ಪಾಕ್ ಪಿಎಂ ಇಮ್ರಾನ್‌ಗೆ ಮತ್ತೆರಡು ಹೊಸ ಸವಾಲುಗಳು
ವಿದೇಶಿ ದೇಣಿಗೆ ವಿವರ ಬಹಿರಂಗಕ್ಕೆ ಆದೇಶ; ಮೆಗಾ ಸಿಟಿ ಯೋಜನೆಗೆ ಸ್ಥಳೀಯರ ವಿರೋಧ
Team Udayavani, Jan 20, 2022, 7:20 AM IST
ಇಸ್ಲಾಮಾಬಾದ್: ಹಲವು ತೊಂದರೆಗಳಲ್ಲಿ ಸಿಲುಕಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮತ್ತೆರಡು ಹೊಸ ಸವಾಲುಗಳು ಎದುರಾಗಿವೆ.
ವಿದೇಶಿ ದೇಣಿಗೆ ಪಡೆದ ದಾಖಲೆಗಳ ಬಿಡುಗಡೆಗೆ ಚುನಾವಣಾ ಆಯೋಗ ಆದೇಶಿಸಿದ್ದರೆ, ರಾವಿ ನದಿ ತೀರದಲ್ಲಿ ಮೆಗಾ ಸಿಟಿ ಯೋಜನೆ ವಿರುದ್ಧ ಸ್ಥಳೀಯರು ಸಿಡಿದು ನಿಂತಿದ್ದಾರೆ.
ಪಾಕ್‌ನ ಆಡಳಿತಾರೂಢ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ವಿರುದ್ಧದ ವಿದೇಶಿ ದೇಣಿಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ದಾಖಲೆಗಳನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಪಾಕ್ ಚುನಾವಣಾ ಆಯೋಗ ಬುಧವಾರ ಆದೇಶಿಸಿದೆ. 4 ವರ್ಷಗಳ ಅವಧಿಯಲ್ಲಿ ಸುಮಾರು 312 ದಶಲಕ್ಷ ಪಾಕಿಸ್ತಾನಿ ರೂಪಾಯಿಗಳಷ್ಟು ಮೊತ್ತಕ್ಕೆ ಪಕ್ಷ ಲೆಕ್ಕ ಕೊಟ್ಟಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ:ಗಂಗಾವತಿ : ಮರೀಚಿಕೆಯಾದ ಪೂರ್ಣ ಪ್ರಮಾಣದ ರೈಲು ನಿಲ್ದಾಣ, ಪ್ರಯಾಣಿಕರ ಗೋಳು
ಮೆಗಾ ಸಿಟಿಗೆ ವಿಘ್ನ
ಇದೇ ವೇಳೆ, ಇಮ್ರಾನ್ ಖಾನ್ ಸರ್ಕಾರ ರಾವಿ ನದಿ ತೀರದಲ್ಲಿ ಮೆಗಾ ಸಿಟಿ ರೂಪಿಸುವ ಸರ್ಕಾರದ ಯೋಜನೆಯ ವಿರುದ್ಧ ಸ್ಥಳೀಯರೇ ತಿರುಗಿಬಿದ್ದಿದ್ದಾರೆ. ಈ ಯೋಜನೆಗಾಗಿ ಸರ್ಕಾರವು ನಮ್ಮ ಕೃಷಿ ಭೂಮಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಜಮೀನು ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದು 7 ಶತಕೋಟಿ ಡಾಲರ್ ಮೊತ್ತದ ಯೋಜನೆಯಾಗಿದ್ದು, 46 ಕಿ.ಮೀ. ಉದ್ದದ ಈ ಮೆಗಾ ಸಿಟಿಯು ಗೃಹ, ವಾಣಿಜ್ಯ ಕಟ್ಟಡಗಳು, ಆಸ್ಪತ್ರೆಗಳು, ಶಾಲೆ-ಕಾಲೇಜುಗಳನ್ನು ಒಳಗೊಂಡಿರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.