ಪಾಕ್ ಗೆ ಯುದ್ಧಾವೇಶ
ಲಡಾಖ್ ಸಮೀಪದ ವಾಯುನೆಲೆಗೆ ಸೇನಾ ಸಾಮಗ್ರಿ
Team Udayavani, Aug 13, 2019, 6:00 AM IST
ಹೊಸದಿಲ್ಲಿ: ಪಾಕಿಸ್ಥಾನ ಈಗ ಭಾರತದೊಂದಿಗೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆಯೇ?
ಲಡಾಖ್ ಸಮೀಪದ ಪಾಕ್ ಗಡಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಈ ಅನುಮಾನಕ್ಕೆ ಪುಷ್ಟಿ ನೀಡಿವೆ. ವಿಶೇಷ ಸ್ಥಾನಮಾನ ವಾಪಸ್ ಪಡೆದಂದಿನಿಂದ ಈವರೆಗೆ ಪಾಕಿಸ್ಥಾನವು ಲಡಾಖ್ ಸಮೀಪದ ತನ್ನ ಮುಂಚೂಣಿ ನೆಲೆಗೆ ಒಂದೊಂದಾಗಿ ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿರುವ ವಿಚಾರ ಬಹಿರಂಗವಾಗಿದೆ.
ವಾಯುಪಡೆ ವಿಮಾನಗಳಿಂದ ಸಾಗಾಟ
ಲಡಾಖ್ ವಿರುದ್ಧ ದಿಕ್ಕಿನಲ್ಲಿ ಪಾಕ್‌ನ ಸ್ಕರ್ದು ವಾಯು ನೆಲೆ ಇದೆ. ಅಲ್ಲಿಗೆ ಪಾಕ್ ವಾಯು ಪಡೆಯ ಮೂರು ಸಿ-130 ಸಾಗಣೆ ವಿಮಾನಗಳು ಶನಿವಾರದಿಂದ ಸೇನಾ ಸಾಮಗ್ರಿ ಸಾಗಾಟ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಜೆಎಫ್-17 ಯುದ್ಧ ವಿಮಾನಗಳನ್ನೂ ಇಲ್ಲಿ ನಿಯೋಜಿಸಲು ತಯಾರಿ ನಡೆಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಸೂಕ್ಷ್ಮ ನಿಗಾ
ಪಾಕಿಸ್ಥಾನದ ಈ ಚಟುವಟಿಕೆಗಳ ಮೇಲೆ ಭಾರತದ ಗುಪ್ತಚರ ಸಂಸ್ಥೆಗಳು, ಸೇನಾಪಡೆ ಮತ್ತು ವಾಯುಪಡೆ ಸೂಕ್ಷ್ಮವಾಗಿ ನಿಗಾ ಇರಿಸುತ್ತಿವೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಪಾಕ್ ಪತ್ರಕರ್ತನಿಂದ ಸುಳಿವು
ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತ ಪಾಕ್ ಸೈನಿಕರು ಎಲ್‌ಒಸಿಯತ್ತ ಸಾಗುತ್ತಿದ್ದಾರೆ ಎಂದು ಪಾಕ್ ಪತ್ರಕರ್ತ ಹಮೀದ್ ಮಿರ್ ರವಿವಾರ ಟ್ವೀಟ್ ಮಾಡಿದ್ದರು.
ದೋವಲ್ ವೈಮಾನಿಕ ಸಮೀಕ್ಷೆ
ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದ ಪ್ರದೇಶಗಳಲ್ಲಿ ಸೋಮವಾರ ಎನ್‌ಎಸ್‌ಎ ಅಜಿತ್ ದೋವಲ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸ್ ಮುಖ್ಯಸ್ಥ ದಿಲ್‌ಬಾಗ್ ಸಿಂಗ್ ಮತ್ತು ಸೇನಾ ಕಮಾಂಡರ್‌ಗಳು ಕೂಡ ವಿವಿಧ ಭಾಗಗಳಲ್ಲಿ ಪ್ರತ್ಯೇಕ ವೈಮಾನಿಕ ಸಮೀಕ್ಷೆ ನಡೆಸಿದ್ದು, ಭದ್ರತಾ ಸ್ಥಿತಿಯನ್ನು ಅವಲೋಕಿಸಿದ್ದಾರೆ. ಪಾಕಿಸ್ಥಾನವು ಸಮರಕ್ಕೆ ಸಜ್ಜಾಗುತ್ತಿದೆ ಎಂಬ ಮಾಹಿತಿ ಬಂದ ಬೆನ್ನಲ್ಲೇ ಈ ವೈಮಾನಿಕ ಸಮೀಕ್ಷೆ ನಡೆಸಿರುವುದು ಕುತೂಹಲ ಮೂಡಿಸಿದೆ.
ದಿಲ್ಲಿ-ಲಾಹೋರ್ ಬಸ್ ಸೇವೆ ರದ್ದು
ದಿಲ್ಲಿ ಮತ್ತು ಲಾಹೋರ್ ನಡುವಿನ ಸೌಹಾರ್ದ ಸೇತುವಾಗಿದ್ದ ಬಸ್ ಸಂಚಾರವನ್ನು ಪಾಕ್ ಸ್ಥಗಿತಗೊಳಿ ಸಿದ ಬೆನ್ನಲ್ಲೇ ಭಾರತವೂ ಸೋಮವಾರ ಈ ಬಸ್ ಸೇವೆ ರದ್ದು ಮಾಡಿದೆ. ಸೋಮವಾರ ಬೆಳಗ್ಗೆ 6 ಗಂಟೆಗೆ ದಿಲ್ಲಿಯಿಂದ ಲಾಹೋರ್‌ಗೆ ಈ ಬಸ್ ಹೊರಡಬೇಕಿತ್ತು. ಆದರೆ ಪಾಕಿಸ್ಥಾನವು ಬಸ್ ಸೇವೆ ಸ್ಥಗಿತಗೊಳಿಸಿದ ಕಾರಣ ಇಲ್ಲಿಂದಲೂ ಬಸ್ ಹೊರಡಲಿಲ್ಲ ಎಂದು ದಿಲ್ಲಿ ಸಾರಿಗೆ ನಿಗಮ (ಡಿಟಿಸಿ) ತಿಳಿಸಿದೆ. 2 ದಿನಗಳ ಹಿಂದಷ್ಟೇ ಎರಡೂ ದೇಶಗಳ ನಡುವಿನ ಸಂಜೋತಾ ಎಕ್ಸ್‌ಪ್ರೆಸ್ ರೈಲು, ಥಾರ್ ರೈಲು ಸೇವೆ ಕೂಡ ರದ್ದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ
Udupi: ಪೊಲೀಸ್ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.