Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
ಇಸ್ಲಾಮಾಬಾದ್‌ನಲ್ಲಿ ಘರ್ಷಣೆ: ನಾಲ್ವರ ಸಾವು, 1000ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ ಪೊಲೀಸರು, ಖೈಬರ್ ಪಖ್ತೂಂಖ್ವಾ ಪ್ರಾಂತದಲ್ಲಿ ಮತ್ತೆ ಘರ್ಷಣೆ
Team Udayavani, Nov 28, 2024, 4:05 AM IST
ಇಸ್ಲಾಮಾಬಾದ್: ಚುನಾವಣ ಅಕ್ರಮ, ಜೈಲಲ್ಲಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ಗಾಗಿ 3 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಸೇನೆ ಮತ್ತು ಪೊಲೀ ಸರು ಯಶಸ್ವಿಯಾಗಿ ಮಟ್ಟ ಹಾಕಿದ್ದಾರೆ.
ಮಂಗಳವಾರ ರಾತ್ರಿ ಖಾನ್‌ರ ಪಿಟಿಐ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರು ಮತ್ತು ಸೇನೆ ನಡುವೆ ಭಾರೀ ಘರ್ಷಣೆ ನಡೆದು ಪಿಟಿಐನ ನಾಲ್ವರು ಕಾರ್ಯಕ ರ್ತರು ಅಸುನೀಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಂಗಳವಾರ ಮಧ್ಯರಾತ್ರಿ ಇಸ್ಲಾಮಾಬಾದ್‌ನ ಡಿ-ಚೌಕ್ ಪ್ರದೇಶದಲ್ಲಿ ಭಾರೀಪ್ರಮಾಣ ದಲ್ಲಿ ಘರ್ಷಣೆ ನಡೆದಿದ್ದು, 1,000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಇನ್ನು ಇಮ್ರಾನ್ ಪತ್ನಿ ಬೂಶ್ರಾ ಬಿಬಿ ಹಾಗೂ ಖೈಬರ್ ಪಖ್ತೂಂಖ್ವಾ ಸಿಎಂ ಅಲಿ ಅಮಿನ್ ಗಂದಾಪುರ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದರಾದರೂ ಮಾನ್ಸೇಹ್ರಾ ಪಟ್ಟಣದಲ್ಲಿದ್ದಾರೆ ಎಂದು ಪಿಟಿಐ ಸ್ಪಷ್ಟಪಡಿಸಿದೆ.
“ಸರಕಾರದ ಕ್ರೂರತೆಯನ್ನು ಗಮನ ದಲ್ಲಿಟ್ಟುಕೊಂಡು, ನಾವು ನಮ್ಮ ಶಾಂತಿ ಯುತ ಪ್ರತಿಭಟನೆಯನ್ನು ಸ್ಥಗಿತ ಗೊಳಿ ಸುತ್ತಿದ್ದೇವೆ. ಭವಿಷ್ಯದಲ್ಲಿ ಖಾನ್ ಸೂಚನೆಗೆ ಅನುಗುಣವಾಗಿ ಮುಂದಿನ ನಿರ್ಧಾರಗಳನ್ನು ಪ್ರಕಟಿಸಲಾಗುವುದು’ ಎಂದು ಪಿಟಿಐ ಹೇಳಿದೆ.
ಪಾಕಿಸ್ಥಾನದಲ್ಲಿ ಮತ್ತೆ ಘರ್ಷಣೆ: 10 ಸಾವು, 10 ಮಂದಿಗೆ ಗಾಯ
ಪೇಶಾವರ: ಪಾಕಿಸ್ಥಾನದ ಗಲಭೆಗ್ರಸ್ತ ಖೈಬರ್ ಪಖ್ತೂಂಖ್ವಾ ಪ್ರಾಂತದಲ್ಲಿ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದ್ದು, 10 ಮಂದಿ ಸಾವಿಗೀಡಾಗಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ಈ ಘರ್ಷಣೆ ನಡೆಯುತ್ತಿದೆ.
ಅಫ್ಫಾನಿಸ್ಥಾನಕ್ಕೆ ಹೊಂದಿಕೊಂಡು ಇರುವ ಗಡಿ ಜಿಲ್ಲೆ ಕುರ್ರಂ ಜಿಲ್ಲೆಯಲ್ಲಿ ಹೊಸತಾಗಿ ಘರ್ಷಣೆಗಳು ನಡೆದಿವೆ. ಕಳೆದ ಶುಕ್ರವಾರ ಕುರ್ರಂ ಜಿಲ್ಲೆಯಲ್ಲಿ 2 ಗುಂಪುಗಳ ನಡುವೆ ಘರ್ಷಣೆ ಶುರುವಾಗಿತ್ತು. ಕಳೆದ ವಾರ ನಡೆದಿದ್ದ ಗಲಭೆಯಲ್ಲಿ 37 ಮಂದಿ ಅಸುನೀಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharashtra Election: ಇವಿಎಂ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಘಾಡಿ ಪ್ಲಾನ್!
Parliment Session: ಅದಾನಿ ಲಂಚ ಆರೋಪ ಗದ್ದಲ: ಕಲಾಪ ಮುಂದಕ್ಕೆ
Cyber Crime: ಸೈಬರ್ ವಂಚನೆ ತಡೆಗೆ ಕೇಂದ್ರದಿಂದ 6.69 ಲಕ್ಷ ಸಿಮ್‌ಗಳಿಗೆ ನಿರ್ಬಂಧ
Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್ ಗಾಂಧಿ
Cyclone Fengal: ಭಾರೀ ಮಳೆಗೆ ಮುಳುಗಿದ ತಮಿಳುನಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.