ಇಂಧನ ಭದ್ರತೆಗೆ ಪ್ರಾಶಸ್ತ್ಯ; ಪ್ರವಾಸದ ಬಗ್ಗೆ ಪ್ರಧಾನಿ ಮಾಹಿತಿ
Team Udayavani, Feb 8, 2018, 6:09 PM IST
ದುಬೈ: ಇಂಧನ ಭದ್ರತೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ವಿಚಾರಗಳು ಇದೇ ವಾರಾಂತ್ಯಕ್ಕೆ ಕೈಗೊಳ್ಳಲಿರುವ ಮೂರು ರಾಷ್ಟ್ರಗಳ ಪ್ರವಾಸದ ವೇಳೆ ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಫೆ. 9ರಿಂದ ಆರಂಭವಾಗಲಿರುವ ಅವರ ಪ್ರವಾಸದಲ್ಲಿ ಯುಎಇ, ಪ್ಯಾಲೆಸ್ತೀನ್ ಹಾಗೂ ಒಮನ್ ರಾಷ್ಟ್ರಗಳಿಗೆ ತೆರಳಲಿದ್ದಾರೆ.
ಈ ಕುರಿತಂತೆ, “ಗಲ್ಫ್ ನ್ಯೂಸ್ ಎಕ್ಸ್‌ಪ್ರೆಸ್’ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ, ಮೂರು ರಾಷ್ಟ್ರಗಳ ಪ್ರವಾಸದ ವೇಳೆ, ಸರ್ಕಾರ-ಸರ್ಕಾರ ಹಾಗೂ ಉದ್ದಿಮೆ-ಉದ್ದಿಮೆ ನಡುವಿನ ಸಹಕಾರಕ್ಕೆ ಒತ್ತು ನೀಡಲಾಗುವುದು ಎಂದರು.
ಜನರ ಜೀವನವನ್ನು ಸುಲಭಗೊಳಿಸುವ ತಂತ್ರಜ್ಞಾನಗಳ ಬೆಳವಣಿಗೆಗೆ ತಾವು ಮಹತ್ವ ನೀಡುವುದಾಗಿ ಅವರು ಇದೇ ವೇಳೆ ತಿಳಿಸಿದರು. 2015ರಲ್ಲಿ ಮೋದಿ ಅವರು ಯುಎಇಗೆ ಭೇಟಿ ನೀಡಿದ ತರುವಾಯ ಭಾರತದಲ್ಲಿ ಆ ದೇಶದ ಹೂಡಿಕೆ 1 ಲಕ್ಷ ಕೋಟಿ ರೂ.ಗಳಿಗೆ ಏರಿದೆ. ಇದರ ಬೆನ್ನಲ್ಲೇ, ಕಳೆದ ವರ್ಷದ ಗಣರಾಜ್ಯೋತ್ಸವಕ್ಕೆ ಮುಖ್ಯಅತಿಥಿಯಾಗಿ ಯುಎಇ ಉಪರಾಷ್ಟ್ರಪತಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ಟೌಮ್ ಆಗಮಿಸಿದ್ದು ದ್ವಿಪಕ್ಷೀಯ ಸಂಬಂಧಗಳ ಹೆಚ್ಚಿನ ವೃದ್ಧಿಗೆ ಮತ್ತಷ್ಟು ಒತ್ತು ನೀಡಿತು.
ಇದೇ ವೇಳೆ, ಯುಎಇನಲ್ಲಿರುವ 30 ಲಕ್ಷ ಭಾರತೀಯರಲ್ಲಿ ತಮ್ಮ ಈ ಭೇಟಿ ಆತ್ಮವಿಶ್ವಾಸವನ್ನು ತರಲಿದೆಯೆಂಬ
ಆಶಾವಾದವನ್ನೂ ಮೋದಿ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.