ಹಣಕ್ಕೆ ಅಮೆರಿಕದ ಬಳಿ ಗೋಗರೆದ ಪಾಕಿಸ್ಥಾನ
ಚೀನ, ಐಎಂಎಫ್ ಆಯ್ತು, ಈಗ ಅಮೆರಿಕದೊಂದಿಗೆ ಪಾಕ್ ಮಾತುಕತೆ
Team Udayavani, Jul 26, 2023, 6:45 AM IST
ಇಸ್ಲಾಮಾಬಾದ್: ಆರ್ಥಿಕ ಕುಸಿತದಿಂದ ದಿವಾಳಿ ಯಂಚಿನಲ್ಲಿರುವ ಪಾಕಿಸ್ಥಾನ ಅನ್ಯದೇಶಗಳೊಂದಿಗೆ ಹಣಕ್ಕಾಗಿ ಗೋಗರೆಯುವುದನ್ನು ಮುಂದುವರಿಸಿದೆ. ಅಮೆರಿಕದ ವಿದೇಶಾಂಗ ಸಚಿವ ಆ್ಯಂಟೆನ್ ಬ್ಲಿಂಕೆನ್ರೊಂದಿಗೆ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ದೂರವಾಣಿ ಮೂಲಕ ಮಾತುಕತೆ ನಡೆಸಿ, ನೆರವು ನೀಡಿ ಬೇಡಿಕೊಂಡಿದ್ದಾರೆ. ಇದೇ ವೇಳೆ ಇಬ್ಬರೂ ಮುಖಂಡರು, ಅಫ್ಘಾನಿಸ್ಥಾನವೂ ಸೇರಿ ಕೆಲವು ಸ್ಥಳೀಯ ಸಂಗತಿಗಳ ಕುರಿತು ಪರಸ್ಪರ ಮಾತುಕತೆ ನಡೆಸಿದ್ದಾರೆ. ಪರಸ್ಪರ ಸಂಬಂಧಗಳನ್ನು ಹೆಚ್ಚಿಸಿ, ಶಾಂತಿ- ಅಭಿವೃದ್ಧಿಗಾಗಿ ಒಟ್ಟಿಗೆ ಶ್ರಮಿಸಲು ಒಪ್ಪಿಕೊಂಡಿದ್ದಾರೆ ಎಂದು ಪಾಕ್ ಮೂಲಗಳು ಹೇಳಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬ್ಲಿಂಕೆನ್ ಸ್ಪಷ್ಟವಾಗಿ ಏನು ಮಾತುಕತೆ ನಡೆಯಿತು ಎಂಬ ಸುಳಿವು ನೀಡಿ ದ್ದಾರೆ. “ನಾವು ಉತ್ಪಾದನಾಶೀಲವಾದ, ಪ್ರಜಾ ಪ್ರಭುತ್ವದ ಹಾದಿಯಲ್ಲಿರುವ, ಸಮೃದ್ಧ ಪಾಕಿಸ್ಥಾನಕ್ಕೆ ಬೆಂಬಲ ನೀಡುತ್ತೇವೆ. ಪಾಕಿಸ್ಥಾನದ ಆರ್ಥಿಕ ಚೇತರಿಕೆ ನಮ್ಮ ಅಗ್ರ ಆದ್ಯತೆ. ಆ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ’ ಎಂದು ಬ್ಲಿಂಕೆನ್ ಹೇಳಿಕೊಂಡಿದ್ದಾರೆ.
ಪ್ರಸ್ತುತ ಪಾಕಿಸ್ಥಾನದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ, ರಾಜಕೀಯ ಅಸ್ಥಿರತೆಯಿದೆ, ಬೆಲೆಗಳು ವಿಪರೀತ ಏರಿಕೆಯಾಗಿರುವುದರಿಂದ ಆರ್ಥಿ ಕವಾ ಗಿಯಂತೂ ಪರಿಸ್ಥಿತಿ ದುಸ್ತರವಾಗಿದೆ. ಅದು ಐಎಂ ಎಫ್ನಿಂದ ಸಾಲ ಕೇಳಿದ್ದರೂ ಅದಿನ್ನೂ ಕೈಸೇರಿಲ್ಲ. ಈ ನಡುವೆ ಚೀನದ ಬಳಿಯೂ ನೆರವಿಗಾಗಿ ಯಾಚನೆ ಮಾಡಿದೆ.
ಪಾಕಿಸ್ಥಾನಿಯರು ಭಿಕ್ಷಾಪಾತ್ರೆ ಎಸೆಯಬೇಕು!
ಒಂದು ಕಡೆ ಚೀನ, ಅಮೆರಿಕ, ಐಎಂಎಫ್ ಬಳಿ ಹಣ ಕೊಡಿ ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅಲೆಯುತ್ತಿದ್ದಾರೆ. ಇನ್ನೊಂದು ಕಡೆ ಪಾಕ್ ಸೇನಾಪಡೆಗಳ ಮುಖ್ಯಸ್ಥ ಸೈಯದ್ ಆಸಿಮ್ ಮುನೀರ್ ಮಾತನಾಡಿ ಪ್ರತೀ ಪಾಕಿ ಸ್ಥಾನಿಯರು ಭಿಕ್ಷಾಪಾತ್ರೆಯನ್ನು ಎಸೆಯಬೇಕು. ಸ್ವಾವಲಂಬಿಗಳಾಗಬೇಕು. ಪಾಕಿಸ್ಥಾನವು ಹೆಮ್ಮೆಯನ್ನು ಹೊಂದಿರುವ, ಪ್ರತಿಭಾವಂತರಿ ರುವ ದೇಶ ಎಂದು ವರ್ಣಿಸಿದ್ದಾರೆ. ಶೆಹಬಾಜ್ ನೆರವಿಗಾಗಿ ಅಂಗಾಲಾಚುತ್ತಿರುವ ನಡುವೆಯೇ ಮುನೀರ್ ನೀಡಿರುವ ಹೇಳಿಕೆ ಗಮನ ಸೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 95ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.