ಅಫ್ಘಾನಿಸ್ಥಾನದಲ್ಲಿ ಅಮೆರಿಕದ ಬೆನ್ನಿಗಿರಿದ ಪಾಕ್‌: ನಿವೃತ್ತ ಕರ್ನಲ್‌


Team Udayavani, Aug 24, 2018, 4:10 PM IST

us-army-700.jpg

ವಾಷಿಂಗ್ಟನ್‌ : ‘ಅಫ್ಘಾನಿಸ್ಥಾನದಲ್ಲಿ  ಪಾಕಿಸ್ಥಾನ ಅನೇಕ ವರ್ಷಗಳ ಕಾಲ ಅಮೆರಿಕದ ಬೆನ್ನಿಗೆ ಇರಿದು ನಿಧಾನ ರಕ್ತಸ್ರಾವದಿಂದ ಅದು (ಅಮೆರಿಕ) ಸಾಯುವಂತೆ ಮಾಡಿದೆ’ ಎಂದು ಅಮೆರಿಕದ ನಿವೃತ್ತ ಕರ್ನಲ್‌ ಹೇಳಿದ್ದಾರೆ. 

‘ಭಯೋತ್ಪಾದನೆಯನ್ನು ಮಟ್ಟ ಹಾಕುವುದಾಗಿ ನಂಬಿಸಿ ಪಾಕಿಸ್ಥಾನ ಕಳೆದ ಹದಿನೇಳು ವರ್ಷಗಳಿಂದ ಅಮೆರಿಕದಿಂದ ಬಿಲಿಯಗಟ್ಟಲೆ ಮಿಲಿಟರಿ ಮತ್ತು ಆರ್ಥಿಕ ನೆರವನ್ನು ಪಡೆದೂ ಅಮೆರಿಕವನ್ನು ತನ್ನ ಇಬ್ಬಗೆಯ ತಂತ್ರದಿಂದ ವಂಚಿಸಿದೆ; ಅಮೆರಿಕದ ಬೆನ್ನಿಗೆ ಇರಿದಿದೆ; ಮೋಸ ಮಾಡಿದೆ’ ಎಂದು ಅಮೆರಿಕದ ಹಿರಿಯ ಸೇನಾ ಕರ್ನಲ್‌ ಲಾರೆನ್ಸ್‌ ಸೆಲಿನ್‌ ಆರೋಪಿಸಿದ್ದಾರೆ. 

ಕರ್ನಲ್‌ ಸೆಲಿನ್‌ ಅಫ್ಘಾನಿಸ್ಥಾನ, ಉತ್ತರ ಇರಾಕ್‌ ಮತ್ತು ಪಶ್ಚಿಮ ಆಫ್ರಿಕದಲ್ಲಿ ಅಮೆರಿಕ ಸೇನೆಯ ಮಾನವೀಯ ನೆರವು ಅಭಿಯಾನದಲ್ಲಿ ದುಡಿದವರಾಗಿದ್ದಾರೆ. 

“ದ ಡೇಲಿ ಕಾಲರ್‌’ ಪತ್ರಿಕೆಯಲ್ಲಿ  ಬರೆದಿರುವ ಲೇಖನಲ್ಲಿ ಕರ್ನಲ್‌ ಸೆಲಿನ್‌ ಅವರು “ಪಾಕಿಸ್ಥಾನದ ಬೇಹು ಸಂಸ್ಥೆಯಾಗಿರುವ ಐಎಸ್‌ಐ 2001ರ ಅಕ್ಟೋಬರ್‌ನಲ್ಲಿ, ಅಮೆರಿಕ ಅಫ್ಘಾನ್‌ ಬಾಂಬಿಂಗ್‌ ಆರಂಭಿಸಿದ ತರುವಾಯದಲ್ಲಿ, ತಾಲಿಬಾನ್‌ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ” ಎಂದು ಹೇಳಿದ್ದಾರೆ.

‘ತಾಲಿಬಾನ್‌ ಮತ್ತು ಅಲ್‌ ಕಾಯಿದಾ ವಿರುದ್ಧದ ಅಮೆರಿಕ ಸಮರವನ್ನು ಪಾಕಿಸ್ಥಾನ ಎಷ್ಟು ಮಾತ್ರಕ್ಕೂ ಬೆಂಬಲಿಸಬಾರದು ಎಂದು ಅಂದಿನ ಪಾಕ್‌ ಅಧ್ಯಕ್ಷ ಜನರಲ್‌ ಪರ್ವೇಜ್‌ ಮುಶರ್ರಫ್ ಅವರು ಐಎಸ್‌ಐ ನಿರ್ದೇಶಕ ಲೆ| ಜ| ಮಹಮೂದ್‌ ಅಹ್ಮದ್‌ ಮತ್ತು ಇತರ ಸೇನಾ ಉನ್ನತಾಧಿಕಾರಿಗಳೊಂದಿಗಿನ ಸಭೆಯಲ್ಲಿ ಹೇಳಿದ್ದರು’ ಎಂದು ಕರ್ನಲ್‌ ಸೆಲಿನ್‌ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. 

ತಾಲಿಬಾನ್‌ ಮತ್ತು ಹಕ್ಕಾನಿ ಜಾಲದ ಉಗ್ರರನ್ನು ಮಟ್ಟ ಹಾಕುವುದಾಗಿ ಹೇಳಿ ಅಮೆರಿಕದಿಂದ ಬಿಲಿಯಗಟ್ಟಲೆ ಡಾಲರ್‌ ಸೇನಾ ಮತ್ತು ಆರ್ಥಿಕ ನೆರವನ್ನು ಪಡೆದ ಹೊರತಾಗಿಯೂ ಪಾಕ್‌ ಸರಕಾರ ಬೆನ್ನ ಹಿಂದೆ ಅವೇ ಉಗ್ರ ಸಂಘಟನೆಗಳಿಗೆ ಶಸ್ತ್ರಾಸ್ತ್ರ ನೆರವು ನೀಡಿ ಅಮೆರಿಕದ ವಿರುದ್ಧವೇ ಹೋರಾಡುವಂತೆ ಮಾಡುವ ಮೂಲಕ ಅಮೆರಿಕಕ್ಕೆ ಪಾಕಿಸ್ಥಾನ ದ್ರೋಹ ಬಗೆದಿದೆ; ಬೆನ್ನಿಗೆ ಇರಿದಿದೆ ಎಂದು ಕ| ಸೆಲಿನ್‌ ಬರೆದಿದ್ದಾರೆ. 

ಟಾಪ್ ನ್ಯೂಸ್

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Putin Apologizes: ಅಜರ್‌ಬೈಜಾನ್‌ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

Qatar: ಕತಾರ್‌ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

6

Karkala: ಲೈಸೆನ್ಸ್‌ ಇಲ್ಲದ ವ್ಯಾಪಾರಕ್ಕೆ ಕಡಿವಾಣ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.