ಮದುವೆ ದಿನ ಪ್ರೀತಿಯ ಪತ್ನಿಗೆ ಕತ್ತೆಯನ್ನು ಉಡುಗೊರೆಯಾಗಿ ಕೊಟ್ಟ ಪತಿ.! ವಿಡಿಯೋ ವೈರಲ್
ಕಾರಣವೇನು ಗೊತ್ತಾ?
Team Udayavani, Dec 11, 2022, 6:33 PM IST
![ಮದುವೆ ದಿನ ಪ್ರೀತಿಯ ಪತ್ನಿಗೆ ಕತ್ತೆಯನ್ನು ಉಡುಗೊರೆಯಾಗಿ ಕೊಟ್ಟ ಪತಿ.! ವಿಡಿಯೋ ವೈರಲ್](https://www.udayavani.com/wp-content/uploads/2022/12/tdy-21-6-620x372.jpg)
![ಮದುವೆ ದಿನ ಪ್ರೀತಿಯ ಪತ್ನಿಗೆ ಕತ್ತೆಯನ್ನು ಉಡುಗೊರೆಯಾಗಿ ಕೊಟ್ಟ ಪತಿ.! ವಿಡಿಯೋ ವೈರಲ್](https://www.udayavani.com/wp-content/uploads/2022/12/tdy-21-6-620x372.jpg)
ಇಸ್ಲಾಮಾಬಾದ್: ಮದುವೆಯ ದಿನ ಹೆಂಡತಿಗೆ ಪ್ರೀತಿಯಿಂದ ಏನು ಉಡುಗೊರೆ ಕೊಡಬಹುದು? ಚಿನ್ನ, ನೆಕ್ಲೆಸ್ ಸರ ಇವುಗಳನ್ನು ಬಿಟ್ಟರೆ ಅವಳು ಇಷ್ಟಪಡುವ ವಸ್ತುವನ್ನಾದರೂ ಉಡುಗೊರೆಯಾಗಿ ನೀಡುತ್ತಾರೆ. ಆದರೆ ಇಲ್ಲೊಬ್ಬ ಪತಿ ತನ್ನ ಪತ್ನಿಗೆ ಕೊಟ್ಟಿರುವ ಉಡುಗೊರೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪಾಕಿಸ್ತಾನದ ಯೂಟ್ಯೂಬರ್ ಅಜ್ಲಾನ್ ಶಾ ತನ್ನ ಮದುವೆಯಲ್ಲಿ ಪತ್ನಿ ವಾರಿಶಾ ಅವರಿಗೆ ಉಡುಗೊರೆ ಕೊಟ್ಟು ಸಂತಸ ಪಡಿಸಿದ್ದಾರೆ. ಉಡುಗೊರೆ ಅಂದರೆ ಚಿನ್ನ, ನೆಕ್ಲೆಸ್, ಬ್ಯಾಗನ್ನಲ್ಲ. ಅಜ್ಲಾನ್ ತನ್ ಪತ್ನಿಗೆ ಕೊಟ್ಟದ್ದು ಕತ್ತೆಯನ್ನು.!
ಹೌದು. ಖ್ಯಾತ ಯೂಟ್ಯೂಬರ್ ಆಗಿರುವ ಅಜ್ಲಾನ್ ಶಾ ತಾನು ಇಷ್ಟಪಟ್ಟ ವಾರಿಶಾ ಅವರೊಂದಿಗೆ ವಿವಾಹವಾಗಿದ್ದಾರೆ. ವಿವಾಹಕ್ಕೂ ಮೊದಲು ತನ್ನ ಇಷ್ಟಕಷ್ಟಗಳನ್ನು ಅರ್ಥ ಮಾಡಿಕೊಂಡು ಇಬ್ಬರೂ ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಮದುವೆಯ ವೇದಿಕೆಯಲ್ಲಿ ತನ್ನ ಪತ್ನಿಗೆ ಸರ್ಪ್ರೈಸ್ ನೀಡಲು ಅಜ್ಲಾನ್ ಮರಿ ಕತ್ತೆಯನ್ನು ಆಕೆಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಜ್ಲಾನ್ ಅವರಿಗೆ ಕತ್ತೆಗಳೆಂದರೆ ಇಷ್ಟ, ಅವರ ಪತ್ನಿಗೂ ಕತ್ತೆಯ ಮರಿ ಎಂದರೆ ಇಷ್ಟ ಆ ಕಾರಣಕ್ಕಾಗಿ ಅಜ್ಲಾನ್ ಪತ್ನಿಗೆ ಪ್ರೀತಿಯಿಂದ ಕತ್ತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪತಿಯ ಉಡುಗೊರೆಗೆ ಭಾವುಕರಾಗಿ ಪತ್ನಿ ಕತ್ತೆಯನ್ನು ಪ್ರೀತಿಯಿಂದ ಮುದ್ದಾಡುವ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಕೆಲವರು ಇಬ್ಬರ ಪ್ರಾಣಿ ಪ್ರೀತಿಗೆ ಶ್ಲಾಘಿಸಿದ್ದು, ಇನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ವಾರಿಶಾ ಅವರಿಗೆ ಎರಡೂ ಕತ್ತೆಯೂ ಒಟ್ಟಾಗಿಯೇ ಸಿಕ್ಕಿದೆ ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾನೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ](https://www.udayavani.com/wp-content/uploads/2025/02/obama-150x80.jpg)
![Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ](https://www.udayavani.com/wp-content/uploads/2025/02/obama-150x80.jpg)
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
![Trump-musk](https://www.udayavani.com/wp-content/uploads/2025/02/Trump-musk-150x90.jpg)
![Trump-musk](https://www.udayavani.com/wp-content/uploads/2025/02/Trump-musk-150x90.jpg)
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
![Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹತ್ಯೆ](https://www.udayavani.com/wp-content/uploads/2025/02/Mexic-150x84.jpg)
![Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹತ್ಯೆ](https://www.udayavani.com/wp-content/uploads/2025/02/Mexic-150x84.jpg)
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
![India cuts import duty on American Bourbon Whiskey](https://www.udayavani.com/wp-content/uploads/2025/02/wisky-150x83.jpg)
![India cuts import duty on American Bourbon Whiskey](https://www.udayavani.com/wp-content/uploads/2025/02/wisky-150x83.jpg)
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
![ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ](https://www.udayavani.com/wp-content/uploads/2025/02/uk-1-150x100.jpg)
![ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ](https://www.udayavani.com/wp-content/uploads/2025/02/uk-1-150x100.jpg)
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