ಡಬಲ್ ಗೇಮ್ ಪಾಕಿಗೆ ಎಲ್ಲ ನೆರವು ನಿಲ್ಲಿಸುವೆವು: ಅಮೆರಿಕ ಖಡಕ್
Team Udayavani, Jan 3, 2018, 11:04 AM IST
ವಾಷಿಂಗ್ಟನ್ : ಪಾಕಿಸ್ಥಾನಕ್ಕೆ 25.50 ಕೋಟಿ ಡಾಲರ್ಗಳ ಮಿಲಿಟರಿ ನೆರವನ್ನು ಅಮಾನತುಗೊಳಿಸಿದ ಒಂದು ದಿನದ ತರುವಾಯ ಅಮೆರಿಕ “ಪಾಕಿಸ್ಥಾನ ಹಲವಾರು ವರ್ಷಗಳಿಂದ ಅಮೆರಿಕದ ವಿರುದ್ಧ ಡಬಲ್ ಗೇಮ್ ಆಡಿಕೊಂಡು ಬಂದಿದೆ’ ಎಂದು ಹೇಳಿದ್ದು ಆ ಮೂಲಕ ಆ ದೇಶಕ್ಕೆ ಮಿಲಿಟರಿ ನೆರವನ್ನು ತಡೆಹಿಡಿದ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ಈ ನುಡವೆ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ, ಭಾರತೀಯ ಮೂಲದವರಾಗಿರುವ ನಿಕ್ಕೀ ಹ್ಯಾಲಿ ಅವರು “ಪಾಕಿಸ್ಥಾನ ಇಷ್ಟು ವರ್ಷವೂ ಭಯೋತ್ಪಾದನೆಯನ್ನು ಮಟ್ಟ ಹಾಕುವುದಾಗಿ ಹೇಳಿಕೊಂಡು ಅಮೆರಿಕದ ಜತೆಗೂಡಿ ತೋರಿಕೆಯ ಕೆಲಸ ಮಾಡಿಕೊಂಡಿ ಬಂದಿದೆ; ಅದರ ಜತೆಗೇ ಅದು ತನ್ನ ನೆಲದಲ್ಲಿ ವಿವಿಧ ಉಗ್ರ ಸಂಘಟನೆಗಳನ್ನು ಪೋಷಿಸಿಕೊಂಡು ಆಸರೆ ನೀಡಿ ಅಮೆರಿಕದ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿದೆ’ ಎಂದು ಹೇಳಿದರು.
“ಪಾಕಿಸ್ಥಾನ ಈ ರೀತಿ ನಮ್ಮನ್ನು ಮೂರ್ಖರನ್ನಾಗಿಸಿ ಅಫ್ಘಾನಿಸ್ಥಾನದಲ್ಲಿನ ನಮ್ಮ ಸೈನಿಕರನ್ನೇ ಕೊಂದು ಮುಗಿಸುವ ಡಬಲ್ ಗೇಮ್ ಆಡುತ್ತಾ ಬಂದಿರುವುದನ್ನು ನಾವಿನ್ನು ಸಹಿಸಿಕೊಳ್ಳುವಂತಿಲ್ಲ. ಆದುದರಿಂದ ಪಾಕಿಸ್ಥಾನಕ್ಕೆ ನಾವು ಕೊಡುತ್ತಿರುವ ಎಲ್ಲ ನೆರವನ್ನು ನಿಲ್ಲಿಸಲು ಬಯಸಿದ್ದೇವೆ’ ಎಂದು ನಿಕ್ಕಿ ಹ್ಯಾಲಿ ಹೇಳಿದರು.
ಅಮೆರಿಕಕ್ಕೆ ಇರಾನ್ ಮತ್ತು ಉತ್ತರ ಕೊರಿಯದ ಬಳಿಕ ಮೂರನೇ ಕಳವಕಳಕಾರಿ ರಾಷ್ಟ್ರವಾಗಿರುವುದು ಪಾಕಿಸ್ಥಾನ; ಆದುದರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ಥಾನಕ್ಕೆ ನೀಡುವ ಎಲ್ಲ ನೆರವುಗಳನ್ನು ಶಾಶ್ವತವಾಗಿ ನಿಲ್ಲಿಸಲು ಬಯಸಿದ್ದಾರೆ’ ಎಂದು ಹ್ಯಾಲಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕದನ ವಿರಾಮ: 3 ಒತ್ತೆಯಾಳುಗಳ ಬಿಡುಗಡೆ ಬೆನ್ನಲ್ಲೇ 90 ಕೈದಿಗಳನ್ನು ಬಿಡುಗಡೆ ಮಾಡಿದ ಇಸ್ರೇಲ್
Israel-Hamas;ಅಂತೂ ಕದನ ವಿರಾಮ ಜಾರಿ: ಮೂವರು ಇಸ್ರೇಲಿಗರ ಬಿಡುಗಡೆ
Davos; ಇಂದು ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಆರಂಭ
Donald Trump ಪ್ರಮಾಣವಚನ: ಭೋಜನಕೂಟದಲ್ಲಿ ಮುಖೇಶ್ ಮತ್ತು ನೀತಾ ಅಂಬಾನಿ
America: ಟ್ರಂಪ್ ಪ್ರಮಾಣದ ಬೆನ್ನಲ್ಲೇ ಅಕ್ರಮ ವಲಸಿಗರು ಹೊರಕ್ಕೆ?
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.