Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Team Udayavani, May 22, 2024, 12:18 AM IST

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಬ್ಯಾಂಕಾಕ್‌: ಲಂಡನ್‌ನಿಂದ ಸಿಂಗಾಪುರಕ್ಕೆ ಹೊರಟಿದ್ದ ಸಿಂಗಾಪುರ್‌ ಏರ್‌ಲೈನ್ಸ್‌ನ ವಿಮಾನ ಆಗಸದಲ್ಲೇ ತೀವ್ರ ಪ್ರಕ್ಷುಬ್ಧತೆಗೆ ಸಿಲುಕಿ ಓಲಾಡಿದ ಕಾರಣ ಒಬ್ಬ ಪ್ರಯಾಣಿಕ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಹೊತ್ತಿನಲ್ಲಿ ಬೋಯಿಂಗ್‌ 777-300ಇಆರ್‌ ವಿಮಾನ ಆಗಸದಲ್ಲಿ ತೀವ್ರ ಪ್ರಕ್ಷುಬ್ಧತೆಗೆ ಸಿಲುಕಿತು. ಬಳಿಕ ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಯಾನದ ವೇಳೆಯೇ ವಿಮಾ ನವು ಏಕಾ ಏಕಿ ಓಲಾ ಡಿದ ಕಾರಣ ಪ್ರಯಾಣಿಕರೊಬ್ಬ ರು ಮೃತಪಟ್ಟಿದ್ದು, ಹಲವು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಅವರೆಲ್ಲರನ್ನು ಬ್ಯಾಂಕಾಕ್‌ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಏರ್‌ಲೈನ್ಸ್‌ ತಿಳಿಸಿದೆ. ವಿಮಾನದಲ್ಲಿ 211 ಪ್ರಯಾಣಿಕರು, 18 ಸಿಬಂದಿ ಇದ್ದರು.

31 ಸಾವಿರ ಅಡಿಗೆ ಕುಸಿಯಿತು

ವಿಮಾನ ರೇಡಾರ್‌ ಮಾಹಿತಿ ಪ್ರಕಾರ ಭೀಕರ ಪ್ರಕ್ಷುಬ್ಧತೆ ಉಂಟಾದ ಕಾರಣ ವಿಮಾನ 3 ನಿಮಿಷದಲ್ಲಿ 37 ಸಾವಿರ ಅಡಿ ಎತ್ತರದಿಂದ 31 ಸಾವಿರ ಅಡಿಗಳಿಗೆ ಕುಸಿದಿದೆ. ಇದು ಲ್ಯಾಂಡಿಂಗ್‌ ಸಮಯದಲ್ಲಿ ಆಗುವ ಸಹಜ ಅವರೋಹಣ ಎಂದು ಭಾವಿಸಲಾಗಿತ್ತು. ಆದರೆ ಏಕಾಏಕಿ ವಿಮಾನ ಮೇಲೆ, ಕೆಳಗೆ ಆಗಿ ಅಲುಗಾಡತೊಡಗಿತು. ಸೀಟ್‌ಬೆಲ್ಟ್ ಧರಿಸದೆ ಇದ್ದ ಪ್ರಯಾಣಿಕರು ವಿಮಾನದ ಒಳಛಾವಣಿ, ಲಗೇಜ್‌ ಕ್ಯಾಬಿನ್‌, ಲೈಟ್‌, ಮಾಸ್ಕ್ಗೆ ಅಪ್ಪಳಿಸಿದ ಕಾರಣ ಗಾಯಗೊಂಡರು. ಹಲವರ ತಲೆ, ಬೆನ್ನಿಗೆ ಪೆಟ್ಟು ಬಿದ್ದು ರಕ್ತಸ್ರಾವವಾಯಿತು. ವಿಮಾನದ ಒಳಭಾಗಗಳು ಮುರಿದು, ಪ್ರಯಾಣಿಕರ ಮೇಲೆ ಬಿದ್ದು ಮತ್ತಷ್ಟು ಅನಾಹುತಕ್ಕೆ ಕಾರಣವಾಗಿದೆ.

ತುರ್ತು ಭೂಸ್ಪರ್ಶ 

ಅಪರಾಹ್ನ 3:45ಕ್ಕೆ ವಿಮಾನ ಬ್ಯಾಂಕಾಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರ ತಲೆಗೆ ಗಂಭೀರ ಗಾಯವಾಗಿದೆ. 30 ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಾಗಿಸಿದ್ದು, ಉಳಿದ ಪ್ರಯಾಣಿಕರು ಹಾಗೂ ಸಿಬಂದಿಗೆ ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ 73 ವರ್ಷದ ಬ್ರಿಟಿಷ್‌ ಪ್ರಜೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಬ್ಯಾಂಕಾಕ್‌ನ ಸುವರ್ಣಭೂಮಿ ವಿಮಾನ ನಿಲ್ದಾಣದ ಜನರಲ್‌ ಮ್ಯಾನೇಜರ್‌ ಕಿತ್ತಿಪೊಂಗ್‌ ಕಿತ್ತಿಕಚೊರ್ನ್ ತಿಳಿಸಿದ್ದಾರೆ. ಘಟನೆ ಕುರಿತು ಸಿಂಗಾಪುರ್‌ ಏರ್‌ಲೈನ್ಸ್‌ ಸಂಸ್ಥೆ ಹಾಗೂ ಸಿಂಗಾಪುರ ಸರಕಾರ ವಿಷಾದ ವ್ಯಕ್ತಪಡಿಸಿದೆ ಹಾಗೂ ಪರಿಹಾರ ಕಾರ್ಯಕ್ಕೆ ಮುಂದಾಗಿದೆ.

