Brazil ನಲ್ಲಿ ಭೀಕರ ದುರಂತ; ವಸತಿ ಪ್ರದೇಶದಲ್ಲಿ 62 ಜನರಿದ್ದ ವಿಮಾನ ಪತನ
ವಿಮಾನದಲ್ಲಿ ಇದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದ ಬ್ರೆಝಿಲ್ ಅಧ್ಯಕ್ಷ
Team Udayavani, Aug 9, 2024, 11:57 PM IST
ಸಾವೊ ಪಾವ್ಲೋ : ಬ್ರೆಝಿಲ್ ನ ಸಾವೊ ಪಾವ್ಲೋ ರಾಜ್ಯದ ವಿನ್ಹೆಡೊದ ವಸತಿ ಪ್ರದೇಶದಲ್ಲಿ 62 ಜನರನ್ನು ಹೊತ್ತ ವಿಮಾನವು ಶುಕ್ರವಾರ(ಆಗಸ್ಟ್ 9 ) ಪತನಗೊಂಡಿದೆ ಎಂದು ವಿಮಾನಯಾನ ಸಂಸ್ಥೆ VoePass ತಿಳಿಸಿದೆ.
ವಿಮಾನವು ಸಾವೊ ಪಾವ್ಲೋದ ಗೌರುಲ್ಹೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು.ವಿಮಾನದಲ್ಲಿ 58 ಪ್ರಯಾಣಿಕರು ಮತ್ತು 4 ಮಂದಿ ಸಿಬಂದಿ ಇದ್ದರು. ಅಪಘಾತಕ್ಕೆ ಕಾರಣ ಏನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.
ದಕ್ಷಿಣ ಬ್ರೆಝಿಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಿ ಸಿಲ್ವಾ ದುರಂತದ ಕುರಿತು ಘೋಷಿಸಿ ಒಂದು ಕ್ಷಣ ಮೌನ ಆಚರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. ವಿಮಾನದಲ್ಲಿ ಇದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದು, ಸಾವಿನ ಸಂಖ್ಯೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಮಿಲಿಟರಿ, ಪೊಲೀಸರು, ಅಗ್ನಿಶಾಮಕ ದಳದವರು, ಮತ್ತು ನಾಗರಿಕ ರಕ್ಷಣ ತಂಡಗಳನ್ನು ಅಪಘಾತದ ಸ್ಥಳಕ್ಕೆ ಕಳುಹಿಸಲಾಗಿದೆ. ಗ್ಲೋಬೋನ್ಯೂಸ್ ಪ್ರಸಾರ ಮಾಡಿದ ದೃಶ್ಯಾವಳಿಗಳು ದಟ್ಟವಾದ ಜನನಿಬಿಡ ವಸತಿ ಪ್ರದೇಶದಲ್ಲಿ ವಿಮಾನದಿಂದ ದೊಡ್ಡ ಜ್ವಾಲೆ ಮತ್ತು ಹೊಗೆ ಬರುತ್ತಿರುವುದನ್ನು ತೋರಿಸಿದೆ. ವಿಮಾನವು ಕೆಳಕ್ಕೆ ಉರುಳುತ್ತಿರುವುದನ್ನೂ ಸೆರೆಹಿಡಿಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
Bangladesh: 42,600 ಕೋಟಿ ರೂ. ಲಂಚ ಕೇಸ್: ಹಸೀನಾ ವಿರುದ್ಧ ತನಿಖೆ ಶುರು
America: ಪ್ರತೀಕಾರ- ಭಾರತದ ನಟೋರಿಯಸ್ ಡ್ರ*ಗ್ಸ್ ಸ್ಮಗ್ಲರ್ ಶೂಟೌಟ್ ನಲ್ಲಿ ಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.