ಪೈಲಟ್ ಬಿಡುಗಡೆ ಶಾಂತಿ ಮಾತುಕತೆಯ ಮೊದಲ ಹೆಜ್ಜೆ : PM ಇಮ್ರಾನ್ ಖಾನ್
Team Udayavani, Feb 28, 2019, 12:12 PM IST
ಇಸ್ಲಾಮಾಬಾದ್ : ‘ಭಾರತ – ಪಾಕ್ ನಡುವೆ ಶಾಂತಿ ನೆಲೆಸಬೇಕು ಎಂಬ ನನ್ನ ಹಂಬಲದ ಪ್ರಕಾರ ಮತ್ತು ಭಾರತ-ಪಾಕ್ ಶಾಂತಿ ಮಾತುಕತೆಯನ್ನು ಆರಂಭಿಸುವ ಮೊದಲ ಹೆಜ್ಜೆಯಾಗಿ ನಾಳೆ ಶುಕ್ರವಾರ ಭಾರತೀಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡುವ ಪ್ರಕಟನೆಯನ್ನು ಮಾಡುತ್ತಿದ್ದೇನೆ’ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಂದು ಪಾಕ್ ಸದಸನದ ಜಂಟಿ ಅಧಿವೇಶನದಲ್ಲಿ ಘೋಷಿಸಿದರು.
‘ನಮಗೆ ಶಾಂತಿ ಮುಖ್ಯ. ಪ್ರಾದೇಶಿಕ ಶಾಂತಿಯಿಂದ ನಾವು ಆರ್ಥಿಕಾಭಿವೃದ್ಧಿ ಸಾಧಿಸಲು ಸಾಧ್ಯ, ಪುಲ್ವಾಮಾ ಉಗ್ರ ದಾಳಿ ಬಗ್ಗೆ ನಮಗೆ ಸಾಕ್ಷ್ಯ ಕೊಡಿ ಎಂದು ನಾನು ಭಾರತವನ್ನು ಕೇಳಿಕೊಂಡಿದ್ದೇನೆ ಆ ಪ್ರಕಾರ ನಾವು ಕ್ರಮ ತೆಗೆದುಕೊಳ್ಳುವ ಭರವಸೆ ನೀಡುತ್ತಿದ್ದೇನೆ’ ಎಂದು ಇಮ್ರಾನ್ ಪುನರುಚ್ಚರಿಸಿದರು.
ನಾನು ನಿನ್ನೆ ಬುಧವಾರ ಸಂಜೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದೆ; ಅವರಿಗೆ ನಮ್ಮ ಶಾಂತಿ ಸಂದೇಶವನ್ನು ತಲುಪಿಸಲು ಬಯಸಿದ್ದೆ ಎಂದು ಇಮ್ರಾನ್ ಖಾನ್ ಸದನಕ್ಕೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.