“ಪಾಕ್ ಬಳಿ ಅಣು ಬಾಂಬ್ ಇರುವುದು ಮರೆಯದಿರಿ’; ಭಾರತಕ್ಕೆ ಎಚ್ಚರಿಕೆ ನೀಡಿದ ಪಾಕ್ ಸಚಿವೆ
Team Udayavani, Dec 19, 2022, 7:20 AM IST
ಇಸ್ಲಾಮಾಬಾದ್: “ಪಾಕಿಸ್ತಾನದ ಬಳಿ ಅಣು ಬಾಂಬ್ ಇರುವುದನ್ನು ಭಾರತ ಮರೆಯಬಾರದು,’ ಎಂದು ಪಾಕ್ ಸಚಿವೆ ಶಾಜಿಯಾ ಮರ್ರಿ ಬೆದರಿಕೆ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ಅವಹೇಳನಕಾರಿ ಹೇಳಿಕೆ ಸಮರ್ಥಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮಗೆ ಪರಮಾಣು ಮಾನ್ಯತೆ ಇರುವುದು ಮೌನವಾಗಿ ಇರುವುದಕ್ಕೆ ಅಲ್ಲ. ಅಗತ್ಯ ಸಂದರ್ಭದಲ್ಲಿ ಅದನ್ನು ಬಳಸಲು ನಾವು ಹಿಂದಡಿ ಹಾಕುವುದಿಲ್ಲ,’ ಎಂದಿದ್ದಾರೆ.
“ಮೋದಿ ಸರ್ಕಾರ ಯುದ್ಧ ಆರಂಭಿಸಿದರೆ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಸುಮ್ಮನಿರಲು ನಮಗೆ ಪರಮಾಣು ಮಾನ್ಯತೆ ನೀಡಿಲ್ಲ. ಹೇಗೆ ಉತ್ತರ ನೀಡಬೇಕೆಂಬುದು ಪಾಕಿಸ್ತಾನಕ್ಕೆ ತಿಳಿದಿದೆ. ನೀವು ಪದೇ ಪದೆ ಪಾಕಿಸ್ತಾನದ ವಿರುದ್ಧ ಅಪಾದನೆಗಳನ್ನು ಮಾಡಿದರೆ, ಪಾಕಿಸ್ತಾನ ಕೇಳುತ್ತಾ ಸುಮ್ಮನೆ ಕೂಡುವುದಿಲ್ಲ,’ ಎಂದು ಕಿಡಿಕಾರಿದ್ದಾರೆ.
ಆದರೆ ಇವರ ಎಚ್ಚರಿಕೆಯ ಹೇಳಿಕೆಯ ವಿರುದ್ಧ ಜಗತ್ತಿನಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮೆತ್ತಗಾಗಿರುವ ಅವರು, “ಪಾಕಿಸ್ತಾನ ಒಂದು ಜವಾಬ್ದಾರಿ ಇರುವ ಪರಮಾಣು ದೇಶವಾಗಿದೆ. ಭಯೋತ್ಪಾದನೆ ವಿರುದ್ಧ ಭಾರತಕ್ಕಿಂತ ಹೆಚ್ಚು ಪಾಕ್ ಹೋರಾಟ ನಡೆಸಿದೆ,’ ಎಂದು ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.