ಹಸಿರು ವಜ್ರ, ಉಪನಿಷತ್ ಪುಸ್ತಕ, ದಶ ದಾನ..: ಬಿಡೆನ್ ದಂಪತಿಗೆ ಮೋದಿ ಕೊಟ್ಟ ಉಡುಗೊರೆಗಳೇನು?
Team Udayavani, Jun 22, 2023, 1:07 PM IST
ವಾಷಿಂಗ್ಟನ್ ಡಿಸಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ದೇಶಕ್ಕೆ ಭೇಟಿ ನೀಡಿದ್ದಾರೆ. ಶ್ವೇತ ಭವನದಲ್ಲಿ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರನ್ನು ಭೇಟಿಯಾದರು. ಪ್ರಧಾನಿ ಮೋದಿಯವರಿಗೆ ಬಿಡೆನ್ಸ್ ಆಯೋಜಿಸಿದ್ದ ಆತ್ಮೀಯ ಔತಣಕೂಟದಲ್ಲಿ ನಾಯಕರು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.
ಈ ಸಮಯದಲ್ಲಿ ಪ್ರಧಾನಿ ಮೋದಿ ಅವರು ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಇಬ್ಬರಿಗೂ ಹಲವು ಉಡುಗೊರೆಗಳನ್ನು ನೀಡಿದರು. ಅವುಗಳ ವಿವರ ಇಲ್ಲಿದೆ.
ಉಡುಗೊರೆ 1: ಶ್ರೀಗಂಧದ ಪೆಟ್ಟಿಗೆ
ಜೈಪುರದ ಕುಶಲಕರ್ಮಿಯೊಬ್ಬರು ಕರಕುಶಲತೆಯಿಂದ ತಯಾರಿಸಿದ ವಿಶೇಷ ಶ್ರೀಗಂಧದ ಪೆಟ್ಟಿಗೆಯನ್ನು ಪ್ರಧಾನಿ ಮೋದಿ ಅವರು ಜೋ ಬಿಡೆನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಕರ್ನಾಟಕದ ಮೈಸೂರಿನಿಂದ ಬಂದ ಶ್ರೀಗಂಧದ ಮರದ ಮೇಲೆ ಸಂಕೀರ್ಣವಾದ ಸಸ್ಯ ಮತ್ತು ಪ್ರಾಣಿಗಳ ಚಿತ್ರಗಳನ್ನು ಕೆತ್ತಲಾಗಿದೆ.
ಪೆಟ್ಟಿಗೆಯಲ್ಲಿ ಏನೇನಿದೆ?
ಈ ಪೆಟ್ಟಿಗೆಯಲ್ಲಿ ಗಣೇಶನ ಒಂದು ಬೆಳ್ಳಿಯ ಮೂರ್ತಿ, ಒಂದು ಬೆಳ್ಳಿಯ ಹಣತೆ, ಒಂದು ತಾಮ್ರ ಪತ್ರ, ದಶ ದಾನ ಸೂಚಿಸುವ ಹತ್ತು ಬೆಳ್ಳಿಯ ಸಣ್ಣ ಪೆಟ್ಟಿಗೆಗಳಿವೆ.
ಗಣೇಶನ ಈ ಬೆಳ್ಳಿಯ ವಿಗ್ರಹವನ್ನು ಕೋಲ್ಕತ್ತಾದ ಬೆಳ್ಳಿಯ ಅಕ್ಕಸಾಲಿಗರ ಕುಟುಂಬದ ಐದನೇ ತಲೆಮಾರಿನ ಸದಸ್ಯರು ಕರಕುಶಲತೆಯಿಂದ ತಯಾರಿಸಿದ್ದಾರೆ. ಗಣೇಶನನ್ನು ವಿಘ್ನನಾಶಕ ಮತ್ತು ಎಲ್ಲಾ ದೇವರುಗಳಲ್ಲಿ ಮೊದಲು ಪೂಜಿಸುವವನು ಎಂದು ಪರಿಗಣಿಸಲಾಗಿದೆ.
ಹಿಂದೂ ಸಮಾಜದವರು ಪ್ರತಿ ದಿನ ದೀಪ ಬೆಳಗುವ ಸಂಪ್ರದಾಯವಿದೆ. ಈ ಬೆಳ್ಳಿ ಹಣತೆಯನ್ನು ಕೋಲ್ಕತ್ತಾದ ಬೆಳ್ಳಿಯ ಅಕ್ಕಸಾಲಿಗರ ಕುಟುಂಬದ ಐದನೇ ತಲೆಮಾರಿನ ಸದಸ್ಯರು ತಯಾರಿಸಿದ್ದಾರೆ.
