ಕರಾಚಿ-ಪೇಶಾವರ ರೈಲು ಮಾರ್ಗ ನಿರ್ಮಾಣಕ್ಕೆ ಚೀನ-ಪಾಕ್ ಒಪ್ಪಿಗೆ
Team Udayavani, Oct 29, 2022, 7:35 AM IST
ಇಸ್ಲಾಮಾಬಾದ್: ಚೀನದ ಮಹಾತ್ವಾಕಾಂಕ್ಷೆಯ ಸಿಪಿಇಸಿ ಯೋಜನೆಯಡಿ ವಿಳಂಬಗೊಂಡಿದ್ದ ಪಾಕಿಸ್ತಾನದ ಕರಾಚಿ ಮತ್ತು ಪೇಶಾವರ ನಡುವಿನ ರೈಲು ಮಾರ್ಗವನ್ನು 1,000 ಕೋಟಿ ಅಮೆರಿಕನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ.
ನ.1ರಂದು ಉನ್ನತ ಮಟ್ಟದ ಸಮಿತಿಯೊಂದಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಚೀನಗೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ನಡೆಯುವ ಜಂಟಿ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಮಾಡಲಿವೆ.
ಮೂರನೇ ಅವಧಿಗೆ ಚೀನ ಅಧ್ಯಕ್ಷರಾಗಿ ಆಯ್ಕೆಯಾದ ಕ್ಸಿ ಜಿನ್‌ಪಿಂಗ್ ಅವರು ಅಧಿಕಾರ ವಹಿಸಿದ ನಂತರ ಭೇಟಿಯಾಗುವ ಮೊದಲ ವಿದೇಶಿ ನಾಯಕ ಷರೀಫ್ ಆಗಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.