ಈ ಎರಡು ಸೀಟ್ ನನ್ನದು.. ಜನ ತುಂಬಿದ ಬಸ್ ನಲ್ಲಿ ಹಾಯಾಗಿ ಮಲಗಿದ ನಾಯಿ; ವಿಡಿಯೋ ವೈರಲ್
Team Udayavani, Oct 9, 2022, 2:26 PM IST
ನವದೆಹಲಿ: ಬಸ್ ನಲ್ಲಿ ಪ್ರಯಾಣಿಸುವಾಗ ಅಬ್ಬಾ ಒಂದು ಸೀಟ್ ಸಿಕ್ಕರೆ ಸಾಕೆಂದು ನಾವು ಅಂದುಕೊಳ್ಳುತ್ತೇವೆ. ಆದರೆ ಎಷ್ಟೋ ಬಾರಿ ಸೀಟ್ ಸಿಗುವುದೇ ಇಲ್ಲ. ಹಾಗೆ ನಿಂತುಕೊಂಡು ಸೀಟ್ ಖಾಲಿ ಆಗುವುದನ್ನೇ ಕಾಯುತ್ತ, ನೋಡುತ್ತಾ ನಿಲ್ಲುತ್ತೇವೆ. ಇಂಟರ್ ನೆಟ್ ನಲ್ಲಿ ನಾಯಿಯೊಂದು ಬಸ್ ನಲ್ಲಿ ಮಲಗಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅದು ಜನ ತುಂಬಿ ತುಳುಕುತ್ತಿರುವ ಬಸ್. ಎಷ್ಟು ಜನರೆಂದರೆ ಸರಿಯಾಗಿ ನಿಂತುಕೊಳ್ಳಲು ಜನ ಒಬರನ್ನೊಬ್ಬರು ತಾಗಿಕೊಂಡು ನಿಂತಿದ್ದಾರೆ. ಮಾತು, ಜನಸಂದಣಿಯ ನಡುವೆ ಅಲ್ಲೊಂದು ನಾಯಿ ಹಾಯಾಗಿ ಸೀಟಿನಲ್ಲಿ ಮಲಗಿದೆ. ಎರಡು ಸೀಟ್ ಗಳನ್ನು ಅಕ್ರಮಿಸಿಕೊಂಡು ಉದ್ದವಾಗಿ ನಾಯಿ ಸೀಟಿನಲ್ಲಿ ಮಲಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟ್ವಿಟರ್ ಬಳಕೆದಾರ ಸ್ಟೆಫಾನೊ ಎಸ್ ಮ್ಯಾಗಿ ಎಂಬುವವರು ಈ ವಿಡಿಯೋ ಹಂಚಿಕೊಂಡು, “ಜನ ಸಂದಣಿಯಿದೆ, ಆತ ಎರಡು ಸೀಟ್ ಗಳನ್ನು ಆಕ್ರಮಿಸಿಕೊಂಡಿದ್ದಾನೆ. ಆತನ ನಿದ್ರೆಗೆ ಯಾರೂ ಭಂಗ ತರಲಿಲ್ಲ” ಎಂದು ಬರೆದುಕೊಂಡಿದ್ದಾರೆ.
ಬುಧವಾರ( ಅ.5 ರಂದು) ಈ ವಿಡಿಯೋ ಹಂಚಿಕೊಂಡಿದ್ದು, 50 ಸಾವಿರಕ್ಕೂ ಹೆಚ್ಚಿನ ಮಂದಿ ವೀಕ್ಷಿಸಿದ್ದಾರೆ.
ನೆಟ್ಟಿಗರೊಬ್ಬರು ನಾಯಿಯ ನಿದ್ದೆಗೆ ಭಂಗ ತರದೇ ಹಾಗೆ ನಿಂತಿರುವ ಜನರಿಗೆ ಸೆಲ್ಯೂಟ್ ಎಂದಿದ್ದಾರೆ.
Although the wagon was crowded and he was occupying 2 seats, nobody disturbed his rest❣️
?via Karen Olave
?Laurasia Mattingly•Choose Kindness pic.twitter.com/mboB6Nj4KC— Stefano S. Magi (@myworld2121) October 5, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.