ಪಾಕ್ ಪಂಜಾಬ್ ವಿಧಾನಸಭೆಯಲ್ಲಿ ಘಟನೆ: ಸ್ಪೀಕರ್‌ಗೆ ಕಪಾಳಮೋಕ್ಷ
Team Udayavani, Apr 17, 2022, 7:55 AM IST
ಇಸ್ಲಾಮಾಬಾದ್: ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ವಿಧಾನಸಭೆಯಲ್ಲಿ ಶನಿವಾರ, ಇಮ್ರಾನ್ ಖಾನ್ ನೇತೃತ್ವದ ಇಮ್ರಾನ್ ಖಾನ್‌ರವರ ತೆಹ್ರೀಕ್-ಎ- ಇನ್ಸಾನ್ (ಪಿಟಿಐ) ಪಕ್ಷದ ಶಾಸಕರು, ಸ್ಪೀಕರ್ ದೋಸ್ತ್ ಮೊಹಮ್ಮದ್ ಮಜಾರಿ ಯವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಪಂಜಾಬ್ ಪ್ರಾಂತ್ಯಕ್ಕೆ ನೂತನ ಮುಖ್ಯ ಮಂತ್ರಿಗಳನ್ನು ಆಯ್ಕೆ ಮಾಡುವ ಸಂಬಂಧ ಶನಿವಾರ ವಿಶೇಷ ಕಲಾಪವನ್ನು ಕರೆಯಲಾಗಿತ್ತು. ಆಗ, ಪಿಟಿಐ ಸದಸ್ಯರು ಇತ್ತೀಚೆಗೆ, ತಮ್ಮದೇ ಪಕ್ಷದ ಸದಸ್ಯರು ವಿಪಕ್ಷಗಳ ಜತೆಗೆ ಕೈ ಜೋಡಿಸಿ ಕೇಂದ್ರ ದಲ್ಲಿದ್ದ ಇಮ್ರಾನ್ ಖಾನ್ ಸರಕಾರವನ್ನು ಉರುಳಿಸಿದ ಕುರಿತಾಗಿ ಕಿಡಿಕಾರ ತೊಡಗಿ ದರು. ಇವರನ್ನು ನಿಯಂತ್ರಿಸಲು ಮುಂದಾದ ಸ್ಪೀಕರ್ ವಿರುದ್ಧ ಸಿಟ್ಟಿಗೆದ್ದ ಪಿಟಿಐ ಸದಸ್ಯರು, ತಮ್ಮ ಡೆಸ್ಕ್ಗಳಲ್ಲಿ ನೀರು ಕುಡಿಯಲು ಇಟ್ಟಿದ್ದ ಲೋಟಗ ಳನ್ನು ಸ್ಪೀಕರ್ ಕಡೆಗೆ ಎಸೆದರು.
ಇದನ್ನೂ ಓದಿ:ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿ ಸಾಗರ ಫೋಟೋಗ್ರಾಫರ್ ಕ್ಲಿಕ್!
ಇನ್ನೂ ಕೆಲವರು ಸ್ಪೀಕರ್ ಆಸನದ ಕಡೆಗೆ ಧಾವಿಸಿ ಬಂದು, ಸ್ಪೀಕರ್‌ಗೆ ಇರುವ ಸಾಂವಿಧಾನಿಕ ಘನತೆಯನ್ನೂ ಮರೆದು ಅವರ ಮೇಲೆ ನೇರವಾಗಿ ಹಲ್ಲೆಗೆ ಮುಂದಾ ದರು. ಈ ಸಂದರ್ಭದಲ್ಲಿ, ಸ್ಪೀಕ ರ್ ರವರಿಗೆ ಕಪಾಳಮೋಕ್ಷವೂ ಆಯಿತು!
ಇನ್ನೂ ಕೆಲವರು ಅವರ ತಲೆಗೂದಲನ್ನು ಹಿಡಿದುಕೊಂಡು ಎಳೆದಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪಿಟಿಐನ ಮೂವರು ಶಾಸಕರನ್ನು ಬಂಧಿಸಲಾಗಿದೆ.
ಮುಖ್ಯಮಂತ್ರಿ ಆಯ್ಕೆ : ಪಿಟಿಐ ಶಾಸಕರ ತೀವ್ರ ಗಲಾಟೆಯ ನಡುವೆಯೂ ಪಂಜಾಬ್ ಪ್ರಾಂತ್ಯಕ್ಕೆ ನೂತನ ಮುಖ್ಯಮಂತ್ರಿಯಾಗಿ ಪಿಎಂಎನ್-ಎಲ್ ಪಕ್ಷದ ಹಮ್ಜಾ ಶಹಬಾಜ್ ಅವರು ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.