ಪೆಟ್ಟಿಗೆಯಲ್ಲಿರುವ ಮತ್ತೊಂದು ವಸ್ತುವಾದ ತಾಮ್ರಪತ್ರವನ್ನು ಉತ್ತರ ಪ್ರದೇಶದಿಂದ ತರಿಸಲಾಗಿದೆ. ಅದರ ಮೇಲೆ ಶ್ಲೋಕವನ್ನು ಕೆತ್ತಲಾಗಿದೆ. ಪ್ರಾಚೀನ ಕಾಲದಲ್ಲಿ, ತಾಮ್ರ-ಪತ್ರವನ್ನು ಬರೆಯಲು ಮತ್ತು ದಾಖಲೆಗಳನ್ನು ಇರಿಸಲು ಮಾಧ್ಯಮವಾಗಿ ವ್ಯಾಪಕವಾಗಿ ಬಳಸಲಾಗುತ್ತಿತ್ತು.
ದಶ ದಾನಗಳು
ಗೋದಾನ: ಪಶ್ಚಿಮ ಬಂಗಾಳದ ನುರಿತ ಕುಶಲಕರ್ಮಿಗಳಿಂದ ಸಂಕೀರ್ಣವಾದ ಕರಕುಶಲ ಬೆಳ್ಳಿ ತೆಂಗಿನಕಾಯಿಯನ್ನು ಕೆತ್ತಿದ್ದಾರೆ. ಗೋವಿನ ದಾನದಲ್ಲಿ ಹಸುವಿನ ಬದಲಿಗೆ ಇದನ್ನು ನೀಡಲಾಗುತ್ತದೆ.
ಭೂಮಿ ದಾನ: ಭೂದಾನಕ್ಕೆ ಭೂಮಿಯ ಬದಲಾಗಿ ಕರ್ನಾಟಕದ ಮೈಸೂರಿನಿಂದ ತಂದ ಪರಿಮಳಯುಕ್ತ ಶ್ರೀಗಂಧದ ತುಂಡನ್ನು ನೀಡಲಾಗಿದೆ.
ತಿಲ ದಾನ: ತಮಿಳುನಾಡಿನ ತಿಲ ಅಥವಾ ಬಿಳಿ ಎಳ್ಳನ್ನು ತಿಲ ದಾನದ ರೂಪವಾಗಿ ನೀಡಲಾಗುತ್ತದೆ.
ಸ್ವರ್ಣ ದಾನ: ರಾಜಸ್ಥಾನದಲ್ಲಿ ಕರಕುಶಲಿಗಳು ತಯಾರಿಸಿದ ಈ 24 ಕ್ಯಾರಟ್ ಹಾಲ್ಮಾರ್ಕ್ ಚಿನ್ನದ ನಾಣ್ಯವನ್ನು ಸ್ವರ್ಣ ದಾನ ಎಂದು ನೀಡಲಾಗುತ್ತದೆ.
ತುಪ್ಪ ದಾನ: ಪಂಜಾಬ್ ನಿಂದ ತಂದ ತುಪ್ಪವನ್ನು ಈ ಪೆಟ್ಟಿಗೆಯಲ್ಲಿಟ್ಟು ದಾನವಾಗಿ ನೀಡಲಾಗುತ್ತದೆ.
ವಸ್ತ್ರ ದಾನ: ಜಾರ್ಖಂಡ್ ನಿಂದ ಕೈಯಿಂದ ನೇಯ್ದ ರಚನೆಯ ಟಸ್ಸಾರ್ ರೇಷ್ಮೆ ಬಟ್ಟೆಯನ್ನು ವಸ್ತ್ರದಾನಕ್ಕಾಗಿ ಅರ್ಪಿಸಲಾಗುತ್ತದೆ.
ಬೆಲ್ಲ ದಾನ: ಮಹಾರಾಷ್ಟ್ರದ ಬೆಲ್ಲವನ್ನು ಗುಡ್ಡಾನ್ (ಬೆಲ್ಲದ ದಾನ) ಗಾಗಿ ನೀಡಲಾಗುತ್ತದೆ.
