ಆರ್ಥಿಕ ದೃಢತೆ ಮುಖ್ಯ; ಟ್ಯಾಂಕು, ಮಿಸೈಲು ದೇಶ ಉಳಿಸದು: ಪಾಕ್ ಸಚಿವ
Team Udayavani, May 22, 2018, 7:02 PM IST
ಇಸ್ಲಾಮಾಬಾದ್ : ”ಟ್ಯಾಂಕುಗಳು, ಮಿಸೈಲ್‌ಗಳು ದೇಶವನ್ನು ಉಳಿಸಲಾರವು; ಆರ್ಥಿಕವಾಗಿ ದೇಶ ಬಲಿಷ್ಠವಾಗುವುದು ಮುಖ್ಯ; ಅದಕ್ಕಾಗಿ ದೇಶದಲ್ಲಿ ಶಾಂತಿ, ಸ್ಥಿರತೆ ನೆಲೆಸುವುದು ಇನ್ನೂ ಅಗತ್ಯ” ಎಂದು ಪಾಕಿಸ್ಥಾನದ ಒಳಾಡಳಿತ ಸಚಿವ ಎಹಸಾನ್ ಇಕ್ಬಾಲ್ ಹೇಳಿದ್ದಾರೆ.
‘1990ರ ದಶಕದಲ್ಲಿ ಭಾರತದ ಆಗಿನ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಅವರು ಅಂದಿನ ಪಾಕ್ ಹಣಕಾಸು ಸಚಿವ ಸರ್ತಾಜ್ ಅಜೀಜ್ ಅವರಿಂದ ಆರ್ಥಿಕ ಸುಧಾರಣಾ ತಂತ್ರಗಾರಿಕೆಯ ಎರವಲು ಪಡೆದುಕೊಂಡು ಅದನ್ನು ಭಾರತದಲ್ಲಿ ಅನುಷ್ಠಾನಿಸಿ ಯಶಸ್ವಿಯಾದರು’ ಎಂದು ಪಾಕ್ ಸಚಿವ ಇಕ್ಬಾಲ್ ಹೇಳಿರುವುದನ್ನು “ದ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
‘ಬಾಂಗ್ಲಾದೇಶ ಕೂಡ ಸರ್ತಾಜ್ ಅವರ ಆರ್ಥಿಕ ಸುಧಾರಣಾ ತಂತ್ರಗಾರಿಕೆಯನ್ನು ಅನುಷ್ಠಾನಿಸಿ ಯಶಸ್ವಿಯಾಗಿದೆ. ದುರದೃಷ್ಟವಶಾತ್ ಪಾಕಿಸ್ಥಾನ ಮಾತ್ರ ತನ್ನದೇ ತಂತ್ರಗಾರಿಕೆಯನ್ನು ಅನುಷ್ಠಾನಿಸುವಲ್ಲಿ ವಿಫಲವಾಯಿತು; ದೇಶದಲ್ಲಿನ ರಾಜಕೀಯ ಅಸ್ಥಿರತೆಯ ಫಲವಾಗಿ ಪಾಕಿಸ್ಥಾನಕ್ಕೆ ಇಡಿಯ ಒಂದು ದಶಕವೇ ನಷ್ಟವಾಗಿ ಹೋಯಿತು’ ಎಂದು ಸಚಿವ ಇಕ್ಬಾಲ್ ಹೇಳಿದರು.
ಸಚಿವ ಇಕ್ಬಾಲ್ ಅವರು ಪಾಕಿಸ್ಥಾನದ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರವನ್ನು ಉದ್ಘಾಟಿಸಿ ಈ ಮಾತುಗಳನ್ನು ಹೇಳಿದರು.
”ಪಾಕಿಸ್ಥಾನಕ್ಕೆ ತನ್ನ ಆರ್ಥಿಕತೆಯನ್ನು ಟೇಕಾಫ್ ಮಾಡುವ ಮೊದಲ ಅವಕಾಶ 1960ರ ದಶಕದಲ್ಲಿ ಒದಗಿತ್ತು. ಅನಂತರ 90ರ ದಶಕದಲ್ಲಿ ಎರಡನೇ ಅವಕಾಶ ಪ್ರಾಪ್ತವಾಯಿತು. ಇದೀಗ ಮೂರನೇ ಅವಕಾಶ ಪಾಕ್ ಬಾಗಿಲನ್ನು ತಟ್ಟುತ್ತಿದೆ. ಪಾಕಿಸ್ಥಾನ ಈ ಹಿಂದೆ ರಾಜಕೀಯ ಅಸ್ಥಿರತೆಯಿಂದ ಮಾಡಿಕೊಂಡಂತೆ ಈ ಮೂರನೇ ಅವಕಾಶವನ್ನು ನಷ್ಟ ಮಾಡಿಕೊಳ್ಳಬಾರದು. ಆದದ್ದು ಆಗಿ ಹೋಗಿದೆ; ಇನ್ನು ಪುನಃ ಅದೇ ಆಗಬಾರದು” ಎಂದು ಸಚಿವ ಇಕ್ಬಾಲ್ ನುಡಿದರು.
‘ಪಾಕಿಸ್ಥಾನದ ಆರ್ಥಿಕಾಭಿವೃದ್ಧಿಗೆ ಶಾಂತಿ, ಸ್ಥಿರತೆ ಮತ್ತು ನಿರಂತರತೆ ನೆಲೆಗೊಳ್ಳುವುದು ಬಹಳ ಮುಖ್ಯ’ ಎಂದು ಇಕ್ಬಾಲ್ ಹೇಳಿದರು.
‘2013ರಲ್ಲಿ ಪಾಕಿಸ್ಥಾನ 2ಜಿ ವಯರ್‌ಲೆಸ್ ತಂತ್ರಜ್ಞಾನ ಬಳಸುತ್ತಿತ್ತು. ಆದರೆ ಈಗ 2018ರಲ್ಲಿ ಅದು 5ಜಿ ತಂತ್ರಜ್ಞಾನ ಉಪಯೋಗಿಸುವ ವಿಶ್ವದ ಮೊದಲ ಬಳಕೆದಾರರಲ್ಲಿ ಒಂದೆನಿಸಿದೆ’ ಎಂದು ಇಕ್ಬಾಲ್ ಹೇಳಿದರು.
ಆದರೆ ಪಾಕ್ ಸಚಿವ ಎಹಸಾನ್ ಇಕ್ಬಾಲ್ ಆಶಯಕ್ಕೂ, ಅವರ ದೇಶದ ಸೇನೆ, ಐಎಸ್‌ಐ ಮತ್ತು ಉಗ್ರರ ಆಶಯಕ್ಕೂ ಯಾವುದೇ ತಾಳಮೇಳ ಇಲ್ಲದಿರುವುದು ಇಡಿಯ ಜಗತ್ತಿಗೇ ತಿಳಿದಿರುವ ಸತ್ಯ ಎನ್ನದೇ ವಿಧಿಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.