲ್ಲಿ ಹೇಳಿಕೊಂಡಿದೆ.
ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಟ್ವಿಟರ್‍ನಲ್ಲಿ ಈ ವಿಡಿಯೊ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಸೇನಾ ನೆಲೆ ಧ್ವಂಸಗೊಳಿಸಿರುವುದಾಗಿ ಆರೋಪಿಸಿ ಪಾಕ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು, ಆದರೆ ಅದು ನಕಲಿ ವಿಡಿಯೋ ಎಂದು ಭಾರತೀಯ ಸೇನಾ ಸ್ಪಷ್ಟನೆ ನೀಡಿತ್ತು. ಈ ವಿಡಿಯೋ ಕೂಡಾ ನಕಲಿ ಎಂದು ಸೇನಾಪಡೆ ಮೂಲಗಳು ಹೇಳಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.
Ref PR285/17
— Maj Gen Asif Ghafoor (@OfficialDGISPR) June 3, 2017
Video clip showing destruction of Indian posts on LOC by Pak Army in response to unprovoked Indian firing on innocent citizens. pic.twitter.com/ceErT8KzlC
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.