ಪಾಕಿಸ್ತಾನ, ಸೌದಿ ಜನತೆಗೂ ಅಮೆರಿಕ ವೀಸಾ ಡೌಟು

Team Udayavani, Jan 29, 2017, 3:45 AM IST

28-NT-1.jpg

ವಾಷಿಂಗ್ಟನ್‌: ಆರು ಇಸ್ಲಾಮಿಕ್‌ ರಾಷ್ಟ್ರಗಳ ಜನರಿಗೆ ಅಮೆರಿಕ ಪ್ರವೇಶಿಸಲು ನಿರ್ಬಂಧ ಹೇರಿದ್ದ ಬೆನ್ನಲ್ಲೇ ಇತರೆ ಮುಸ್ಲಿಮ್‌ ದೇಶಗಳಿಗೂ ಆತಂಕ ಶುರುವಾಗಿದೆ. ಮುಂದೆ ಪಾಕಿಸ್ತಾನ, ಅಫ್ಘಾನಿಸ್ತಾನ, ಸೌದಿ ಅರೇಬಿಯಾ ದೇಶಗಳ ಪ್ರಜೆಗಳಿಗೂ ಅಮೆರಿಕ ವೀಸಾ ಸಿಗುವ ಸಾಧ್ಯತೆ ಕ್ಷೀಣವಾಗಿದೆ.

ಎಬಿಸಿ ಸಂದರ್ಶನದಲ್ಲಿ ಈ ಬಗ್ಗೆ ಮುನ್ಸೂಚನೆ ನೀಡಿರುವ ಟ್ರಂಪ್‌, “ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಸೌದಿ ಅರೇಬಿಯಾ ಮಂದಿಗೆ ಯಾಕೆ ಅಮೆರಿಕದೊಳಗೆ ಬಿಟ್ಟುಕೊಳ್ಳಬೇಕು? ಅಮೆರಿಕಕ್ಕೆ ಇವರಿಂದ ಆತಂಕ ಇದೆ ಎಂದಾದರೆ ಇಲ್ಲಿನ ಒಂದಿಂಚು ಜಾಗದಲ್ಲೂ ಅವರಿರಲು ಯೋಗ್ಯರಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

ಟ್ರಂಪ್‌ ಅಧಿಕಾರ ಸ್ವೀಕರಿಸಿದ ಈ ಐದಾರು ದಿನಗಳಲ್ಲಿ ಇಸ್ಲಾಮಿಕ್‌ ರಾಷ್ಟ್ರಗಳ ವಿರುದ್ಧ ಸಮರ ನಿರಂತರ ಮುಂದುವರಿದಿದೆ. ದೇಶದಲ್ಲಿ ಇಸ್ಲಾಮಿಕ್‌ ಉಗ್ರವಾದವನ್ನು ಮಟ್ಟಹಾಕಲು ಟ್ರಂಪ್‌ ಶನಿವಾರ ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ. “ವಿದೇಶಿ ಉಗ್ರರಿಂದ ಅಮೆರಿಕ ರಕ್ಷಣೆ’ ಎಂಬ ಆದೇಶ ಇದಾಗಿದ್ದು, ಅಮೆರಿಕಕ್ಕೆ ಆಗಮಿಸುವ ಪ್ರಮುಖ ಇಸ್ಲಾಮಿಕ್‌ ದೇಶವಾಸಿಗಳ ವಿರುದ್ಧ ನಿರ್ಬಂಧವೂ ಇದಾಗಿದೆ. “2001, ಸೆ.11ರ ದಾಳಿಯ ನಂತರ ಅಮೆರಿಕದಲ್ಲಿ ನಡೆದ ಹಲವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಇಸ್ಲಾಮಿಕ್‌ ದೇಶದರೇ ಹೆಚ್ಚು ಭಾಗಿಯಾಗಿದ್ದಾರೆ. ಇಲ್ಲಿಗೆ ಪ್ರವಾಸಿಗರಾಗಿ, ವಿದ್ಯಾರ್ಥಿಯಾಗಿ, ಉದ್ಯೋಗ ವೀಸಾ ಪಡೆದು ಅಥವಾ ನಿರಾಶ್ರಿತ ಶಿಬಿರದ ಯೋಜನೆಯ ಲಾಭ ಪಡೆದು ಆಗಮಿಸುವವರು ಈ ನೆಲಕ್ಕೆ ದ್ರೋಹ ಬಗೆಯುತ್ತಿದ್ದಾರೆ’ ಎಂದು ದೂರಿದ್ದಾರೆ.

