ಭಾರತದ ವಿಮಾನಗಳನ್ನು ಹಾರಿಸಲು ಸಮರ್ಥರಿರುವ ಒಬ್ಬನೇ ಒಬ್ಬ ಪೈಲೆಟ್ ನಮ್ಮಲಿಲ್ಲ: ಮಾಲ್ಡೀವ್ಸ್
Team Udayavani, May 13, 2024, 11:26 AM IST
ಮಾಲೆ: ಮಾಲ್ಡೀವ್ಸ್ ಮತ್ತು ಭಾರತ ನಡುವಿನ ಸಂಬಂಧಗಳು ಉದ್ವಿಗ್ನವಾಗಿವೆ. ಇದರ ನಡುವೆ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಆದೇಶದ ಮೇರೆಗೆ ಮಾಲ್ಡಿವ್ಸ್ ನಲ್ಲಿದ್ದ 76 ಭಾರತೀಯ ರಕ್ಷಣಾ ಸಿಬ್ಬಂದಿ ದೇಶವನ್ನು ತೊರೆದ ನಂತರ, ರಕ್ಷಣಾ ಸಚಿವ ಘಾಸನ್ ಮೌಮೂನ್ ಅವರು ಭಾರತವು ನೀಡಿದ ಮೂರು ವಿಮಾನಗಳನ್ನು ಹಾರಿಸಲು ಸಾಮರ್ಥ್ಯವಿರುವ ಒಬ್ಬನೇ ಒಬ್ಬ ಪೈಲೆಟ್ ಪ್ರಸ್ತುತ ತಮ್ಮ ಸೈನ್ಯದಲ್ಲಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಶನಿವಾರ ರಾಷ್ಟ್ರಪತಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಬಳಿಕ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂಎನ್‌ಡಿಎಫ್) ನಲ್ಲಿ ಭಾರತೀಯ ಸೇನೆಯು ನೀಡಿದ ಮೂರು ವಿಮಾನಗಳನ್ನು ನಿರ್ವಹಿಸುವ ಯಾವುದೇ ಸೈನಿಕರು ನಮ್ಮಲ್ಲಿ ಇಲ್ಲ. ಹಿಂದಿನ ಸರ್ಕಾರಗಳೊಂದಿಗಿನ ಒಪ್ಪಂದಗಳ ಅಡಿಯಲ್ಲಿ ಕೆಲವು ಸೈನಿಕರು ಅವುಗಳನ್ನು ಹಾರಿಸಲು ತರಬೇತಿ ಪಡೆಯುತ್ತಿದ್ದರು. ಆದರೆ ಇದು ವಿವಿಧ ಹಂತಗಳ ಮೂಲಕ ಪಡೆಯಬೇಕಾದ ತರಬೇತಿಯಾಗಿತ್ತು. ನಮ್ಮ ಸೈನಿಕರು ವಿವಿಧ ಕಾರಣಗಳಿಂದ ಈ ಹಂತಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಪ್ರಸ್ತುತ ನಮ್ಮ ಪಡೆಯಲ್ಲಿ ಎರಡು ಹೆಲಿಕಾಪ್ಟರ್ ಮತ್ತು ಡಾರ್ನಿಯರ್ ವಿಮಾನಗಳನ್ನು ಹಾರಿಸಲು ಸಮರ್ಥವಾಗಿರುವ ಯಾವುದೇ ವ್ಯಕ್ತಿ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮೇ 10ರೊಳಗೆ ಎಲ್ಲಾ ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂಪಡೆಯುವಂತೆ ಚೀನಾ ಪರ ನಾಯಕ ಮುಯಿಝು ಮನವಿ ಮಾಡಿದ್ದರು. ಈ ವಿಮಾನಗಳನ್ನು ನಿರ್ವಹಿಸಲು ಈ ಸೇನಾ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿತ್ತು. ಭಾರತ ಈಗಾಗಲೇ 76 ಸೇನಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದೆ. ಮುಯಿಝು ಅವರ ಈ ನಿರ್ಧಾರದ ನಂತರ, ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗಿದೆ. ಸೋನಾಹಿಯಾ ಮಿಲಿಟರಿ ಆಸ್ಪತ್ರೆಯಿಂದ ವೈದ್ಯರನ್ನು ತೆಗೆದುಹಾಕುವ ಯಾವುದೇ ಉದ್ದೇಶವನ್ನು ತಮ್ಮ ಸರ್ಕಾರ ಹೊಂದಿಲ್ಲ ಎಂದು ಮಾಲ್ಡೀವಿಯನ್ ಮಾಧ್ಯಮ ವರದಿ ಹೇಳಿದೆ.
ಇದನ್ನೂ ಓದಿ: Shimoga: ಆಟೋಗೆ ಕ್ಯಾಂಟರ್ ಡಿಕ್ಕಿ, ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Surathkal: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಮುಲ್ಕಿ ಕಂದಾಯ ನಿರೀಕ್ಷಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.