ಧಾನ್ಯ ದಾನ: ಉತ್ತರಾಖಂಡದ ಉದ್ದನೆಯ ಅಕ್ಕಿಯನ್ನು ಧಾನ್ಯ ದಾನಕ್ಕೆ (ಆಹಾರ ಧಾನ್ಯಗಳ ದಾನ) ಅರ್ಪಿಸಲಾಗುತ್ತದೆ.
ಬೆಳ್ಳಿ ದಾನ: 99.5 ಪ್ರತಿಶತ ಶುದ್ಧ ಮತ್ತು ಹಾಲ್ ಮಾರ್ಕ್ ಬೆಳ್ಳಿಯ ನಾಣ್ಯವನ್ನು ರಾಜಸ್ಥಾನದ ಕುಶಲಕರ್ಮಿಗಳು ಕಲಾತ್ಮಕವಾಗಿ ರಚಿಸಿದ್ದಾರೆ. ಇದನ್ನು ಬೆಳ್ಳಿಯ ದಾನ ಎಂದು ನೀಡಲಾಗುತ್ತದೆ.
ಲವಣ ದಾನ: ಗುಜರಾತಿನ ಉಪ್ಪನ್ನು ಲವಣ ದಾನವಾಗಿ ನೀಡಲಾಗುತ್ತದೆ.
ಉಡುಗೊರೆ 2: ‘ಟೆನ್ ಪ್ರಿನ್ಸಿಪಲ್ ಉಪನಿಷದ್ಸ್’ ಎಂಬ ಪುಸ್ತಕ
ಯುಎಸ್ ಅಧ್ಯಕ್ಷ ಬಿಡೆನ್ ಯಾವಾಗಲೂ ಐರಿಶ್ ಕವಿ ವಿಲಿಯಂ ಬಟ್ಲರ್ ಯೀಟ್ಸ್ ಬಗ್ಗೆ ತಮ್ಮ ಮೆಚ್ಚುಗೆಯನ್ನು ತೋರಿಸಿದ್ದಾರೆ. ಅಧ್ಯಕ್ಷ ಬಿಡೆನ್ ಆಗಾಗ್ಗೆ ಯೀಟ್ಸ್ ಕವನಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಯೀಟ್ಸ್ ಅವರಿಗೆ ಭಾರತೀಯ ಆಧ್ಯಾತ್ಮಿಕತೆಯ ಬಗ್ಗೆ ಯೀಟ್ಸ್ ಅವರ ಮೆಚ್ಚುಗೆ ಸೂಚಿಸಿದ್ದರು. ಅವರು ಭಾರತದ ಉಪನಿಷತ್ತುಗಳು ಮತ್ತು ಇತರ ಪ್ರಾಚೀನ ಪುರಾಣಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು. 1937ರಲ್ಲಿ ಯೀಟ್ಸ್ ಅವರು ಉಪನಿಷತ್ತುಗಳ ಇಂಗ್ಲೀಷ್ ಅನುವಾದದ ಪುಸ್ತಕ ಬರೆದಿದ್ದರು. ಇದೀಗ ಪ್ರಧಾನಿ ಮೋದಿ ಅವರು ಈ ಪುಸ್ತಕದ ಮೊದಲ ಮುದ್ರಣದ ಪ್ರತಿಯನ್ನು ಬೋ ಬಿಡೆನ್ ಅವರಿಗೆ ನೀಡಿದ್ದಾರೆ.
ಜಿಲ್ ಬಿಡೆನ್ ಗೆ ನೀಡಿದ ಉಡುಗೊರೆಗಳು
ಉಡುಗೊರೆ 1: ಲ್ಯಾಬ್ ನಲ್ಲಿ ತಯಾರಿಸಿದ 7.5 ಕ್ಯಾರೆಟ್ ಹಸಿರು ವಜ್ರ
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರಿಗೆ ಪ್ರಯೋಗಾಲಯದಲ್ಲಿ ಬೆಳೆಸಿದ 7.5 ಕ್ಯಾರೆಟ್ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದರು. ಈ ಹಸಿರು ವಜ್ರವನ್ನು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೆತ್ತಲಾಗಿದೆ. ಇದು ಪ್ರತಿ ಕ್ಯಾರೆಟ್ ಗೆ ಕೇವಲ 0.028 ಗ್ರಾಂ ಕಾರ್ಬನ್ ಅನ್ನು ಹೊರಸೂಸುತ್ತದೆ. ಜೆಮಲಾಜಿಕಲ್ ಲ್ಯಾಬ್, IGI ನಿಂದ ಪ್ರಮಾಣೀಕರಿಸಲ್ಪಟ್ಟಿದೆ.
