ಪಾಕ್ ಉಗ್ರ ಸಯೀದ್ನ ಕೇಂದ್ರಗಳಿಗೆ ಬಿತ್ತು ಬೀಗ
Team Udayavani, Feb 15, 2018, 10:00 AM IST
ಇಸ್ಲಾಮಾಬಾದ್: ಮುಂಬಯಿ ದಾಳಿಕೋರ ಹಫೀಜ್ ಸಯೀದ್ಗೆ ಮಂಗಳವಾರವಷ್ಟೇ ಉಗ್ರ ಪಟ್ಟ ಕಟ್ಟಿದ್ದ ಪಾಕಿಸ್ಥಾನ, ಇದೀಗ ಮುಂಬಯಿ ದಾಳಿಕೋರ ಹಫೀಜ್ ಸಯೀದ್ ನಡೆಸುತ್ತಿರುವ ಧಾರ್ಮಿಕ ಸಂಘಟನೆ ಹಾಗೂ ಆರೋಗ್ಯ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ.
ಪಂಜಾಬ್ ಪ್ರಾಂತ್ಯದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಧಾರ್ಮಿಕ ಕೇಂದ್ರಗಳ ಸಹಿತ ನಾಲ್ಕು ಆಸ್ಪತ್ರೆಗಳನ್ನು ಸಯೀದ್ ನಂಟು ಹೊಂದಿರುವ ಉಗ್ರ ಸಂಘಟನೆ ಜಮಾತ್-ಉದ್-ದಾವಾ ಹಾಗೂ ಫಲಾಹ್-ಇ-ಇನ್ಸಾನಿಯತ್ ಫೌಂಡೇಶನ್ (ಎಫ್ಐಎಫ್), ಫಲಾಹ್-ಐ-ಇನ್ಸಾನಿಯತ್ ಸಂಘಟನೆಗಳು ನಡೆಸುತ್ತಿದ್ದವು. ಸರಕಾರದ ಆದೇಶದ ಮೇರೆಗೆ, ರಾವಲ್ಪಿಂಡಿ ಜಿಲ್ಲಾಡಳಿತವು ಈ ಧಾರ್ಮಿಕ ಕೇಂದ್ರಗಳನ್ನು ವಶಪಡಿಸಿಕೊಂಡಿದ್ದು, ಇನ್ನು ಮುಂದೆ ಇವು ಪಾಕಿಸ್ಥಾನ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಾದ ಔಕಾಫ್ ಇಲಾಖೆಯ ಸುಪರ್ದಿಗೆ ಒಳಪಡಲಿವೆ. ರಾವಲ್ಪಿಂಡಿ ಸದ್ಯ ದಾಳಿ ನಡೆದಿದ್ದು, ಇನ್ನು ಅಟ್ಟೋಕ್, ಚಕ್ವಾಲ್ ಹಾಗೂ ಝೇಲಮ್ನಲ್ಲೂ ಸಯೀದ್ನ ಸಂಘಟನೆಗಳ ಮೇಲೆ ದಾಳಿ ನಡೆಯಲಿದೆ ಎಂದು ರಾವಲ್ಪಿಂಡಿ ಜಿಲ್ಲಾಡಳಿತದ ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ ಎಂದು ಅಲ್ಲಿನ ಪತ್ರಿಕೆ “ದ ಡಾನ್’ ವರದಿ ಮಾಡಿದೆ. ಜತೆಗೆ ಅದಕ್ಕೆ ಸಂಬಂಧಿಸಿದ ವಿವರಗಳನ್ನೂ ಕೂಡ ಸರಕಾರಕ್ಕೆ ಸಲ್ಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.