ವಿನಾಶದ ಅಂಚಿನಲ್ಲಿರುವ ಪಾಕ್ ದೇಗುಲಕ್ಕೆ ಸುಪ್ರೀಂ ಬೆಂಬಲ
Team Udayavani, Nov 25, 2017, 9:19 AM IST
ಇಸ್ಲಾಮಾಬಾದ್: ವಿನಾಶದ ಅಂಚಿನಲ್ಲಿರುವ, ಪಾಕಿಸ್ಥಾನದ ಅಲ್ಪಸಂಖ್ಯಾತ ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳ ಕತಾಸ್ ರಾಜ್ ದೇಗುಲದ ಸಂರಕ್ಷಣೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಪಂಜಾಬ್ ಸರಕಾರ ವನ್ನು ಪಾಕಿಸ್ಥಾನ ಸುಪ್ರೀಂ ಕೋರ್ಟ್ ತೀವ್ರ ವಾಗಿ ತರಾಟೆಗೆ ತೆಗೆದುಕೊಂಡಿದೆ.
ವಿಚಾರಣೆ ವೇಳೆ ಮುಖ್ಯ ನ್ಯಾಯ ಮೂರ್ತಿ, ರಾಷ್ಟ್ರೀಯ ಸ್ಮಾರಕವಾಗಿದ್ದರೂ ಕತಾಸ್ ದೇಗುಲದ ಅವನತಿ ಬಗ್ಗೆ ಗೊತ್ತಿದ್ದೂ ಸುಮ್ಮನಿರುವ ಪಂಜಾಬ್ ಸರಕಾರದ ನಡೆಯನ್ನು ಖಂಡಿಸಿದ್ದಾರೆ. ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಸಮಿತಿಯೊಂದನ್ನು ರಚಿಸಿ ಆ ಮೂಲಕ ದೇಗುಲದ ಸ್ಥಿತಿಗತಿ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ. ದೇಗುಲದ ಶಿಥಿಲಾ ವಸ್ಥೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ವಾದ ವರದಿ ಆಧರಿಸಿ ಪಾಕಿಸ್ಥಾನ ಸುಪ್ರೀಂ ಕೋರ್ಟ್, ಸ್ವಯಂಪ್ರೇರಿತ ದೂರು ದಾಖಲಿಸಿ ಕೊಂಡು ವಿಚಾರಣೆ ಆರಂಭಿಸಿದೆ.
ಯಾವುದೀ ದೇಗುಲ?: ಕತಾಸ್ ಶಿವ ದೇಗುಲವು ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂಗಳಿಂದ ಆರಾಧಿಸಲ್ಪಡುವ 2ನೇ ಪ್ರಮುಖ ದೇವಾಲಯ. ದೇಗುಲದ ಬಳಿ 20 ಅಡಿ ಆಳದ ಸರೋವರವಿದೆ. ಶಿವನು ತನ್ನ ಪತ್ನಿ “ಸತಿ’ಯನ್ನು ಕಳೆದು ಕೊಂಡಾಗ ಸುರಿಸಿದ ಕಣ್ಣೀರಿನಿಂದ ಈ ಸರೋವರ ನಿರ್ಮಾಣ ವಾಗಿದೆಯೆಂಬ ಪ್ರತೀತಿಯೂ ಇದೆ. ಆದರೆ, ಇತ್ತೀಚಿನ ದಶಕಗಳಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಅಣಬೆಗಳಂತೆ ಹೇರಳವಾಗಿ ಹುಟ್ಟಿಕೊಂಡ ಸಿಮೆಂಟ್ ಕಾರ್ಖಾನೆಗಳಿಂದ ದೇಗುಲಕ್ಕೆ ಹಾನಿಯಾಗುತ್ತಿದೆ. ಕಾರ್ಖಾನೆ ಗಳಲ್ಲಿ ಕೊರೆ ಯಲಾಗಿರುವ ಅಪಾರ ಸಂಖ್ಯೆಯ ಕೊಳವೆ ಬಾವಿಗಳಿಂದ ಸರೋವರ ಬರಿದಾಗಿದೆ. ಒಂದು ಕಾಲದಲ್ಲಿ ಸುತ್ತಲಿನ ಹಳ್ಳಿಗಳಿಗೆ ವರ್ಷ ಪೂರ್ತಿ ನೀರು ಪೂರೈಸುತ್ತಿದ್ದ ಈ ಸರೋವರ ಇಂದು ಸಂಪೂರ್ಣ ವಾಗಿ ಹಾಳಾಗಿದೆ. ಇದೇ ಈಗ ಕೋರ್ಟ್‌ನ ಗಮನ ಸೆಳೆದಿರುವ ಅಂಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Neuralink; ಮತ್ತೊಬ್ಬನ ಮೆದುಳಿಗೆ ಚಿಪ್ : ಏನಿದು ತಂತ್ರಜ್ಞಾನ?
Wildfires; ಲಾಸ್ ಏಂಜಲೀಸ್ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ
MUST WATCH
ಹೊಸ ಸೇರ್ಪಡೆ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್: ಸಭೆಯಲ್ಲಿ ಏನಾಯ್ತು?
Mudhol: ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.