ಪೈಲಟ್ ಮೇಲೆ ಬೆಕ್ಕಿನ ದಾಳಿ….ವಿಮಾನ ತುರ್ತು ಭೂಸ್ಪರ್ಶ!
ಪರಿಸ್ಥಿತಿ ಕೈಮೀರುವ ಮುನ್ನವೆ ಅನಿವಾರ್ಯವಾಗಿ ವಿಮಾನವನ್ನು ವಾಪಸ್ ಖಾರ್ಟೌಮ್ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
Team Udayavani, Mar 1, 2021, 6:38 PM IST
ಸುಡಾನ್ : ತಾಂತ್ರಿಕ ದೋಷ ಇಲ್ಲವೆ, ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾದಂತಹ ಕೆಲವು ಸಂದರ್ಭಗಳಲ್ಲಿ ವಿಮಾನಗಳು ತುರ್ತು ಭೂಸ್ಪರ್ಶ ಮಾಡಿರುವ ಘಟನೆಗಳು ಸಾಕಷ್ಟು ನಡೆದಿವೆ. ಆದರೆ, ಸುಡಾನ್‍ನಲ್ಲಿ ಪುಟ್ಟ ಬೆಕ್ಕೊಂದು ಆಗಸದಲ್ಲಿ ಹಾರುತ್ತಿದ್ದ ವಿಮಾನ ಭೂಮಿಗೆ ಇಳಿಯುವಂತೆ ಮಾಡಿದೆ.
ಹೌದು, ತುಂಬಾ ಕುತೂಹಲ ಮೂಡಿಸುವ ಈ ಪ್ರಸಂಗ ನಡೆದಿರುವುದು ಸುಡಾನ್ ದೇಶದ ಖಾರ್ಟೌಮ್ ನಲ್ಲಿ. ಪ್ರಯಾಣಿಕರನ್ನು ಹೊತ್ತು ಖಾರ್ಟೌಮ್‍ನಿಂದ ಪ್ರಯಾಣ ಬೆಳೆಸಿದ ವಿಮಾನ, ಅರ್ಧಗಂಟೆಯಲ್ಲಿ ಅದೇ ನಿಲ್ದಾಣಕ್ಕೆ ಹಿಂದುರಿಗಿ ಲ್ಯಾಂಡ್ ಆಗಿದೆ. ವಿಮಾನದ ಈ ತುರ್ತು ಲ್ಯಾಂಡಿಂಗ್ ಗೆ ಕಾರಣವಾಗಿದ್ದು ಒಂದು ಬೆಕ್ಕು ಎಂಬ ವಿಚಾರ ಅಧಿಕಾರಿಗಳಿಗೆ ಹಾಗೂ ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿದೆ.
ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ?
ಈ ವಿಮಾನ ಟೆಕ್ ಆಫ್ ಆಗಿ ಅರ್ಧ ಗಂಟೆಯಾಗಿತ್ತು. ಈ ವೇಳೆ ಕಾಕ್‍ಪಿಟ್ ಪ್ರವೇಶಿಸಿದ ಬೆಕ್ಕು ಪೈಲಟ್ ಮೇಲೆ ದಾಳಿ ನಡೆಸಿದೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಬೆಕ್ಕನ್ನು ಹಿಡಿಯಲು ವಿಮಾನದ ಸಿಬ್ಬಂದಿ ವಿಫಲರಾಗಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನವೆ ಅನಿವಾರ್ಯವಾಗಿ ವಿಮಾನವನ್ನು ವಾಪಸ್ ಖಾರ್ಟೌಮ್ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದೆ.
ಬೆಕ್ಕು ಹೇಗೆ ಬಂತು ?
ಇನ್ನು ವಿಮಾನದ ಪ್ರಯಾಣಕ್ಕೆ ಅಡ್ಡಿ ಪಡಿಸಿದ ಈ ಬೆಕ್ಕು ಯಾರದು ? ಅದು ಕಾಕ್‍ಪಿಟ್ ಪ್ರವೇಶಿಸಿದ್ದು ಹೇಗೆ ಎಂಬುದಕ್ಕೆ ಸರಿಯಾದ ಉತ್ತರ ಸಿಕ್ಕಿಲ್ಲ. ಅದು ಪ್ರಯಾಣಿಕರಿಗೆ ಸೇರಿದ ಬೆಕ್ಕು ಎನ್ನಲಾಗುತ್ತಿದೆ. ಈ ಕುರಿತು ತನಿಖೆ ನಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.