ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧಕ್ಕೆ ಕತ್ತರಿ!
370 ರದ್ದತಿ ಬೆನ್ನಲ್ಲೇ ಭಾರತದ ವಿರುದ್ಧ ಪಾಕ್ ಸೇಡಿನ ಕ್ರಮ
Team Udayavani, Aug 7, 2019, 7:37 PM IST
![IN-PAK](https://www.udayavani.com/wp-content/uploads/2019/08/IN-PAK-620x368.jpg)
![IN-PAK](https://www.udayavani.com/wp-content/uploads/2019/08/IN-PAK-620x368.jpg)
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಅದನ್ನು ಭಾರತದೊಂದಿಗೆ ಸೇರ್ಪಡೆಗೊಳಿಸಿದ ಕ್ರಮದ ವಿರುದ್ಧ ಕ್ರುದ್ಧಗೊಂಡಿರುವ ಪಾಕಿಸ್ಥಾನ ಇದೀಗ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧಕ್ಕೆ ಕತ್ತರಿ ಹಾಕಲು ಮುಂದಾಗಿದೆ.
ಈ ಸಂಬಂಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ನಡೆಸಿದ ಉನ್ನತ ಮಟ್ಟದ ಭದ್ರತಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಾಕಿಸ್ಥಾನ ಸರಕಾರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಘೋಷಿಸಲಾಗಿದೆ. ತೆಗೆದುಕೊಂಡ ಕ್ರಮಗಳ ಬಗ್ಗೆ ಅದು ಪ್ರಕಟಿಸಿದ್ದು, ಹೀಗೆ ಹೇಳಿದೆ.
1. ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ಕೆಳಕ್ಕಿಳಿಸುವುದು
2. ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಯನ್ನು ಭಾರತಕ್ಕೆ ಕಳುಹಿಸುವುದು.
3. ಭಾರತದಲ್ಲಿರುವ ಪಾಕಿಸ್ತಾನಿ ರಾಯಭಾರಿಯನ್ನು ವಾಪಾಸ್ ಕರೆಸಿಕೊಳ್ಳುವುದು.
4. ದ್ವಿಪಕ್ಷೀಯ ವ್ಯಾಪಾರ-ವಹಿವಾಟು ರದ್ದು
5. ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಪರಿಶೀಲನೆ
6. 370 ರದ್ದುಗೊಳಿಸಿದ ಭಾರತದ ಕ್ರಮದ ವಿರುದ್ಧ ವಿಶ್ವಸಂಸ್ಥೆಗೆ ದೂರು ಸಲ್ಲಿಸುವುದು.
7. ಆಗಸ್ಟ್ 14ನ್ನು ಧೈರ್ಯ ಪ್ರದರ್ಶಿಸಿದ ಕಾಶ್ಮೀರಿಗಳೊಂದಿಗೆ ಏಕತಾ ದಿನವನ್ನಾಗಿ ಆಚರಿಸುವುದು.
ಇದರೊಂದಿಗೆ ಪಾಕ್ ಇನ್ನಷ್ಟು ರಾಜತಾಂತ್ರಿಕ ಕ್ರಮಕ್ಕೆ ಮುಂದಾಗಬಹುದು. ಮುಂದಿನ ದಿನಗಳಲ್ಲಿ ತನ್ನ ರಾಯಭಾರಿಯನ್ನು ಭಾರತದಿಂದ ವಾಪಸ್ ಕರೆಸಿಕೊಳ್ಳುವುದು ಮತ್ತು ಭಾರತದ ರಾಯಭಾರಿಯನ್ನು ತನ್ನ ದೇಶದಿಂದ ಹೊರಗಟ್ಟು ಕ್ರಮಕ್ಕೂ ಮುಂದಾಗಬಹುದು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-150x90.jpg)

ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
![Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ](https://www.udayavani.com/wp-content/uploads/2025/02/obama-150x80.jpg)
![Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ](https://www.udayavani.com/wp-content/uploads/2025/02/obama-150x80.jpg)
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
![Trump-musk](https://www.udayavani.com/wp-content/uploads/2025/02/Trump-musk-150x90.jpg)
![Trump-musk](https://www.udayavani.com/wp-content/uploads/2025/02/Trump-musk-150x90.jpg)
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
![Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹತ್ಯೆ](https://www.udayavani.com/wp-content/uploads/2025/02/Mexic-150x84.jpg)
![Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹತ್ಯೆ](https://www.udayavani.com/wp-content/uploads/2025/02/Mexic-150x84.jpg)
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
![India cuts import duty on American Bourbon Whiskey](https://www.udayavani.com/wp-content/uploads/2025/02/wisky-150x83.jpg)
![India cuts import duty on American Bourbon Whiskey](https://www.udayavani.com/wp-content/uploads/2025/02/wisky-150x83.jpg)
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