ಐಎಂಎಫ್ -ಪಾಕ್ ಒಪ್ಪಂದ ವಿಫಲ; ಮತ್ತೆ ಮರಿಚಿಕೆಯಾದ ನರೆವು
Team Udayavani, Feb 11, 2023, 7:20 AM IST
ಇಸ್ಲಾಮಾಬಾದ್ :ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗಿನ ಸಿಬ್ಬಂದಿ ಹಂತದ ಒಪ್ಪಂದದ ಮಾತುಕತೆಯಲ್ಲಿ ವಿಫಲವಾಗಿದ್ದು, ದೇಶಕ್ಕೆ ತೀರ ಅಗತ್ಯವಾಗಿರುವ 1.1 ಶತಕೋಟಿ ಡಾಲರ್ ಆರ್ಥಿಕ ನೆರವು ಪಡೆದುಕೊಳ್ಳುವಲ್ಲಿ ಮತ್ತೆ ಸೋತಿದೆ.
ನತಾನ್ ಪೋರ್ಟರ್ ನೇತೃತ್ವದ ಐಎಂಎಫ್ ಆಯೋಗ ಜ.31 ರಿಂದ ಫೆ.9ರ ವರೆಗೆ ಪಾಕ್ ಭೇಟಿ ಕೈಗೊಂಡಿತ್ತು. ಈ ವೇಳೆ 19ನೇ ಪರಿಶೀಲನೆ ವರದಿ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿತ್ತು. ವರದಿ ಕುರಿತಂತೆ ಸಿಬ್ಬಂದಿ ಮಟ್ಟದ ಚರ್ಚೆ ನಡೆದಿದೆಯಾದರೂ,ನೆರವು ನೀಡುವ ಬಗ್ಗೆ ಯಾವುದೇ ಮಾಹಿತಿ ನೀಡದೆ, ಪಾಕ್‌ನಿಂದ ಆಯೋಗ ತೆರಳಿದೆ.
ಐಎಂಎಫ್, ಪಾಕ್ ಜತೆಗಿನ ಮಾತುಕತೆಯನ್ನು ಸವಿವರವಾಗಿ ಬಹಿರಂಗಪಡಿಸಿಲ್ಲ. ಆದಾಗ್ಯೂ, ಮುಂದಿನ ದಿನಗಳಲ್ಲಿ ವರ್ಚುವೆಲ್ ಮೂಲಕ ಮತ್ತೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.
ವಿದೇಶಿ ವಿನಿಮಯ ಪಾವತಿ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಐಎಂಎಫ್ ನೀಡುವ ಹಣಕಾಸು ನೆರವು ಅಗತ್ಯವಾಗಿದ್ದು,19ನೇ ಪರಿಶೀಲನೆ ವರದಿ ಪ್ರಕ್ರಿಯೆ ಪೂರ್ಣಗೊಂಡರಷ್ಟೇ ನೆರವು ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕದನ ವಿರಾಮ: 3 ಒತ್ತೆಯಾಳುಗಳ ಬಿಡುಗಡೆ ಬೆನ್ನಲ್ಲೇ 90 ಕೈದಿಗಳನ್ನು ಬಿಡುಗಡೆ ಮಾಡಿದ ಇಸ್ರೇಲ್
Israel-Hamas;ಅಂತೂ ಕದನ ವಿರಾಮ ಜಾರಿ: ಮೂವರು ಇಸ್ರೇಲಿಗರ ಬಿಡುಗಡೆ
Davos; ಇಂದು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಆರಂಭ
Donald Trump ಪ್ರಮಾಣವಚನ: ಭೋಜನಕೂಟದಲ್ಲಿ ಮುಖೇಶ್ ಮತ್ತು ನೀತಾ ಅಂಬಾನಿ
America: ಟ್ರಂಪ್ ಪ್ರಮಾಣದ ಬೆನ್ನಲ್ಲೇ ಅಕ್ರಮ ವಲಸಿಗರು ಹೊರಕ್ಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.