ಕೋವಿಡ್ ಸೋಂಕು ನಿಯಂತ್ರಣಕ್ಕೆ ‘ಸ್ಮಾರ್ಟ್ ಲಾಕ್ ಡೌನ್’ ನತ್ತ ಪಾಕಿಸ್ತಾನ ಚಿತ್ತ..?!
Team Udayavani, Apr 22, 2021, 12:25 PM IST
ಕರಾಚಿ : ಪಾಕಿಸ್ತಾನದದಲ್ಲಿ ಅತ್ಯಂತ ಗಂಭೀರವಾದ ಕೋವಿಡ್ 19 ಪರಿಸ್ಥಿತಿಯಿಂದಾಗಿ, ಇಮ್ರಾನ್ ಖಾನ್ ಸರ್ಕಾರವು ಕೋವಿಡ್ ನಿಯಂತ್ರಣ ಮಾಡಲು ದೇಶದ ಪ್ರಮುಖ ನಗರಗಳಲ್ಲಿ ಲಾಕ್ ಡೌನ್ ವಿಧಿಸಲು ಮುಂದಾಗಿದೆ.
ಇದನ್ನು ಪಾಕಿಸ್ತಾನದ ಯೋಜನೆ, ಅಭಿವೃದ್ಧಿ ಮತ್ತು ಸ್ಪೆಷಲ್ ಇನಿಶಿಯೇಟಿವ್ಸ್ ಸಚಿವ ಅಸಾದ್ ಉಮರ್ ತಿಳಿಸಿದ್ದಾರೆ.
“ನಿಮ್ಮನ್ನು ಮತ್ತು ನಿಮ್ಮ ಸಹಚರರನ್ನು ನೋಡಿಕೊಳ್ಳಿ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ, ಕೋವಿಡ್ 19 ಪರಿಸ್ಥಿತಿಯ ತಿವ್ರತೆಯನ್ನು ಅರ್ಥಮಾಡಿಕೊಳ್ಳಬೇಕೆಂದು ಸಚಿವರು ದೇಶದ ಜನತೆಯನ್ನು ಉಮರ್ ಒತ್ತಾಯಿಸಿದರು ಎಂದು ಸುದ್ದಿ ಸಂಸ್ಥೆ ಡಾನ್ ವರದಿ ಮಾಡಿದೆ.
ಓದಿ : Covid ಹೆಚ್ಚಳ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಕುಸಿತ, 14,220ಕ್ಕೆ ತಲುಪಿದ ನಿಫ್ಟಿ
“ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬೇಕಾಗಿದೆ. ವೈರಸ್ ವೇಗವಾಗಿ ಹರಡುತ್ತಿದೆ ಮತ್ತು ನಮ್ಮ ಆಸ್ಪತ್ರೆಗಳು ತುಂಬುತ್ತಿವೆ ನಾವು ಈಗ ಕಾರ್ಯನಿರ್ವಹಿಸದಿದ್ದರೆ, ಲಾಕ್ ಡೌನ್ ಮಾಡುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆ ಇಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಪ್ರಮುಖ ನಗರಗಳನ್ನು ಲಾಕ್ ಡೌನ್ ಮಾಡುವ ಮೊದಲು ಕೆಲವು ದಿನಗಳ ಗಡಿ ಇದೆ ಎಂದು ಉಮರ್ ಹೇಳಿದ್ದು,. ಆರೋಗ್ಯ ಸಚಿವರು ಹಾಗೂ ತಜ್ಞ ವೈದ್ಯರ ನಡುವೆ ಒಂದು ಸುತ್ತಿನ ಸಮಾಲೋಚನೆಯನ್ನು ಮಾಡಬೇಕಿದೆ. ಇನ್ನು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಮ್ಮ ಆರೋಗ್ಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಉಮರ್ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ‘ನಮಗೆ ಈಗ ನಾಯಕತ್ವ ಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್ (ಎನ್ ಸಿ ಒ ಸಿ) ಕೂಡ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಲಾಕ್ ಡೌನ್ ವಿಧಿಸುವ ಸಾಧ್ಯತೆಯಿದೆ.
ಇನ್ನು, ಪಾಕಿಸ್ತಾನದಲ್ಲಿ ದಿನ ನಿತ್ಯ ಕೋವಿಡ್ ಸೋಂಕು ಹಠಾತ್ ಬೆಳವಣಿಗೆಯಾಗುತ್ತಿರುವ ಹಿನ್ನಲೆಯಲ್ಲಿ, ಕರಾಚಿಯ ಅಧಿಕಾರಿಗಳು ಮೇ 5 ರವರೆಗೆ ಮೂರು ಪ್ರದೇಶಗಳಲ್ಲಿ ಸ್ಮಾರ್ಟ್ ಲಾಕ್ ಡೌನ್ ಗಳನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ.
ಅಧಿಸೂಚನೆಯ ಪ್ರಕಾರ, ಗುಲ್ಬರ್ಗ್, ಉತ್ತರ ಕರಾಚಿ ಮತ್ತು ಉತ್ತರ ನಾಜಿಮಾಬಾದ್. ಕೋವಿಡ್ ಸೋಂಕಿನ ಮೂರನೇ ಅಲೆಗೆ ಪಾಕಿಸ್ತಾನ ಸಾಕ್ಷಿಯಾಗಿದೆ. ಕಳೆದ 24 ಗಂಟೆಗಳಲ್ಲಿ, ದೇಶವು 148 ಹೊಸ ಕೋವಿಡ್ -19 ಸಾವುಗಳು ಸಂಭವಿಸುವುದರ ಮೂಲಕ ಪಾಕಿಸ್ತಾನದಲ್ಲಿ ಒಟ್ಟು ಕೋವಿಡ್ ನಿಂದ ಮೃತರಾದವರ ಸಂಖ್ಯೆ 16,600 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಇನ್ನು, 5,499 ಹೊಸ ಕೋವಿಡ್ 19 ಪ್ರಕರಣಗಳೊಂದಿಗೆ, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 772,381 ಆಗಿದೆ.
ಓದಿ : ಶಿರಾಡಿ: ಗುಂಡಿಗೆ ಬಿದ್ದು ಮರಕ್ಕೆ ಗುದ್ದಿದ ಲಾರಿ, ಚಾಲಕ ಸ್ಥಳದಲ್ಲೇ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.