ಕಾಶ್ಮೀರ ವಿಚಾರದಲ್ಲಿ ಮತ್ತೆ ಮೂಗು ತೂರಿಸಿದ ಪಾಕ್
Team Udayavani, Dec 11, 2018, 6:00 AM IST
ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ಜನತೆಗೆ ರಾಜತಾಂತ್ರಿಕ, ರಾಜಕೀಯ ಹಾಗೂ ನೈತಿಕವಾಗಿ ಎಲ್ಲಾ ರೀತಿಯ ಬೆಂಬಲವನ್ನು ಪಾಕಿಸ್ತಾನ ಮುಂದುವರಿಸಲಿದೆ ಎಂದು ಪಿಎಂ ಇಮ್ರಾನ್ ಖಾನ್ ಹೇಳಿದ್ದಾರೆ. ಈ ಮೂಲಕ ಮತ್ತೆ ಭಾರತದ ಆಂತರಿಕ ವಿಚಾರ ದಲ್ಲಿ ಮೂಗು ತೂರಿಸಲು ಖಾನ್ ಯತ್ನಿಸಿದ್ದಾರೆ. ಸೋಮವಾರ ಮಾನವ ಹಕ್ಕುಗಳ ದಿನದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.
ಅಮೆರಿಕ ರಾಯಭಾರಿ ಕಿಡಿ: ಈ ನಡುವೆ, ಭಯೋತ್ಪಾದನೆಯನ್ನು ಪೋಷಿಸುತ್ತಾ ಬಂದಿರುವ ಪಾಕಿಸ್ತಾನಕ್ಕೆ ಒಂದೇ ಒಂದು ಪೈಸೆ ಧನ ಸಹಾಯ ವನ್ನೂ ಅಮೆರಿಕ ನೀಡಬಾರದು ಎಂದು ವಿಶ್ವ ಸಂಸ್ಥೆಯ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಆಗ್ರಹಿಸಿದ್ದಾರೆ.
ಭಾರತೀಯ ಅಧಿಕಾರಿ ಸಭಾತ್ಯಾಗ: ಸಾರ್ಕ್ ಅಧಿಕಾರಿಗಳ ಸಭೆ ಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಸಚಿವರು ಉಪಸ್ಥಿತರಿದ್ದರು ಎಂಬ ಕಾರಣಕ್ಕಾಗಿ ಪಾಕ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ರಾಜತಾಂತ್ರಿಕ ಅಧಿಕಾರಿ ಶುಭಂ ಸಿಂಗ್ ಸಭೆಯಿಂದ ಹೊರ ನಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Australia: ಜಾಲತಾಣ ಬಳಕೆಗೆ ಕನಿಷ್ಠ 16 ವರ್ಷ ಮಿತಿ ನಿಗದಿ?
US: ಮೊದಲ ದಿನವೇ ಜಗತ್ತಿಗೆ ಟ್ರಂಪ್ “ಎನರ್ಜಿ’ ಶಾಕ್!
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.