ರೋಮ್ ತಲುಪಿದ ಮೋದಿ; ಇಂದು ಕ್ರೈಸ್ತರ ಪರಮ ಗುರು ಪೋಪ್ ಫ್ರಾನ್ಸಿಸ್ ಭೇಟಿ
Team Udayavani, Oct 30, 2021, 6:10 AM IST
ರೋಮ್: ಜಿ 20 ರಾಷ್ಟ್ರಗಳ ಸಮ್ಮೇಳನದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ ಶುಕ್ರವಾರ ಇಟಲಿಯ ರಾಜಧಾನಿ ರೋಮ್ ತಲುಪಿದ್ದಾರೆ. ಕಳೆದ 12 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ರೋಮ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.
ತಮ್ಮ ಪ್ರವಾಸದ ಮೊದಲ ದಿನ ಮೋದಿ ಅವರು ಐರೋಪ್ಯ ಕೌನ್ಸಿಲ್ ಮತ್ತು ಐರೋಪ್ಯ ಕಮಿಷನ್‌ನ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ. ಅ. 29ರಿಂದ 31ರ ವರೆಗೆ ಅವರು ರೋಮ್ ಮತ್ತು ವ್ಯಾಟಿಕನ್ ಸಿಟಿಯಲ್ಲಿ ಇರಲಿದ್ದಾರೆ. ಶನಿವಾರ ಮೋದಿ ವ್ಯಾಟಿಕನ್ ಸಿಟಿಗೆ ತೆರಳಿ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ:ಈ ರಾಜ್ಯದಲ್ಲಿ ಎಂಬಿಬಿಎಸ್ ಶುಲ್ಕ 4.5 ಲಕ್ಷ ರೂ.ನಿಂದ 1.5 ಲಕ್ಷಕ್ಕೆ ಇಳಿಕೆ
ಗಾಂಧೀಜಿ ಪುತ್ಥಳಿಗೆ ನಮನ
ರೋಮ್ ತಲುಪಿದೊಡನೆಯೇ ಪ್ರಧಾನಿ ಮೋದಿ ಗಾಂಧೀಜಿಯ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ಅಲ್ಲಿ ನೆರೆದಿದ್ದ ಭಾರತೀಯ ಸಮುದಾಯವು ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತ ಮೋದಿ ಅವರನ್ನು ಸ್ವಾಗತಿಸಿತು. ಮೋದಿ ಕೈಮುಗಿದು “ಓಂ ನಮಃ ಶಿವಾಯ’ ಎಂದು ಪ್ರತಿಕ್ರಿಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.