ಪಾಕಿಸ್ತಾನದಲ್ಲಿ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ
ಐಎಂಎಫ್ ನ ಸೂಚನೆ ಎಲ್ಲ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ
Team Udayavani, Jul 2, 2022, 6:50 AM IST
ಇಸ್ಲಾಮಾಬಾದ್: ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾ ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿದೆ. ಪಾಕಿಸ್ತಾನವೂ ನಿಧಾನಕ್ಕೆ ದಿವಾಳಿಯಂಚಿಗೆ ಹೋಗುತ್ತಿದೆ. ಅದನ್ನು ತಡೆಯಲು ಅದು ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಪೆಟ್ರೋಲಿಯಂನ ಎಲ್ಲ ಉತ್ಪನ್ನಗಳ ಮೇಲೆ ಪ್ರತಿ ಲೀ.ಗೆ 14ರಿಂದ 19 ರೂ.ವರೆಗೆ ಬೆಲೆಯೇರಿಸಿದೆ. ಇದರಿಂದ ಸಹಜವಾಗಿ ಪೆಟ್ರೋಲ್, ಡೀಸೆಲ್‌ಗಳ ಬೆಲೆ ಗಗನಕ್ಕೇರಿದೆ. ಇದರಿಂದ ಜನರಲ್ಲಿ ಉಂಟಾಗುವ ಆಕ್ರೋಶವನ್ನು ಆ ದೇಶ ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕು.
ಪೆಟ್ರೋಲ್ ಮೇಲೆ 10 ರೂ., ಅತಿವೇಗದ ಡೀಸೆಲ್, ಸೀಮೆ ಎಣ್ಣೆ, ಲಘು ಡೀಸೆಲ್ ಮೇಲೆ ತಲಾ 5 ರೂ. ಬೆಲೆಯೇರಿಕೆ ಮಾಡಿದೆ. ಇದರಿಂದ ಪೆಟ್ರೋಲ್ ಬೆಲೆ ಲೀ.ಗೆ 248.74 ರೂ., ಡೀಸೆಲ್ ಬೆಲೆ 276.54 ರೂ., ಸೀಮೆ ಎಣ್ಣೆ ಬೆಲೆ 230.26, ಡೀಸೆಲ್ ಬೆಲೆ 226.15 ರೂ.ಗಳಿಗೆ ಮುಟ್ಟಿದೆ.
ಇದನ್ನು ಪಾಕಿಸ್ತಾನ ಸರ್ಕಾರ ಐಎಂಎಫ್ ನ(ಅಂತಾರಾಷ್ಟ್ರೀಯ ಹಣಕಾಸು ನಿಧಿ) ಸೂಚನೆಯ ಮೇರೆಗೆ ಜಾರಿಗೊಳಿಸಿದೆ. ಆರ್ಥಿಕ ಕುಸಿತ ತಡೆಯಲು ಐಎಂಎಫ್ ನಿಂದ 6 ಬಿಲಿಯನ್ ಡಾಲರ್ ನೆರವು ನೀಡಬೇಕಾದರೆ, ಪಾಕಿಸ್ತಾನ ಹಲವು ಷರತ್ತುಗಳನ್ನು ಮುಂಚಿತವಾಗಿಯೇ ಜಾರಿ ಮಾಡಬೇಕಾಗುತ್ತದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Canada ಪ್ರಧಾನಿ ರೇಸ್‌ನಲ್ಲಿ ಭಾರತ ಮೂಲದ ಅನಿತಾ?
Pakistan; ಖರ್ಚು ಉಳಿಸಲು 6 ಸೋದರರಿಂದ 6 ಮಂದಿ ಸೋದರಿಯರ ವಿವಾಹ!
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Earthquakes: ಎವರೆಸ್ಟ್ ತಪ್ಪಲಲ್ಲಿ ಪ್ರಬಲ ಭೂಕಂಪ; ಮೃತರ ಸಂಖ್ಯೆ 126ಕ್ಕೆ ಏರಿಕೆ
MUST WATCH
ಹೊಸ ಸೇರ್ಪಡೆ
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.