Papua New Guinea ಭೂಕುಸಿತ: ಮೃತರ ಸಂಖ್ಯೆ 2,000ಕ್ಕೇರಿಕೆ
Team Udayavani, May 28, 2024, 6:48 AM IST
ಮೆಲ್ಬೊರ್ನ್: ಪಪುವಾ ನ್ಯೂಗಿನಿಯಾದ ಯೆಂಗಾ ಪ್ರಾಂತದಲ್ಲಿ ಉಂಟಾದ ಭೂಕುಸಿತದಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಸಜೀವವಾಗಿ ಸಮಾಧಿಯಾಗಿದ್ದಾರೆ. ಈ ಬಗ್ಗೆ ಅಲ್ಲಿನ ಸರಕಾರವೇ ದೃಢಪಡಿಸಿದೆ. ಜತೆಗೆ ಅಂತಾರಾಷ್ಟ್ರೀಯ ಸಮುದಾಯ ನೆರವು ನೀಡಬೇಕು ಎಂದೂ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಅದು ವಿಶ್ವಸಂಸ್ಥೆಗೆ ಮನವಿ ಮಾಡಿ ಕೊಂಡಿದೆ. ಸಾವಿನ ಸಂಖ್ಯೆ 670ಕ್ಕೆ ಏರಿಕೆ ಯಾಗಿದೆ ಎಂದು ಎಂದು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವಿಶ್ವಸಂಸ್ಥೆ ಅಧಿಕಾರಿಗಳು ರವಿವಾರ ತಿಳಿಸಿದ್ದರು. ಇದೀಗ ಆ ದೇಶದ ಸರಕಾರದಿಂದಲೇ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಬಗ್ಗೆ ದೃಢೀಕರಣ ನೀಡಿದೆ.
ಇದರ ಜತೆಗೆ ಭೂಕುಸಿತದಿಂದಾಗಿ ನೂರಾರು ಮನೆಗಳು, ಕೃಷಿ ಭೂಮಿ ನಾಶವಾಗಿದೆ ಎಂದು ಸರಕಾರ ಹೇಳಿ ಕೊಂಡಿದೆ. ಈ ಹಿನ್ನೆಲೆಯಲ್ಲಿ ಅಂತಾ ರಾಷ್ಟ್ರೀಯ ಸಮುದಾಯ ನೆರವು ನೀಡಬೇಕು. ಪ್ರಾಕೃತಿಕ ದುರಂತ ಉಂಟಾಗಿರುವ ಪ್ರದೇಶದಲ್ಲಿ ಇನ್ನೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ ಎಂದೂ ಸರಕಾರ ಹೇಳಿದೆ. ಅಂತಾರಾಷ್ಟ್ರೀಯ ವಲಸೆಗಾರರ ಒಕ್ಕೂಟ ಭೂಕುಸಿತದಿಂದ ಉಂಟಾಗಿರುವ ಸಾವಿನ ಸಂಖ್ಯೆ 670 ಮಂದಿ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.