ಪಾದ್ರಿಗಳ ಲೈಂಗಿಕ ಹಗರಣ ನಿಗ್ರಹಕ್ಕೆ ಚರ್ಚ್‌ಗಳು ವಿಫ‌ಲ


Team Udayavani, Aug 26, 2018, 6:00 AM IST

z-17.jpg

ಡಬ್ಲಿನ್‌: ಪಾದ್ರಿಗಳ ಲೈಂಗಿಕ ಹಗರಣಗಳನ್ನು ನಿಗ್ರಹಿಸುವಲ್ಲಿ ಕ್ಯಾಥೋಲಿಕ್‌ ಚರ್ಚ್‌ಗಳು ವಿಫ‌ಲವಾಗಿದ್ದು, ಮುಜುಗರದಿಂದ ತಲೆತಗ್ಗಿಸುವಂತಾಗಿದೆ ಎಂದು ಪೋಪ್‌ ಫ್ರಾನ್ಸಿಸ್‌ ಹೇಳಿದ್ದಾರೆ. ಪಾದ್ರಿಗಳ ಕಾಮಲೋಲುಪತೆಯ ವಿರುದ್ಧ ಎದ್ದಿರುವ ಜಾಗತಿಕ ಧ್ವನಿಗೆ ಸ್ಪಂದಿಸಿರುವ ಪೋಪ್‌ ಅವರು, ಈ ಅಪರಾಧಗಳನ್ನು ನಿಗ್ರಹಿಸುವಲ್ಲಿ ಬಿಷಪ್‌ಗ್ಳು, ಪಾದ್ರಿಗಳು ಹಾಗೂ ಇತರೆ ಚರ್ಚ್‌ನ ಅಧಿಕಾರಿಗಳಿಂದಾದ ವೈಫ‌ಲ್ಯವೇ ಇದರ ವಿರುದ್ಧ ಧ್ವನಿ ಏಳಲು ಕಾರಣವಾಗಿದೆ. ಇದು ಕ್ಯಾಥೋಲಿಕ್‌ ಸಮುದಾಯಕ್ಕೆ ನೋವಿನ ಹಾಗೂ ಮುಜುಗರದ ಸಂಗತಿ ಎಂದು ಹೇಳಿದ್ದಾರೆ.

ಪೋಪ್‌ ಫ್ರಾನ್ಸಿಸ್‌ ಅವರು ತಮ್ಮ ಐರ್ಲೆಂಡ್‌ ಪ್ರವಾಸದ ಮೊದಲ ದಿನವೇ ಪಾದ್ರಿಗಳ ಲೈಂಗಿಕ ಹಗರಣದ ಕುರಿತು ಮಾತನಾಡಿದ್ದು ಪ್ರಾಮುಖ್ಯತೆ ಪಡೆದುಕೊಂಡಿದೆ. ಇಲ್ಲಿನ ಸಂತ್ರಸ್ತ ಬಾಲಕಿಯರೊಂದಿಗೂ ಪೋಪ್‌ ಮಾತನಾಡುವ ನಿರೀಕ್ಷೆಯಿದೆ. 

ಇತ್ತೀಚೆಗಷ್ಟೇ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಹಾಗೂ ಅದನ್ನು ಮುಚ್ಚಿಟ್ಟ ಪಾದ್ರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಪ್‌ ಅವರಿಗೆ ಐರಿಷ್‌ ಪ್ರಧಾನಿ ಆಗ್ರಹಿಸಿದ್ದರು. ಚರ್ಚುಗಳು ನಿರ್ವಹಿಸುತ್ತಿರುವ ಶಾಲೆಗಳಲ್ಲಿ ಸಾವಿರಾರು ಮಕ್ಕಳ ಮೇಲೆ ಪಾದ್ರಿಗಳು ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಎಸೆದಿರುವ ಪ್ರಕರಣಗಳು ಇಲ್ಲಿ ಬೆಳಕಿಗೆ ಬಂದಿದ್ದವು. ಜೊತೆಗೆ, ಇಂಥ ಪ್ರಕರಣಗಳನ್ನು ಮುಚ್ಚಿಹಾಕಲು ಬಿಷಪ್‌ಗ್ಳು ಯತ್ನಿಸಿರುವುದೂ ಬಹಿರಂಗವಾಗಿತ್ತು. ಇದೇ ವೇಳೆ,  ಭಾರತದ ಕೇರಳದಲ್ಲೂ ಇತ್ತೀಚೆಗೆ ಪಾದ್ರಿಗಳ ಲೈಂಗಿಕ ಹಗರಣಗಳು ಬೆಳಕಿಗೆ ಬಂದಿದ್ದವು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪೋಪ್‌ರ ಹೇಳಿಕೆ ಮಹತ್ವ ಪಡೆದಿದೆ.

ಟಾಪ್ ನ್ಯೂಸ್

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

High Court: ಜ. 30ರ ವರೆಗೆ ಎಚ್‌ಡಿಕೆ ಮೇಲೆ ಬಲವಂತದ ಕ್ರಮ ಬೇಡ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ

Prajwal Revanna ವಿರುದ್ಧ ಸದ್ಯ ಆರೋಪ ನಿಗದಿ ಮಾಡದಂತೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Canada Court: ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Canada Court:ಹರ್ದೀಪ್‌ ನಿಜ್ಜರ್‌ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್‌: ವಿವಾದ

1-donald

Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…

Pakistan; 6 brothers marry 6 sisters to save expenses!

Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್‌. ಸಂತೋಷ್‌

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

ಡಿನ್ನರ್‌ ಸಭೆ ಮಧ್ಯೆಯೇ ಡಿಕೆಶಿ ದೇಗುಲ ದರ್ಶನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

High Court:ಕಾರಿನಲ್ಲಿ ಕುಳಿತೇ ಕಲಾಪಕ್ಕೆ ಹಾಜರು: ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.