2014ರ ಮಲೇಷ್ಯಾ ವಿಮಾನ ಪತನಕ್ಕೆ ಪೈಲಟ್ ಸಂಚು ಕಾರಣ: ತಜ್ಞರ ಶಂಕೆ
ಸಾಮೂಹಿಕ ನರಮೇಧಕ್ಕೆ ಪ್ಲ್ರಾನ್?
Team Udayavani, Mar 11, 2024, 6:10 AM IST
ವಾಷಿಂಗ್ಟನ್: 2014ರಲ್ಲಿ ಮಲೇಷ್ಯಾ ಏರ್‌ಲೈನ್‌ನ ಎಂಎಚ್ 370 ವಿಮಾನ ನಿಗೂಢವಾಗಿ ನಾಪತ್ತೆಯಾಗಿ ಪತನಗೊಂಡಿ ದ್ದರ ಹಿಂದೆ ವಿಮಾನದ ಪೈಲಟ್‌ನ ಕೈವಾಡವಿದ್ದು, ಈ ಪ್ರಕರಣ ಆತ ಮುಂಚಿತವಾಗಿಯೇ ರೂಪಿಸಿದ್ದ ನರಮೇಧದ ಸಂಚಾಗಿರುವ ಸಾಧ್ಯತೆ ಇದೆ ಎಂದು ಬ್ರಿಟನ್‌ನ ವೈಮಾನಿಕ ಕ್ಷೇತ್ರದ ಪರಿಣತ ಸೈಮನ್ ಹಾರ್ಡಿ ಹೇಳಿದ್ದಾರೆ.
ಪೈಲಟ್ ಜಹೈರೆ ಅಹ್ಮದ್ ಶಾ ವಿಮಾನದಲ್ಲಿರುವ ಎಲ್ಲರನ್ನೂ ಕೊಲ್ಲಲು ಮೊದಲೇ ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿಯೇ ವಿಮಾನ ಟೇಕಾಫ್ ಆಗುವ ಮುನ್ನವೇ ಹೆಚ್ಚುವರಿ ಇಂಧನ ಮತ್ತು ಅವರಿಗೆ ಮಾತ್ರ ಅಗತ್ಯವಿರುವ ಆಮ್ಲಜನಕವನ್ನು ಸಂಗ್ರಹಿಸಿದ್ದಾರೆ. ಬಳಿಕ 7 ಗಂಟೆಗಳ ಕಾಲ ಹೆಚ್ಚುವರಿಯಾಗಿ ವಿಮಾನ ಹಾರಾಟ ನಡೆಸಿದ್ದು, ಅಷ್ಟರಲ್ಲಾಗಲೇ ಸಿಬಂದಿ ಮತ್ತು ಪ್ರಯಾಣಿಕರು ಪ್ರಜ್ಞಾಹೀನರಾಗಿದ್ದಾರೆ. ಅನಂತರ ಜಹೈರ್ ವಿಮಾನವನ್ನು ಸಮುದ್ರದಲ್ಲಿ ಪತನಗೊಳಿಸಿದ್ದಾರೆ.ಜಹೈರ್ ತಮ್ಮ ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಈ ತಂತ್ರ ರೂಪಿಸಿರಬಹುದು. ಹೆಚ್ಚುವರಿ ಇಂಧನ ಸಂಗ್ರಹದಂಥ ಹಲವು ಕುರುಹುಗಳು ಈ ಶಂಕೆಯನ್ನು ಬಲಪಡಿಸಿವೆ ಎಂದು ಹಾರ್ಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.