ಪಾಕ್ ಐಎಸ್‌ಐಗೆ ಉಗ್ರ ನಂಟು, ಸ್ವಂತ ವಿದೇಶ ನೀತಿ: ಅಮೆರಿಕ
Team Udayavani, Oct 4, 2017, 11:56 AM IST
ವಾಷಿಂಗ್ಟನ್ : “”ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಎಸ್ ಗೆ ಹಲವು ಭದ್ರತಾ ಸಮೂಹಗಳೊಂದಿಗೆ ನಂಟಿದೆ ಮತ್ತು ಅದು ತನ್ನದೇ ಆದ ವಿದೇಶ ನೀತಿಯನ್ನು ಅನುಸರಿಸುತ್ತಿದೆ” ಎಂದು ಅಮೆರಿಕದ ಉನ್ನತ ಸೇನಾ ಜನರಲ್ ಹೇಳಿದ್ದಾರೆ.
ಆದರೆ ಪಾಕಿಸ್ಥಾನ ಅಮೆರಿಕದ ಈ ಆರೋಪಗಳನ್ನು ಸಾರಾಸಗಟು ಅಲ್ಲಗಳೆದಿದೆ ಮತ್ತು ಆ ಮೂಲಕ ಪಾಕ್ ಐಎಸ್‌ಐ ಗುಪ್ತಚರ ಸಂಸ್ಥೆ ಹಲವಾರು ಉಗ್ರ ಸಮೂಹಗಳಿಗೆ ನಾನಾ ರೀತಿಯ ನೆರವು, ಬೆಂಬಲ, ಪ್ರೋತ್ಸಾಹ ಇತ್ಯಾದಿಗಳನ್ನು ನೀಡುತ್ತಿರುವುದನ್ನು ಅದು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ ಎಂದು ಉನ್ನತ ಅಮೆರಿಕನ್ ಸೇನಾ ಜನರಲ್ ಹೇಳಿದ್ದಾರೆ.
ಅಮೆರಿಕ ಮಾತ್ರವಲ್ಲದೆ ಭಾರತ ಮತ್ತು ಅಫ್ಘಾನಿಸ್ಥಾನ ಕೂಡ ಈ ಹಿಂದೆ ಹಲವು ಬಾರಿ ಈ ರೀತಿಯ ಆರೋಪಗಳನ್ನು ಮಾಡಿದೆ.
ಅಮೆರಿಕನ್ ಸೇನೆಯ ಜಂಟಿ ಮುಖ್ಯಸ್ಥರಾಗಿರುವ ಜೋಸೆಫ್ ಡನ್‌ಫರ್ಡ್ ಅವರು ವಿದೇಶ ಬಾಂಧ್ಯವಗಳ ಪ್ರಬಲ ಸೆನೆಟ್ ಸಭೆಯಲ್ಲಿ ಮಾತನಾಡುತ್ತಾ, “ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐಗೆ ಹಲವು ಭಯೋತ್ಪಾದಕ ಸಮೂಹಗಳೊಂದಿಗೆ ನಂಟಿದೆ ಮಾತ್ರವಲ್ಲ ಅದು ಈ ಸಮೂಹಗಳಿಗೆ ಹಲವು ರೀತಿಯಲ್ಲಿ ನೆರವು, ಬೆಂಬಲ, ಪ್ರೋತ್ಸಾಹ, ತರಬೇತಿ, ಮೂಲ ಸೌಕರ್ಯ ಇತ್ಯಾದಿಗಳನ್ನು ಒದಗುತ್ತಾ ಬಂದಿದೆ ಎಂಬುದು ನನಗೆ ಅತ್ಯಂತ ಸ್ಪಷ್ಟವಿದೆ’ ಎಂದು ಹೇಳಿದರು.
ಜನರಲ್ ಡನ್‌ಫರ್ಡ್ ಅವರು ಸೆನೆಟರ್ ಜೋ ಡೊನೇಲಿ ಅವರ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿಯನ್ನು ಸೆನೆಟ ಸಭೆಗೆ ನೀಡಿದರು.
ಐಎಸ್‌ಐ ಈಗಲೂ ತಾಲಿಬಾನ್‌ಗೆ ನೆರವಾಗುತ್ತಿದೆಯೇ ಎಂದು ಡೊನೇಲಿ ಕೇಳಿದ ಪ್ರಶ್ನೆಗೆ ಡನ್‌ಫರ್ಡ್, ಪಾಕ್ ಗುಪ್ತಚರ ಸಂಸ್ಥೆ ತಾಲಿಬಾನ್ ಮಾತ್ರವಲ್ಲದೆ ಹಲವು ಉಗ್ರ ಸಮೂಹಗಳಿಗೆ ಸಕಲ ರೀತಿಯಲ್ಲಿ ನೆರವಾಗುತ್ತಿರುವುದು ಖಚಿತವಿದೆ’ ಎಂದು ಉತ್ತರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.