ಸೀಟ್‌ಬೆಲ್ಟ್ ಧರಿಸಿರಲಿಲ್ಲ

ವಿಮಾನ ಒಮ್ಮೆಲೆ ಅಲುಗಾಡತೊಡಗಿತು. ನಾನು ಕಿರುಚಾಡಿದೆ. ಕೂಡಲೇ ವಿಮಾನ ಕೆಳಗೆ ಹೋಯಿತು. ಪ್ರಯಾಣಿಕರಲ್ಲಿ ಬಹುತೇಕರು ಸೀಟ್‌ಬೆಲ್ಟ್ ಧರಿಸಿರಲಿಲ್ಲ. ಹಾಗಾಗಿ ಎಲ್ಲರೂ ವಿಮಾನದ ಒಳಛಾವಣಿಗೆ ಅಪ್ಪಳಿಸಿದರು. ಶೌಚಾಲಯದಲ್ಲಿದ್ದ ಪ್ರಯಾಣಿಕರಿಗೆ ಹೆಚ್ಚಿನ ಗಾಯವಾಗಿದೆ. ವಿಮಾನ ಲ್ಯಾಂಡ್‌ ಆದ ಅನಂತರ 90 ನಿಮಿಷದಲ್ಲಿ ಎಲ್ಲರನ್ನು ಸುರಕ್ಷಿತವಾಗಿ ಹೊರತರಲಾಯಿತು ಎಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 28 ವರ್ಷದ ಜಫ್ರಾನ್‌ ಅಜ್ಮಿರ್‌ ತಿಳಿಸಿದ್ದಾರೆ.

ವಿಮಾನದಲ್ಲಿ ನಿಂತಿದ್ದ ಪ್ರಯಾಣಿಕ:ನಿಲ್ದಾಣಕ್ಕೆ ವಾಪಸಾದ ಫ್ಲೈಟ್‌!

ಮುಂಬಯಿ: ಮಹಾರಾಷ್ಟ್ರದ ಮುಂಬಯಿಯಿಂದ ವಾರಾಣಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ನಿಂತು ಪ್ರಯಾಣಿಸಲು ಮುಂದಾಗಿದ್ದರು. ಹಾರಾಟ ಪ್ರಾರಂಭವಾದ ಬಳಿಕ ವಿಮಾನದ ಸಿಬಂದಿ ಇದನ್ನು ಗಮನಿಸಿದ್ದು, ವಿಮಾನ ಮತ್ತೆ ಮುಂಬಯಿ ನಿಲ್ದಾಣಕ್ಕೆ ಹಿಂದಿರುಗಿದ ಘಟನೆ ಮಂಗಳವಾರ ನಡೆದಿದೆ. ಸಾಮಾನ್ಯವಾಗಿ ವಿಮಾನ ಕಡೆ ಘಳಿಗೆಯಲ್ಲಿ ಖಾಲಿ ಹೋಗದಂತೆ ತಡೆಯಲು ಸೀಟುಗಳನ್ನು ಭರ್ತಿ ಮಾಡಲು ಹೆಚ್ಚುವರಿ ಪ್ರಯಾಣಿಕರಿಗೆ ಟಿಕೆಟ್‌ ನೀಡಲಾಗಿರುತ್ತದೆ. ಮಂಗಳವಾರ ಇಂಡಿಗೋದ 6ಇ 6543 ವಿಮಾನದಲ್ಲಿ ಈಗಾಗಲೇ ಸೀಟ್‌ ಬುಕ್‌ ಮಾಡಿದ್ದ ವ್ಯಕ್ತಿಯ ಜಾಗಕ್ಕೇ ಮತ್ತೂಬ್ಬ ಹೆಚ್ಚುವರಿ ಪ್ರಯಾಣಿಕನಿಗೂ ಟಿಕೆಟ್‌ ನೀಡಲಾಗಿತ್ತು. ಸಿಬಂದಿ ಸರಿಯಾಗಿ ಪರಿಶೀಲಿಸದೆ ಹೆಚ್ಚುವರಿ ಪ್ರಯಾಣಿಕನೂ ವಿಮಾನ ಏರಿದ್ದರು. ಸೀಟು ಭರ್ತಿಯಾಗಿದ್ದ ಕಾರಣ ಆತ ನಿಂತೇ ಇದ್ದರು. ವಿಮಾನ ಹಾರಾಟ ಆರಂಭಿಸಿದ ಬಳಿಕ ಸಿಬಂದಿ ಇದನ್ನು ಗಮನಿಸಿದ ಹಿನ್ನೆಲೆಯಲ್ಲಿ ವಿಮಾನ ಮತ್ತೆ ನಿಲ್ದಾಣಕ್ಕೆ ಹಿಂದಿರುಗಿದೆ.

ಟಾಪ್ ನ್ಯೂಸ್

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್

1-qeqwe

Russia ದಿಂದ ಉಕ್ರೇನ್‌ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ

Chrome Browser: ಗೂಗಲ್‌ ಸರ್ಚ್‌ ಎಂಜಿನ್‌ ಕ್ರೋಮ್‌ ಮಾರಾಟ?

Chrome Browser: ಗೂಗಲ್‌ ಸರ್ಚ್‌ ಎಂಜಿನ್‌ ಕ್ರೋಮ್‌ ಮಾರಾಟ?

ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್‌ ಸೈಕ್ಲೋನ್‌, 6 ಲಕ್ಷ ಮನೆಗಳಿಗೆ ವಿದ್ಯುತ್‌ ಕಡಿತ

ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್‌ ಸೈಕ್ಲೋನ್‌, 6 ಲಕ್ಷ ಮನೆಗಳಿಗೆ ವಿದ್ಯುತ್‌ ಕಡಿತ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.