PM Modi in France; 20 ಗಂಟೆ ದುಡಿಯುವ ರಹಸ್ಯ ಹೇಳಿ: ಪ್ರಧಾನಿಗೆ ಯುವಕನ ಪ್ರಶ್ನೆ
ಪ್ಯಾರಿಸ್ ನಲ್ಲಿ ವಿಧ್ಯುಕ್ತ ಸ್ವಾಗತ
Team Udayavani, Jul 13, 2023, 8:10 PM IST
ಪ್ಯಾರಿಸ್: ಫ್ರಾನ್ಸ್ ಪ್ರವಾಸಕ್ಕೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ಯಾರಿಸ್ ನಲ್ಲಿ ವಿಧ್ಯುಕ್ತ ಸ್ವಾಗತ ನೀಡಲಾಯಿತು. ಭಾರತೀಯರು ಅವರನ್ನು ಘೋಷಣೆಗಳನ್ನು ಮೊಳಗಿಸಿ ಆತ್ಮೀಯವಾಗಿ ಬರಮಾಡಿಕೊಂಡರು.
ಗುರುವಾರ ಸಂಜೆ ಭಾರತೀಯ ಕಾಲಮಾನ 4 ಗಂಟೆಗೆ ಸರಿಯಾಗಿ ಓರ್ಲಿ ವಿಮಾನ ನಿಲ್ದಾಣದಲ್ಲಿ ಫ್ರೆಂಚ್ ಪ್ರಧಾನಿ ಎಲಿಸಬೆತ್ ಬೋರ್ನ್ ಅವರಿಂದ ವಿಧ್ಯುಕ್ತ ಸ್ವಾಗತವನ್ನು ಪಡೆದರು. ಪ್ಯಾರಿಸ್‌ನ ಹೋಟೆಲ್‌ನ ಹೊರಗೆ ನೆರೆದಿದ್ದ ಭಾರತೀಯ ಮೂಲದ ಜನರು ಆತ್ಮೀಯವಾಗಿ ಸ್ವಾಗತಿಸಿದರು.
Watch an ecstatic youth ask PM Modi the secret of working 20 hours a day!#ModiInFrance pic.twitter.com/A31W3ZYsQE
— BJP (@BJP4India) July 13, 2023
ಪ್ರಧಾನಿ ಅವರನ್ನು ಸ್ವಾಗತಿಸುತ್ತಿದ್ದ ವೇಳೆ ಭಾವಪರವಶನಾದ ಭಾರತ ಮೂಲದ ಯುವಕ ಪ್ರಧಾನಿ ಮೋದಿಯವರ ಬಳಿ ”ದಿನಕ್ಕೆ 20 ಗಂಟೆ ದುಡಿಯುವ ರಹಸ್ಯ ವೇನು ಎಂದು ಹಿಂದಿಯಲ್ಲಿ ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಬೆನ್ನು ತಟ್ಟಿ ದರು ಆದರೆ ಉತ್ತರಿಸಲಿಲ್ಲ, ಅವರು ಎಲ್ಲರಿಗೂ ಕೈ ಮುಗಿಯುತ್ತಾ ನಗು ನಗುತ್ತಾ ಮುಂದೆ ಸಾಗಿದರು.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸುವ ಖಾಸಗಿ ಔತಣಕೂಟದಲ್ಲಿ ಪಾಲ್ಗೊಳ್ಳುವ ಮೊದಲು ಮೋದಿ ಅವರು ಫ್ರೆಂಚ್ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಮತ್ತು ಪಿಎಂ ಎಲಿಸಬೆತ್ ಬೋರ್ನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಸಂಜೆ, ಪ್ರಧಾನಮಂತ್ರಿಯವರು ಐಕಾನಿಕ್ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.