ವಲಸೆ ವಿರೋಧಿ ನೀತಿಗೆ ಜುಕರ್‌ಬರ್ಗ್‌ ಟೀಕೆ
ಇಸ್ಲಾಮಿಕ್‌ ರಾಷ್ಟ್ರಗಳ ಮೇಲೆ ನೂತನ ಅಮೆರಿಕ ಅಧ್ಯಕ್ಷರು ವಿಧಿಸಿರುವ ನಿರ್ಬಂಧಕ್ಕೆ ದೇಶದಲ್ಲಿ ವಿರೋಧದ ಕೂಗುಗಳೂ ಕೇಳಿಬಂದಿವೆ. ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌, “ನಾವು ಈ ದೇಶವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಿರುವುದು ನಿಜ. ಹಾಗಂತ ಎಲ್ಲರನ್ನೂ ಅನುಮಾನಿಸುವುದರಲ್ಲಿ ಅರ್ಥವಿಲ್ಲ. ಯಾರು ಅಪರಾಧದ ಹಿನ್ನೆಲೆಯಲ್ಲಿದ್ದಾರೋ ಅಂಥವರ ಮೇಲಷ್ಟೇ ಕ್ರಮ ತೆಗೆದುಕೊಳ್ಳುವುದು ಉತ್ತಮ’ ಎಂದು ಟ್ರಂಪ್‌ಗೆ ಸಲಹೆ ನೀಡಿದ್ದಾರೆ.

“ನಿರಾಶ್ರಿತರಿಗೂ ಜಾಗ ಕೊಟ್ಟರೆ ತಪ್ಪೇನಿಲ್ಲ. ಯಾರು ಸಹಾಯ ಬಯಸಿ ಬರುತ್ತಾರೋ ಅಂಥವರ ಮೇಲೆ ಅನುಕಂಪ ಇಟ್ಟುಕೊಳ್ಳಬೇಕು. ಅಮೆರಿಕ ಏನೂಂತ ಗೊತ್ತಾಗುವುದೇ ಈ ವಿಚಾರದಲ್ಲಿ. ನಿರಾಶ್ರಿತರನ್ನು ಒಂದು ದಶಕದ ಹಿಂದೆಯೇ ನಿರ್ಬಂಧಿಸಿದ್ದರೆ ನನ್ನ ಪತ್ನಿ ಪ್ರಿಸಿಲ್ಲಾ ಅಮೆರಿಕ ಪ್ರವೇಶಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಇದು ನನ್ನ ಕುಟುಂಬದ ವಿಚಾರ ಅಂತ ನಾನು ಪ್ರಸ್ತಾಪಿಸುತ್ತಿಲ್ಲ. ಕೆಲವು ವರ್ಷಗಳ ಹಿಂದೆಯೇ ನಾನು ಇದನ್ನು ಆಲೋಚಿಸಿದ್ದೆ. ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ನನ್ನ ಅನೇಕ ಸಹಪಾಠಿಗಳಿಗೆ ಸೂಕ್ತ ದಾಖಲೆಗಳೇ ಇರಲಿಲ್ಲ. ಆದರೆ, ಅವರೆಲ್ಲ ಮುಂದೆ ದೇಶ ಕಟ್ಟುವವರೇ. ಅಮೆರಿಕ ಇಂದು ಬೃಹತ್‌ ಆಗಿ ಬೆಳೆದಿದ್ದರೆ ಅದಕ್ಕೆ ಹೊರಗಿನವರೇ ಕಾರಣ. ರಕ್ಷಣೆ ನೆಪದಲ್ಲಿ ಯಾರಿಗೂ ಭಯ ಹುಟ್ಟಿಸಬಾರದು’ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.