POK; ಪಾಕ್ ವಿರುದ್ಧ ಬೂದಿ ಮುಚ್ಚಿದ ಕೆಂಡ : 4ನೇ ದಿನವೂ ಮುಂದುವರಿದ ಪ್ರತಿಭಟನೆ
23 ಶತಕೋಟಿ ರೂ.ನೆರವು ಘೋಷಿಸಿದ ಪಾಕ್ ಪ್ರಧಾನಿ
Team Udayavani, May 14, 2024, 6:45 AM IST
ಇಸ್ಲಾಮಾಬಾದ್: ಪಾಕಿಸ್ಥಾನ ಸರಕಾರದ ಅನ್ಯಾಯದ ವಿರುದ್ಧ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಸೋಮವಾರ 4ನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಮಧ್ಯೆ, ಪಿಒಕೆಯನ್ನು ಭಾರತದೊಂದಿಗೆ ಸೇರಿಸುವ ಒತ್ತಡವೂ ಕೇಳಿ ಬರುತ್ತಿದೆ.
ಶನಿವಾರ ಮತ್ತು ರವಿವಾರ ನಡೆದ ಸಂಘ ರ್ಷದಲ್ಲಿ ಒಬ್ಬ ಪೊಲೀಸ್ ಮೃತಪಟ್ಟು, ಕನಿಷ್ಠ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಶುಕ್ರ ವಾರದಿಂದ ಈ ಪ್ರದೇಶದಲ್ಲಿ ಮುಷ್ಕರ ಘೋಷಿ ಸಲಾಗಿದ್ದು, ಜನಜೀವನ ಸಂಪೂರ್ಣವಾಗಿ ಸ್ಥಗಿತ ವಾಗಿದೆ. ಪ್ರತಿಭಟನೆಗೆ ಕರೆ ನೀಡಿರುವ ಜಮ್ಮು -¤ ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿ(ಜೆಎಎಸಿ) ಸೋಮವಾರ ಪಿಒಕೆ ರಾಜಧಾನಿ ಮುಜಫ#ರಾ ಬಾದ್‌ನಲ್ಲಿ ಪ್ರತಿಭಟನರ್ಯಾಲಿ ನಡೆಸಿತು.
ಪಿಒಕೆ ಪ್ರತಿಭಟನ ಪೀಡಿತ ಪ್ರದೇಶಗಳಲ್ಲಿ ವಿಶೇ ಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಂದೋ ಬಸ್ತ್ ಕೈಗೊಳ್ಳಲಾಗಿದೆ. ಮಾರುಕಟ್ಟೆಗಳು, ವ್ಯಾಪಾರ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸರಕಾರಿ ಕಚೇರಿಗಳೂ ಸೋಮವಾರವೂ ಬಂದ್ ಆಗಿದ್ದವು.
23 ಶತಕೋಟಿ ರೂ. ಬಿಡುಗಡೆ: ಪಿಒಕೆ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಪಾಕಿಸ್ಥಾನ ಪ್ರಧಾನಿ ಶಹಬಾಜ್ ಷರೀಫ್ ಅವರು 23 ಶತಕೋಟಿ ರೂ.ಬಿಡುಗಡೆಗೆ ಒಪ್ಪಿಗೆ ನೀಡಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಪಿಒಕೆ ಪ್ರಧಾನಿ ಚೌಧರಿ ಅನ್ವರುಲ್ ಹಕ್, ಸ್ಥಳೀಯ ಸಚಿವರು ಮತ್ತು ರಾಜಕೀಯ ಪಕ್ಷಗಳ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಏಕೆ ಪ್ರತಿಭಟನೆ?: ಗೋಧಿ ಹಿಟ್ಟು ಬೆಲೆ ದುಬಾರಿ, ಹೆಚ್ಚುತ್ತಿರುವ ವಿದ್ಯುತ್ ದರ, ನ್ಯಾಯಸಮ್ಮತ
ಲ್ಲದ ತೆರಿಗೆ ಹೇರಿಕೆ, ಉನ್ನತ ವರ್ಗದವರಿಗೆ ವಿಶೇಷ ಸವಲತ್ತು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನಿವಾರಣೆಗೆ ಆಗ್ರಹಿಸಿ ಜನರು ಬೀದಿಗಿಳಿದಿದ್ದಾರೆ.
ಜಮ್ಮು – ಕಾಶ್ಮೀರ ಜಂಟಿ ಆವಾಮಿ ಕ್ರಿಯಾ ಸಮಿತಿಯು ಪ್ರತಿಭಟನೆಯ ನೇತೃತ್ವವನ್ನು ವಹಿಸಿದೆ.
ಪಿಒಕೆ ಎಂದೆಂದಿಗೂ ಭಾರತದ್ದೇ: ಜೈಶಂಕರ್
ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಭಾಗವಾಗಿತ್ತು, ಆಗಿದೆ ಮತ್ತು ಮುಂದೆಯೂ ಆಗಿರಲಿದೆ ಎಂದು ಭಾರತೀಯ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಪಿಒಕೆಯಲ್ಲಿ ಪ್ರತಿಭಟನೆ ನಡೆಯುತ್ತಿವೆ. ನಮ್ಮ ಉದ್ದೇಶ ಕೂಡ ಪಿಒಕೆಯನ್ನು ಭಾರತದ ಜತೆ ಮರಳಿ ಸೇರಿಸುವುದಾಗಿದೆ ಎಂದು ಸರಕಾರದ ಇಂಗಿತವನ್ನು ಬಹಿರಂಗಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.