‘ಸಾಹಬ್’ ಸಯೀದ್ ವಿರುದ್ಧ ಕೇಸ್ ಇಲ್ಲ : ಪಾಕಿಸ್ಥಾನ ಪ್ರಧಾನಿ
Team Udayavani, Jan 17, 2018, 11:28 AM IST
ಇಸ್ಲಾಮಾಬಾದ್ : ಮುಂಬಯಿ ಮೇಲಿನ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಜಮಾತ್ ಉದ್ ದಾವಾ ನಿಷೇಧಿತ ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಹಫೀಜ್ ಸಯೀದ್ ವಿರುದ್ಧ ದೇಶದಲ್ಲಿ ಯಾವುದೇ ಕೇಸುಗಳಿಲ್ಲ ಎಂದು ಹೇಳುವ ಮೂಲಕ ಪಾಕ್ ಪ್ರಧಾನಿ ಶಹೀದ್ ಖಕಾನ್ ಅಬ್ಟಾಸಿ ಅವರು ವಿವಾದವನ್ನು ಸೃಷ್ಟಿಸಿದ್ದಾರೆ ಮಾತ್ರವಲ್ಲದೆ ಉಗ್ರ ಸಯೀದ್‌ನನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ.
ಟಿವಿ ಗೆ ನೀಡಿದ ಸಂದರ್ಶನದಲ್ಲಿ ಪಾಕ್ ಪ್ರಧಾನಿ ಅಬ್ಟಾಸಿ ಅವರು “ಹಫೀಜ್ ಸಯೀದ್ ಸಾಹಬ್’ ಎಂದು ಸಂಬೋಧಿಸುವ ಮೂಲಕ ಮುಂಬಯಿ ದಾಳಿಯ ಸೂತ್ರಧಾರ ಉಗ್ರನಿಗೆ ಗೌರವ ಸಲ್ಲಿಸಿದ್ದಾರೆ.
ದೇಶದಲ್ಲಿ ಇಸ್ಲಾಮಿಕ ಕಾನೂನನ್ನು ಜಾರಿಗೆ ತರದಿರುವ ಪಾಕ್ ಸರಕಾರದ ವಿರುದ್ದ ಬಹಿರಂಗವಾಗಿ ಹಫೀಜ್ ಸಯೀದ್ ಟೀಕೆ ಮಾಡಿದ ಒಂದು ದಿನದ ತರುವಾಯ ಪಾಕ್ ಪ್ರಧಾನಿ ಅಬ್ಟಾಸಿ ಅವರು “ಹಫೀಜ್’ನನ್ನು “ಸಾಹಬ್’ ಎಂದು ಗೌರವದಿಂದ ಸಂಬೋಧಿಸಿರುವುದು ಗಮನಾರ್ಹವಾಗಿದೆ.
ಅಮೆರಿಕ 25.50 ಕೋಟಿ ಡಾಲರ್‌ಗಳ ಮಿಲಿಟರಿ ನೆರವನ್ನು ತಡೆಹಿಡಿದ ತತ್‌ಕ್ಷಣವೇ ಪಾಕ್ ಸರಕಾರ ಹಫೀಜ್ ಸಯೀದ್‌ನ ಜಮಾತ್ ಉದ್ ದಾವಾ ಸಂಘಟನೆಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಇದಕ್ಕೆ ಮುನ್ನ ಜೆಯುಡಿ ಲಾಹೋರ್‌ನಲ್ಲಿ ತನ್ನ ಮಿಲಿ ಮುಸ್ಲಿಂ ಲೀಗ್ (ಎಂಎಂಎಲ್) ರಾಜಕೀಯ ಪಕ್ಷದ ಮೊದಲ ಕಚೇರಿಯನ್ನು ಆರಂಭಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ
ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.