ವೆಚ್ಚ ನಿಯಂತ್ರಣಕ್ಕೆ ರಾಯಭಾರ ಕಚೇರಿಗಳಿಗೆ ಬೀಗ; ಇನ್ನೂ ಲಭ್ಯವಾಗಿಲ್ಲ ಐಎಂಎಫ್ ನೆರವು
ಮತ್ತೊಂದು ದುಸ್ಥಿತಿಯತ್ತ ಹೊರಳಿದ ಪಾಕ್ ಸರ್ಕಾರ
Team Udayavani, Feb 23, 2023, 7:30 AM IST
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಪಾಕಿಸ್ತಾನ ಈಗ ಇತರ ರಾಷ್ಟ್ರಗಳಲ್ಲಿ ಇರುವ ರಾಯಭಾರ ಕಚೇರಿಗಳನ್ನು ಮುಚ್ಚಲಿದೆ. ಅದಕ್ಕಾಗಿ ಪ್ರಧಾನಮಮಂತ್ರಿ ಶೆಹಬಾಜ್ ಷರೀಫ್ ಅವರ ಕಚೇರಿಯಿಂದಲೇ ಪ್ರಸ್ತಾವನೆ ರವಾನೆಯಾಗಿದೆ.
ವೆಚ್ಚ ಕಡಿತದ ಭಾಗವಾಗಿ ರಾಯಭಾರ ಕಚೇರಿಗಳಲ್ಲಿರುವ ಸಿಬ್ಬಂದಿ, ಖರ್ಚಿನ ಮೇಲೆ ಹತೋಟಿ, ಅಗತ್ಯ ಇಲ್ಲದ ರಾಷ್ಟ್ರಗಳಲ್ಲಿ ರಾಯಭಾರ ಕಚೇರಿ ಮುಚ್ಚುವ ಬಗ್ಗೆ ಅಭಿಪ್ರಾಯಗಳನ್ನು ಹಾಗೂ ಕಾರ್ಯ ಯೋಜನೆಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಸೂಚಿಸಿದ್ದಾರೆ.
ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ಸಲಹೆ ನೀಡಲು ಪ್ರಧಾನಿ ಶೆಹಬಾಜ್ ಷರೀಫ್ ರಾಷ್ಟ್ರೀಯ ಮಿತಿವ್ಯಯ ಸಮಿತಿ
(ಎನ್‌ಎಸಿ)ಯನ್ನು ರಚಿಸಿದ್ದಾರೆ. ಆ ಸಮಿತಿ ರಾಯಭಾರ ಕಚೇರಿ ಮುಚ್ಚುವ ಸಲಹೆ ನೀಡಿದೆ.
ಐಎಂಎಫ್ ನೆರವು ಇಲ್ಲ?
“ಪಾಕಿಸ್ತಾನ ಸರ್ಕಾರವು ಅರ್ಥ ವ್ಯವಸ್ಥೆ ತಳಹದಿ ಬಲಪಡಿಸುವ ನಿಟ್ಟಿನಲ್ಲಿ ಇನ್ನೂ ಕ್ರಮ ಕೈಗೊಳ್ಳಬೇಕು. ಸರಿಯಾದ ರೀತಿಯಲ್ಲಿ ತೆರಿಗೆ ಸಂಗ್ರಹವಾಗಬೇಕು. ಹೆಚ್ಚು ಆದಾಯ ಹೊಂದಿರುವವರು ಅದಕ್ಕೆ ಅನುಸಾರವಾಗಿಯೇ ತೆರಿಗೆ ಪಾವತಿಸಬೇಕು,’ ಎಂದು ಐಎಂಎಫ್ ಎಂ.ಡಿ. ಕ್ರಿಸ್ಟಲಿನಾ ಜಾರ್ಜಿಯೇವಾ ಹೇಳಿದ್ದಾರೆ.
ಈ ಮೂಲಕ ಪಾಕಿಸ್ತಾನಕ್ಕೆ ಐಎಂಎಫ್ ನೆರವು ಸಿಗುವುದು ಬಹುತೇಕ ಅನುಮಾನವಾಗಿದೆ. ತೀವ್ರವಾದ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ಐಎಂಎಫ್ ನೆರವಿನ ನಿರೀಕ್ಷೆಯಲ್ಲಿದೆ. ಈ ಹಿಂದೆ ಕೂಡ ಆರ್ಥಿಕ ದುಸ್ಥಿತಿ ಇದ್ದ ಸಂದರ್ಭದಲ್ಲಿ ಐಎಂಎಫ್ ಪಾಕಿಸ್ತಾನಕ್ಕೆ ನೆರವು ನೀಡಿದೆ. ಪ್ರಸ್ತುತ ತನ್ನ ಕೆಲವು ಷರತ್ತುಗಳನ್ನು ಪೂರೈಸಿದ ನಂತರವಷ್ಟೇ ನೆರವು ಎಂದು ಅದು ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.