ಪಿಟಿಪಿ ನಾಯಕ ಮೆಹ್ಸೂದ್ ಈಗ ಜಾಗತಿಕ ಉಗ್ರ
Team Udayavani, Jul 18, 2020, 8:48 AM IST
ವಿಶ್ವಸಂಸ್ಥೆ: ಪಾಕಿಸ್ಥಾನದ ತೆಹ್ರಿಕ್-ಇ-ತಾಲಿ ಬಾನ್(ಟಿಟಿಪಿ) ಉಗ್ರ ಸಂಘಟನೆಯ ನಾಯಕ ನೂರ್ ವಾಲಿ ಮೆಹ್ಸೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ ವಿಶ್ವಸಂಸ್ಥೆ ಶುಕ್ರವಾರ ಆದೇಶ ಹೊರಡಿಸಿದೆ. ಅಲ್‌ಖೈದಾ ಉಗ್ರ ಸಂಘಟನೆಯ ಪರವಾಗಿ ಕೆಲಸ ಮಾಡುವ ಇತರೆ ಸಂಘಟನೆಗಳಿಗೆ ಹಣಕಾಸು ನೆರವು ಒದಗಿಸಿದ, ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ ಮತ್ತು ದಾಳಿ ನಡೆಸಲು ನೆರವಾದ ಕಾರಣಕ್ಕಾಗಿ ಈ ಕ್ರಮ ಕೈಗೊಂಡಿರುವುದಾಗಿ ವಿಶ್ವಸಂಸ್ಥೆ ತಿಳಿಸಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಐಎಸ್‌ಐಎಲ್ ಮತ್ತು ಅಲ್‌ಖೈದಾ ನಿರ್ಬಂಧ ಸಮಿತಿಯು 42ವರ್ಷದ ಮೆಹ್ಸೂದ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ್ದು, ಪರಿಣಾಮ ಆತನ ಆಸ್ತಿಪಾಸ್ತಿಗಳು ಜಪ್ತಿಯಾಗ ಲಿದ್ದು, ಪ್ರಯಾಣಕ್ಕೂ ನಿರ್ಬಂಧ ಹೇರಲಾಗು ತ್ತದೆ. 2018ರ ಜೂನ್‌ನಲ್ಲಿ ಮೆಹ್ಸೂದ್‌ನನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್‌ನ ನಾಯಕನೆಂದು ಘೋಷಿಸಲಾಗಿತ್ತು. ಟಿಟಿಪಿ ಮಾಜಿ ನಾಯಕ ಮೌಲಾನಾ ಫಜುಲ್ಲಾ ಸಾವಿನ ನಂತರ ಆತನ ಸ್ಥಾನಕ್ಕೆ ಮೆಹ್ಸೂದ್‌ನನ್ನು ನೇಮಕ ಮಾಡಲಾಗಿತ್ತು. 2011ರ ಜುಲೈ 29ರಂದು ಟಿಟಿಪಿಯನ್ನು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಿತ್ತು.
ನೂರ್ ವಾಲಿಯ ನೇತೃತ್ವದಲ್ಲಿ ಟಿಟಿಪಿ ಉಗ್ರ ಸಂಘಟನೆಯು ಪಾಕಿಸ್ಥಾನದಲ್ಲಿ ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದೆ. ಅಲ್ಲದೆ, 2010ರ ಮೇ 1ರಂದು ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆದ ಬಾಂಬ್ ದಾಳಿ ಯತ್ನದ ಹಿಂದೆಯೂ ಈ ಸಂಘಟನೆಯ ಕೈವಾಡವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.