ಇಮ್ರಾನ್ ಖಾನ್ ವಿವಾದ
Team Udayavani, Dec 23, 2018, 6:50 AM IST
ಲಾಹೋರ್: “ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ನರೇಂದ್ರ ಮೋದಿ ಸರಕಾರಕ್ಕೆ ನಾನು ತೋರಿ ಸಿಕೊಡುತ್ತೇನೆ’ ಎಂದು ಹೇಳುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಬುಲಂದ್‌ಶಹರ್ ಘಟನೆ ಕುರಿತು ನಟ ನಾಸಿರುದ್ದೀನ್ ಶಾ ಹೇಳಿಕೆ ವಿವಾದವಾದ ಬೆನ್ನಲ್ಲೇ ಖಾನ್ ಈ ಹೇಳಿಕೆ ನೀಡಿದ್ದಾರೆ. ಲಾಹೋರ್‌ನಲ್ಲಿ ಮಾತನಾಡಿದ ಖಾನ್, ನಮ್ಮ ಸರಕಾರವು ಧಾರ್ಮಿಕ ಅಲ್ಪಸಂಖ್ಯಾತರ ಅನುಕೂಲಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಸಮಾನ ನಾಗರಿಕರನ್ನಾಗಿ ನೋಡಲಾ ಗುತ್ತಿಲ್ಲ. ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಮೋದಿ ಸರಕಾರಕ್ಕೆ ನಾನು ತೋರಿಸಿಕೊಡುತ್ತೇನೆ ಎಂದಿದ್ದಾರೆ.