ಒಳ್ಳೆಯ ಪತಿ, ಒಳ್ಳೆಯ ಅಪ್ಪ… ಆದ್ರೆ ವಿಶ್ವದ ಅತಿ ಕ್ರೂರ ಹಂತಕ!
Team Udayavani, Apr 16, 2017, 1:04 PM IST
ಮಾಸ್ಕೋ: “ನೀವು ಎಷ್ಟು ಅತ್ಯಾಚಾರ ಮಾಡಿದ್ದೀರಿ, ಎಷ್ಟು ಕೊಲೆ ಮಾಡಿದ್ದೀರಿ?'”ನಿಖರವಾದ ಲೆಕ್ಕ ನನ್ನ ಬಳಿ ಇಲ್ಲ,’ ಎಂಬ ಉಡಾಫೆಯ ಉತ್ತರ. ಆದರೆ, ಪೊಲೀಸರು ಈವರೆಗೆ ನಡೆಸಿದ ತನಿಖೆಯ ಪ್ರಕಾರ, ಆತ ಮಾಡಿರುವುದು ಒಂದೆರಡಲ್ಲ, ಬರೋಬ್ಬರಿ 82 ಕೊಲೆಗಳನ್ನು!
ಅಂದ ಹಾಗೆ, ಅತ್ಯಂತ ಕ್ರೂರವಾಗಿ ಅತ್ಯಾಚಾರಗೈದು, ಅಮಾನವೀಯವಾಗಿ ಕೊಲ್ಲುವ ಈತ ರಷ್ಯಾದ ಪೊಲೀಸ್ ಅಧಿಕಾರಿ. ಹೆಸರು ಪಾಪ್‌ಕೋವ್. ಪತ್ನಿಗೆ ಒಳ್ಳೆಯ ಪತಿ, ಮಕ್ಕಳಿಗೆ ಪ್ರೀತಿಸುವ ಅಪ್ಪ. ವೃತ್ತಿಯಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿ. ಈತನ ಮೇಲಿರುವ ಆರೋಪಗಳೆಲ್ಲ ಸಾಬೀತಾದರೆ, ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸರಣಿ ಹಂತಕ ಎಂಬ ಕುಖ್ಯಾತಿಗೆ ಈತ ಪಾತ್ರನಾಗುತ್ತಾನೆ.
18 ವರ್ಷಗಳ ಕ್ರೌರ್ಯ: ಸಿನಿಮಾಗಳಲ್ಲಿ ಕಾಣುವಂತೆ ಈತನದ್ದು ದ್ವಿಮುಖ ಪಾತ್ರ. ಆದರೆ, ಈತ ಮಾಡುತ್ತಿದ್ದ ಕೊಲೆಗಳು ಅತ್ಯಂತ ಬೀಭತ್ಸ. ಕೆಲವರ ಶಿರಚ್ಛೇದ ಮಾಡಿದರೆ, ಇನ್ನು ಕೆಲವರ ಹೃದಯಭಾಗ ಕತ್ತರಿಸಿ ಹಾಕುತ್ತಿದ್ದ. ಬಹುತೇಕರನ್ನು ಕೊಲೆಗೆ ಮೊದಲು ಹಾಗೂ ನಂತರವೂ ರೇಪ್ ಮಾಡುತ್ತಿದ್ದ. ಒಬ್ಬ ಶಾಲಾ ಶಿಕ್ಷಕಿ ಯನ್ನು ಪುತ್ರಿ ಕಲಿಯುತ್ತಿದ್ದ ಶಾಲೆಯಲ್ಲೇ ಅತ್ಯಾಚಾರ ಮಾಡಿ ಕೊಂದಿದ್ದ. ನಂತರ ಅಂತ್ಯಸಂಸ್ಕಾರಕ್ಕೆ ನೆರವೂ ನೀಡಿದ್ದ. ಇಬ್ಬರು ವಿದ್ಯಾರ್ಥಿನಿಯರನ್ನು ವಿಕಾರಗೊಳಿಸಿ ಹತ್ಯೆಗೈದಿದ್ದ. ಪೊಲೀಸ್ ಅಧಿಕಾರಿಯಾಗಿದ್ದ ಕಾರಣ ಎಲ್ಲರೂ ಆತನನ್ನು ನಂಬುತ್ತಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆತ ಡ್ರಾಪ್ ಕೊಡುವ ನೆಪದಲ್ಲಿ ಸಂತ್ರಸ್ತರನ್ನು ಒಯ್ದು, ಅಮಾನುಷವಾಗಿ ಕೊಲ್ಲುತ್ತಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.