ಭಾರತೀಯ ವಿಮಾನಗಳ ಹಾರಾಟಕ್ಕೆ ಮೇ 30ರ ತನಕ ಪಾಕ್ ವಾಯು ಕ್ಷೇತ್ರ ಬಂದ್
Team Udayavani, May 15, 2019, 7:19 PM IST
ಲಾಹೋರ್ : ಭಾರತದಲ್ಲಿನ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಇಸ್ಲಾಮಾಬಾದ್ ಕಾಯುತ್ತಿರುವುದರಿಂದ ಮೇ 30ರ ವರೆಗೆ ತನ್ನ ವಾಯು ಕ್ಷೇತ್ರವನ್ನು ಭಾರತೀಯ ವಿಮಾನಗಳ ಹಾರಾಟಕ್ಕೆ ತೆರೆಯದಿರಲು ಪಾಕಿಸ್ಥಾನ ಇಂದು ಬುಧವಾರ ನಿರ್ಧರಿಸಿದೆ.
ಕಳೆದ ಫೆ.26ರಂದು ಭಾರತೀಯ ವಾಯು ಪಡೆಯು ಬಾಲಾಕೋಟ್ ನಲ್ಲಿನ ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಬಳಿಕದಲ್ಲಿ ಪಾಕಿಸ್ಥಾನ ವಾಯು ಕ್ಷೇತ್ರವನ್ನು ಭಾರತೀಯ ವಿಮಾನಗಳ ಹಾರಾಟಕ್ಕೆ ಮುಚ್ಚಿತ್ತು.
ಆದರೂ ಕಳೆದ ಮಾರ್ಚ್ 27ರಂದು ಪಾಕಿಸ್ಥಾನ, ಹೊಸದಿಲ್ಲಿ, ಬ್ಯಾಂಕಾಕ್ ಮತ್ತು ಕೌಲಾಲಂಪುರ ಹೊರತುಪಡಿಸಿ ಉಳಿದೆಲ್ಲ ವಿಮಾನ ಹಾರಾಟಗಳಿಗೆ ತನ್ನ ವಾಯು ಕ್ಷೇತ್ರವನ್ನು ತೆರೆದಿತ್ತು.
ಪಾಕ್ ರಕ್ಷಣಾ ಇಲಾಖೆಯ ಉನ್ನತಾಧಿಕಾರಿ ಹೇಳಿರುವ ಪ್ರಕಾರ ಇಂದು ಬುಧವಾರ ಪಾಕ್ ಸರಕಾರ ಭಾರತೀಯ ವಿಮಾನಗಳ ಹಾರಾಟಕ್ಕೆ ತನ್ನ ವಾಯು ಕ್ಷೇತ್ರವನ್ನು ತೆರೆಯುವುದನ್ನು ಪುನರ್ ಪರಿಶೀಲಿಸುವ ಸಭೆ ನಡೆಸಿತ್ತು. ಆದರೆ ಭಾರತದಲ್ಲಿನ ಲೋಕಸಭಾ ಚುನಾವಣೆ ಫಲಿತಾಂಶಗಳು ಸದ್ಯವೇ ಹೊರಬರಲಿರುವ ಕಾರಣ ಮೇ 30ರ ತನಕ ತನ್ನ ವಾಯು ಕ್ಷೇತ್ರವನ್ನು ಮಚ್ಚಿಡಲು ಅದು ನಿರ್ಧರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.