Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Team Udayavani, May 5, 2024, 9:30 AM IST
ಮಿಯಾಮಿ: ಪ್ಯಾಂಟ್ ನಲ್ಲಿ ಹಾವನ್ನು ಇಟ್ಟುಕೊಂಡ ಪ್ರಯಾಣಿಕನ್ನು ವಶಕ್ಕೆ ಪಡೆದ ಘಟನೆ ಯುನೈಟೆಡ್ ಸ್ಟೇಟ್ಸ್ ನ ಮಿಯಾಮಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಯುಎಸ್ ಟ್ರಾನ್ಸ್‌ಪೋರ್ಟೇಶನ್ ಸೆಕ್ಯುರಿಟಿ ಅಡ್ಮಿನಿಸ್ಟ್ರೇಷನ್ (TSA) ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದೆ. ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರೊಬ್ಬರ ಪ್ಯಾಂಟ್ ನಲ್ಲಿ ಹಾವುಗಳನ್ನು ಸಾಗಿಸುವ ಚೀಲವನ್ನು ಏಪ್ರಿಲ್ 26 ರಂದು ಚೆಕ್ ಪಾಯಿಂಟ್ ನಲ್ಲಿ ಪತ್ತೆ ಮಾಡಿದ್ದಾರೆ ಎಂದು ಹೇಳಿದರು.
ಮಾಹಿತಿಯ ತುಣುಕಿನ ಜೊತೆಗೆ, ವ್ಯಕ್ತಿ ಬಚ್ಚಿಟ್ಟಿದ್ದ ಚೀಲದಿಂದ ಎರಡು ಸಣ್ಣ ಬಿಳಿ ಹಾವುಗಳ ಚಿತ್ರಗಳನ್ನು ಸಹ ಟಿಎಸ್ ಎ ಪೋಸ್ಟ್ ಮಾಡಿದೆ.
Officers at @iflymia detected this bag of snakes hidden in a passenger’s pants at a checkpoint on Fri, April 26. @TSA called our @CBPSoutheast and Miami-Dade Police partners in to assist, and the snakes were turned over to the Florida Fish and Wildlife Conservation Commission. pic.twitter.com/CggJob8IT8
— TSA_Gulf (@TSA_Gulf) April 30, 2024
ಹಾವುಗಳನ್ನು ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಟಿಎಸ್‌ಎ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.