ಇದು ಭಾರತದ 75 ವರ್ಷಗಳ ಸ್ವಾತಂತ್ರ್ಯ ಮತ್ತು ಸುಸ್ಥಿರ ಅಂತಾರಾಷ್ಟ್ರೀಯ ಸಂಬಂಧಗಳನ್ನು ಸಂಕೇತಿಸುವ ಉಡುಗೊರೆಯಾಗಿದೆ.
ಉಡುಗೊರೆ 2: ಪಪಿಯೆ ಮಶೆ ಪೆಟ್ಟಿಗೆ (Papier Mache Box)
ಪ್ರಧಾನಿ ಮೋದಿ ಅವರು ಸಣ್ಣ ಅಮೂಲ್ಯ ವಸ್ತುಗಳನ್ನು, ಚಿನ್ನವನ್ನು ಇಡಲು ಬಳಸುವ ಪಪಿಯೆ ಮಶೆ ಪೆಟ್ಟಿಗೆಯನ್ನು ಜಿಲ್ ಬಿಡೆನ್ ಗೆ ಉಡುಗೊರೆಯಾಗಿ ನೀಡಿದರು.
ಕಾರ್-ಎ-ಕಲಮ್ದಾನಿ ಎಂದು ಕರೆಯಲ್ಪಡುವ ಕಾಶ್ಮೀರದ ಸೊಗಸಾದ ಪೇಪಿಯರ್ ಮ್ಯಾಚೆಯು ಸಕ್ತ್ಸಾಜಿ ಅಥವಾ ಕಾಗದದ ತಿರುಳು ಮತ್ತು ನಕ್ಖಾಶಿಯ ತಯಾರಿಕೆಯನ್ನು ಒಳಗೊಂಡಿರುತ್ತದೆ. ಅಲ್ಲಿ ನುರಿತ ಕುಶಲಕರ್ಮಿಗಳು ವಿಸ್ತಾರವಾದ ವಿನ್ಯಾಸಗಳನ್ನು ಚಿತ್ರಿಸುತ್ತಾರೆ.
ಪ್ರಧಾನಿ ಮೋದಿಗೆ ನೀಡಿದ ಉಡುಗೊರೆ ಏನು?
ಅಧಿಕೃತ ಉಡುಗೊರೆಯಾಗಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ, ಪ್ರಧಾನಿ ಮೋದಿಯವರಿಗೆ 20 ನೇ ಶತಮಾನದ ಆರಂಭದ ಕೈಯಿಂದ ಮಾಡಿದ, ಪುರಾತನವಾದ ಅಮೇರಿಕನ್ ಪುಸ್ತಕದ ಗ್ಯಾಲಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ಅವರು ಮೋದಿಯವರಿಗೆ ವಿಂಟೇಜ್ ಅಮೇರಿಕನ್ ಕ್ಯಾಮೆರಾವನ್ನು ಉಡುಗೊರೆಯಾಗಿ ನೀಡುತ್ತಾರೆ, ಜೊತೆಗೆ ಜಾರ್ಜ್ ಈಸ್ಟ್‌ಮನ್ ಅವರ ಮೊದಲ ಕೊಡಾಕ್ ಕ್ಯಾಮೆರಾದ ಪೇಟೆಂಟ್‌ನ ಆರ್ಕೈವಲ್ ಫ್ಯಾಕ್ಸಿಮೈಲ್ ಪ್ರಿಂಟ್, ಅಮೇರಿಕನ್ ವನ್ಯಜೀವಿ ಛಾಯಾಗ್ರಹಣದ ಹಾರ್ಡ್ ಕವರ್ ಪುಸ್ತಕ ಮತ್ತು ‘ಕಲೆಕ್ಟೆಡ್ ಪೊಯಮ್ಸ್ ಆಫ್ ರಾಬರ್ಟ್ ಫ್ರಾಸ್ಟ್’ ನ ಸಹಿ ಮಾಡಿದ ಮೊದಲ ಆವೃತ್ತಿಯ ಪ್ರತಿಯನ್ನು ಉಡುಗೊರೆಯಾಗಿ ನೀಡುತ್ತಾರೆ ಎಂದು ವೈಟ್ ಹೌಸ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.