![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 15, 2021, 7:50 PM IST
ಲಂಡನ್ : ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರಿಯ ವಿರುದ್ಧ ಫೈಜರ್ ಹಾಗೂ ಆಸ್ಟ್ರಾಜೆನಿಕಾ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರಿ ಸೋಂಕು ಅಮೆರಿಕಾದಲ್ಲಿ ಪತ್ತೆಯಾದ ಆಲ್ಫಾ ರೂಪಾಂತರಿ ಸೋಂಕಿಗಿಂತ ತೀವ್ರತೆ ಹೆಚ್ಚು ಎಂದು ವೈದ್ಯಕೀಯ ವರದಿ ತಿಳಿಸಿದೆ. ಆದರೇ, ಡೆಲ್ಟಾ ರೂಪಾಂತರಿ ಸೋಂಕಿನ ವಿರುದ್ಧ ರಷ್ಯಾ ಮೂಲದ ಫೈಜರ್ ಹಾಗೂ ಆಸ್ಟ್ರಾಜೆನಿಕಾ ಲಸಿಕೆಗಳು ಪರಿಣಾಮಕಾರಿ ಎಂದು ಲಾನ್ಸೆಟ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದು ಹೇಳಿದೆ.
ಇದನ್ನೂ ಓದಿ : ಕೋವಿಡ್:ರಾಜ್ಯದಲ್ಲಿಂದು 14785 ಸೋಂಕಿತರು ಗುಣಮುಖ; 5041 ಹೊಸ ಪ್ರಕರಣ ಪತ್ತೆ
ಎಡಿನ್ಬರ್ಗ್ ವಿಶ್ವ ವಿದ್ಯಾಲಯ ಹಾಗೂ ಪಬ್ಲಿಕ್ ಹೆಲ್ತ್ ಸ್ಕಾಟ್ ಲ್ಯಾಂಡ್ ನ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದು, ಭಾರತದಲ್ಲಿ ಪತ್ತೆಯಾದ ಡೆಲ್ಟಾ ಕೋವಿಡ್ ಸೋಂಕಿನ ರೂಪಾಂತರಿ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ.
ಏಪ್ರಿಲ್ 1 ರಿಂದ ಜೂನ್ 6 2021 ನಡುವಿನ 19,543 ಕೋವಿಡ್ ಪ್ರಕರಣಗಳನ್ನು ಈ ಅಧ್ಯಯನಕ್ಕೆ ಒಳಪಡಿಸಿಕೊಳ್ಳಲಾಗಿದೆ.
ಡೆಲ್ಟಾ ರೂಪಾಂತರಿ ವಿರುದ್ಧ ಶೇ. 92ರಷ್ಟು ಪರಿಣಾಮಕಾರಿ ಫೈಜರ್ :
ಅಮೆರಿಕಾದಲ್ಲಿ ಪತ್ತೆಯಾದ ಆಲ್ಫಾ ಕೋವಿಡ್ ರೂಪಾಂತರಿ ಸೋಂಕಿನ ವಿರುದ್ಧ ರಷ್ಯಾದ ಫೈಜರ್ ಲಸಿಕೆ ಶೇಕಡಾ 73 ರಷ್ಟ ಪರಿಣಾಮಕಾರಿಯಾಗಿದ್ದು, ಹಾಗೂ ಭಾರತದಲ್ಲಿ ಪತ್ತೆಯಾದ ಡೆಲ್ಟಾ ಕೋವಿಡ್ ರೂಪಾಂತರಿ ಸೋಂಕಿನ ವಿರುದ್ಧ ಶೇಕಡಾ 92 ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಇನ್ನು, ಆಸ್ಟ್ರಾಜೆನಿಕಾ ಲಸಿಕೆ ಅಮೆರಿಕಾದಲ್ಲಿ ಕಾಣಿಸಿಕೊಂಡ ಆಲ್ಫಾ ಸೋಂಕಿನ ವಿರುದ್ಧ ಶೇಕಡಾ 73 ರಷ್ಟು ಹಾಗೂ ಭಾರತದಲ್ಲಿ ಪತ್ತೆಯಾದ ಡೆಲ್ಟಾ ಸೋಂಕಿನ ವಿರುದ್ಧ ಶೇಕಡಾ 60 ರಷ್ಟು ಪರಿಣಾಮಕಾರಿಯಾಗಿದೆ. ಆಸ್ಟ್ರಾಜೆನಿಕಾ ಲಸಿಕೆಯ ಎರಡು ಡೋಸ್ ಗಳು ಡೆಲ್ಟಾ ಸೋಂಕಿನ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಕೂಡ ತಿಳಿಸಿದೆ.
ಆಲ್ಫಾ ರೂಪಾಂತರಿ ಸೋಂಕಿಗೆ ಒಳಗಾದವರಿಗಿಂತ ಹೆಚ್ಚು ಡೆಲ್ಟಾ ಸೋಂಕಿಗೆ ಒಳಗಾದವರು ಪ್ರಮಾಣದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಡೆಲ್ಟಾ ಸೋಂಕು ಆಲ್ಫಾ ಸೋಂಕಿಗಿಂತ ಅಪಾಯಕಾರಿಯಾಗಿದ್ದು ಎಚ್ಚರಿಕೆ ಅಗತ್ಯವೆಂದೂ ಕೂಡ ಸಂಶೋಧಕರು ಎಚ್ಚರಿಸಿದ್ದಾರೆ.
ಲಸಿಕೆಗಳ ಮಧ್ಯೆ ಹೋಲಿಕೆ ಸಲ್ಲದು :
ಈ ಎರಡೂ ಲಸಿಕೆಗಳು ಭಾರತದಲ್ಲಿ ಪತ್ತೆಯಾದ ಡೆಲ್ಟಾ ಸೋಂಕಿನ ವಿರುದ್ದ ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದ್ದಲ್ಲದೇ, ಲಸಿಕೆಗಳ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ, ಆದರೇ, ಬಿಕ್ಕಟ್ಟನನು ನಿಯಂತ್ರಣ ಮಾಡುವಲ್ಲಿ ಶೀಘ್ರವಾಗಿ ಕಾರ್ಯೋನ್ಮುಖರಾಗಬೇಕಾದ ಸಂದರ್ಭದಲ್ಲಿ ಜಗತ್ತು ಇರುವ ಕಾರಣದಿಂದಾಗಿ ಲಸಿಕೆಗಳ ಸಾಮರ್ಥ್ಯ ಹಾಗೂ ಪರಿಣಾಮಕಾರಿತ್ವದ ಬಗ್ಗೆ ನಾವು ಅಧ‍್ಯಯನ ನಡೆಸಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆ ಜಿಲ್ಲೆಯಲ್ಲಿ 789 ಮಂದಿ ಗುಣಮುಖ : 183 ಹೊಸ ಪ್ರಕರಣ ಪತ್ತೆ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.