ಪ್ಲಾಸ್ಮಾ ಟ್ರೀಟ್ಮೆಂಟ್ ಕೋವಿಡ್ 19ಗೆ ಮದ್ದು!
ಮುಳ್ಳನ್ನು ಮುಳ್ಳಿನಿಂದಲೇ ತೆಗಿರಿ ಎಂದರೆ ಇದೇನಾ...
Team Udayavani, Mar 31, 2020, 8:00 PM IST
ಬೀಜಿಂಗ್: ಮುಳ್ಳನ್ನು ಮುಳ್ಳಿನಿಂದಲೇ ತೆಗಿಯಬೇಕು ಎಂಬ ಮಾತಿದೆ. ಅಕ್ಷರಶಃ ಇದೇ ಮಾತಿನ ಮೊರೆ ಹೋಗಿರುವ ವೈದ್ಯರು ಕೋವಿಡ್-19 ಗೆ ಮದ್ದು ಅರೆಯುತ್ತಿದ್ದಾರೆ. ಕೋವಿಡ್-19 ಮಣಿಸಿ ಗೆದ್ದು ಬಂದಿರುವ ರೋಗಿಗಳ ರಕ್ತವನ್ನೇ ಕೋವಿಡ್-19 ವಿರುದ್ಧ ಪ್ರಯೋಗಿಸಲು ಮುಂದಾಗಿದ್ದಾರೆ.
ಹೌದು ಕೋವಿಡ್-19 ದಿಂದ ಬೇಸತ್ತಿರುವ ವಿಶ್ವಕ್ಕೆ ಸಮಾಧಾನದ ಸುದ್ದಿಯೊಂದಿದೆ. ಅದೂ ಚೀನದಿಂದಲೇ. ಕೋವಿಡ್-19ಗೆ ತಕ್ಕ ಲಸಿಕೆ ಸಿದ್ಧವಾಗದಿದ್ದರೂ, ಅದರ ವಿರುದ್ದ ಸಮರ್ಥ ಹೋರಾಟ ರೂಪಿಸಿ ಜೀವವನ್ನುಳಿಸಿಕೊಳ್ಳಬಲ್ಲ ರೋಗ ನಿರೋಧಕ ವ್ಯವಸ್ಥೆಯೊಂದನ್ನು ಚೀನ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಹೇಗೆ ಕೆಲಸ ಮಾಡುತ್ತದೆ?
ವಿಜ್ಞಾನಿಗಳು ರೋಗದಿಂದ ಗುಣಮುಖರಾಗಿರುವ ‘ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳ ರಕ್ತ ಮಾದರಿ ಸಂಗ್ರಹಿಸಿ ಅದರಲ್ಲಿನ ಶಕ್ತಿಯುತ ಪ್ಲಾಸ್ಮಾ ಕಣಗಳನ್ನು ಒಂದುಗೂಡಿಸಿ ಸೋಂಕಿತ ರೋಗಿಗಳಿಗೆ ನೀಡಲುದ್ದೇಶಿಸಿದ್ದಾರೆ. ಆ ಮೂಲಕ ಅವರಲ್ಲೂ ರೋಗ ನಿರೋಧ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದ್ದಾರೆ.
ಆರಂಭಿಕ ಪ್ರಯೋಗ
ಕೋವಿಡ್-19 ಸೋಂಕಿನಿಂದ ಸಂಪೂರ್ಣವಾಗಿರುವ ಗುಣಮುಖರಾಗಿರುವವರ ರಕ್ತದ ಪ್ಲಾಸ್ಮಾ ಪಡೆದು ಮೊದಲ ಹಂತದ ಪರೀಕ್ಷಾರ್ಥವಾಗಿ ಚೀನಾದ ವಿಜ್ಞಾನಿಗಳು ವೆಂಟಿಲೇಟರ್‌ನಲ್ಲಿನ ಐವರು ರೋಗಿಗಳಿಗೆ ಮೇಲೆ ಪ್ರಯೋಗಿಸಿದ್ದಾರೆ. ಇದು ಫಲಪ್ರದವಾಗಿದೆ ಎಂಬ ವರದಿಗಳು ಬರುತ್ತಿವೆ.
ಪ್ರಯೋಜನ ಏನು?
ಇದರಿಂದ ಸಾವಿನ ಸಂಖ್ಯೆಗೆ ಕಡಿವಾಣ ಬೀಳಲಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ವ್ಯವಸ್ಥೆ ಬಲಗೊಳ್ಳಲಿದೆ. ಇದು ರೋಗಿಗಳನ್ನು ವೆಂಟಿಲೇಟರ್‌ಗಳಿಂದ ದೂರವಿಡುವಷ್ಟರ ಮಟ್ಟಿಗೆ ನೆರವಾಗುತ್ತದೆ. ಅಂದರೆ ಕೃತಕ ಉಸಿರಾಟವಿಲ್ಲದೆ ರೋಗಿಗಳು ಬದುಕಬಹುದಾಗಿದೆ. ಇದರಿಂದ ಸಾವಿಗೆ ಬಲಿಯಾಗುತ್ತಿರುವವರ ಸಂಖ್ಯೆಗೆ ಕಡಿವಾಣ ಬೀಳಲಿದೆ.
ಸ್ಪಾನಿಶ್ ಫ್ಲೂನ ಪ್ರಯೋಗ
ಶತಮಾನದ ಹಿಂದೆ ಅಂದರೆ 1918ರಲ್ಲಿ ಸಾವಿಗೆ ಕಾರಣವಾದ ಸಾಂಕ್ರಾಮಿಕ ರೋಗ ಸ್ಪಾನಿಶ್ ಫ್ಲೂ ವಿರುದ್ಧವೂ ಇದೇ ತಂತ್ರ ಬಳಸಿ ರೋಗಿಗಳನ್ನು ಉಳಿಸಲಾಗಿತ್ತು. ಪ್ಲಾಸ್ಮಾ ದಾನಿಗಳ ನಿರೀಕ್ಷೆಯಲ್ಲಿ ವಿಜ್ಞಾನಿಗಳು ಕೋವಿಡ್-19 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವವರ ರಕ್ತದ ಪ್ಲಾಸ್ಮಾ ಸಂಗ್ರಹಿಸುತ್ತಿದ್ದಾರೆ. ಇದಕ್ಕೆ “ಹೈಪರ್‌ಇಮ್ಯೂನ್’ ವ್ಯಕ್ತಿಗಳು ಬೇಕಾಗಿದೆ.
ಅಂತಹವರನ್ನು ಗುರುತಿಸಿ, ಅವರಿಂದ ಪ್ಲಾಸ್ಮಾ ಪಡೆದು ಚಿಕಿತ್ಸೆ ಮುಂದುವರಿಸಲಾಗುತ್ತದೆ. ಇತಿಹಾಸದಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿರುವ ದಾಖಲೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.